-->

Part 150 - Jokes , Fun , Haasya , Humor , Quotes , Greetings

 ಮೂರ್ ದಿನ ಆಗಿತ್ತು. ಹೆಂಡತಿ ಗಂಡನ ಜೊತೆ ಠೂ ಬಿಟ್ಟು...

ಎಷ್ಟೂಂತ ಬಾಯಿ ಮುಚ್ಕೊಂಡಿರಕಾಗುತ್ತೆ ಹೆಂಡತಿ. ಬಾಯಿ ನೋಯಕ್ಕೆ ಶುರುವಾಯ್ತು.

ಕಡೆಗೆ ಹೆಂಡತಿ ಅಂದ್ಲು:

"ಏನೋ ಗಂಡ ಹೆಂಡತಿ ಅಂದ್ರೆ ಒಂದ್ ಮಾತು ಬರುತ್ತೆ ಹೋಗುತ್ತೆ. ಅದಕ್ಕೇ ಇಷ್ಟ್ ದಿನ ಬಾಯ್ಮುಚ್ಕೊಂಡಿರ್ಬೇಕಾ?? 😠😠😠 ಇವಾಗ ನಾನು ಹತ್ತರವರೆಗೂ ಎಣಿಸ್ತೀನಿ. ಮಾತಾಡಿಲ್ಲಾಂದ್ರೆ ನಮ್ಮಮ್ಮನ ಮನೆಗೆ ಹೋಗ್ತೀನಿ ಅಷ್ಟೇ 😠😠😠"

ಹತ್ ನಿಮಿಷ ಆದ್ರೂ ಗಂಡ ಕಿಮಕ್ಕನ್ಲಿಲ್ಲ.

ಹೆಂಡತಿ ಎಣಿಸೋಕೆ ಶುರು ಹಚ್ಕೊಂಡ್ಲು.

...
...

ಒನ್..

ಟೂ...

ಥ್ರೀ..

ಉಹೂಂ. ಗಂಡ ಗಪ್ ಚುಪ್
 😷😷

ಹೆಂಡತಿ ಹತ್ತು ನಿಮಿಷ ಬಿಟ್ಟು...

ಫೋರ್..

ಫೈವ್...

ಅಂದ್ಲು. 😠😠

ಗಂಡ... ಉಹೂಂ. ಬಾಯಿ ಬಿಡಲಿಲ್ಲ.

ಸಿಕ್ಸ್...

ಸೆವೆನ್.. 😵😧😧

(ಗಂಡ ಒಳಗೊಳಗೇ ಹಿಗ್ಗಿ ಹೀರೇಕಾಯಿ ಆಗಿದ್ದರೂ ತೋರಿಸಿಕೊಳ್ಳಲಿಲ್ಲ). 😷😷

ಕ್ಲೈಮ್ಯಾಕ್ಸು....

ಎಯ್ಟ್

ಅಂದ್ಲು ಹೆಂಡತಿ.

ಉಹೂಂ.. ಗಂಡ ಚುಪ್ ಚಾಪ್.

ನೈನ್..

(ಗಂಡಂಗೆ ಎದ್ದು ಕುಣಿಯೋಷ್ಟು ಖುಷಿ).

ಹೆಂಡತಿ ಏನ್ಮಾಡಿದ್ಲು ಅಂದ್ರೆ...

ಬಾಯಿ ಬಿಡಲಿಲ್ಲ.

ಹೆಂಡತಿ ಈಗ ಫುಲ್ ಸೈಲೆಂಟು.

🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊🙊

...
ಗಂಡಂಗೆ ಟೆನ್ಷನ್ನಾಗೋಯ್ತು.

ಹತ್ತು ನಿಮಿಷ ಕಾದ್ರು.

ತಡೆಯೋಕಾಗ್ದೆ

" ಲೇಯ್.. ಯಾಕೆ ನಿಲ್ಲಿಸ್ದೆ?? ಎಣಿಸೂ.. ಟೆನ್ ಅಂತ್ಹೇಳು" ಅಂದ್ರು. 😳😳😳😵

ಹೆಂಡತಿ ಅಂದ್ಲು.

"ಅಬ್ಬಾ!! ದೇವ್ರು ದೊಡ್ಡೋನು ಕಂಡ್ರೀ.... ಬಾಯಿ ಬಿಟ್ರಿ. ಇಲ್ದಿದ್ದರೆ ನಮ್ಮಮ್ಮನ ಮನೆಗೆ ಹೋಗ್ತಿದ್ದೆ. ಪಾಪ ನಿಮಗೆಷ್ಟು ತೊಂದರೆ ಆಗ್ತಿತ್ತು!!! ತಾಳಿ ಇದೇ ಖುಷೀಲಿ ಪಾಯಸ ಮಾಡ್ತೀನಿ 🏃🏃🏃" ಅಂತ ಕಿಚನ್ನಿಗೆ ಹೋದ್ಲು...
..

😭😳😟

ಗಂಡ ಈ ಘಟನೆಯನ್ನು ತನ್ನ ಆತ್ಮಚರಿತ್ರೆಯಲ್ಲಿ "ತಾಳ್ಮೆ ಕಳೆದುಕೊಳ್ಳುವುದರಿಂದ ಆಗುವ ಅನಾಹುತಗಳು" ಅಧ್ಯಾಯದಲ್ಲಿ ಸೇರಿಸಲಿದ್ದಾನಂತೆ.
😊😊

 

*********

ಗುಂಡಣ್ಣ ಫ್ಲಿಪ್ ಕಾರ್ಟ್ ಗೆ ಫೋನ್ ಮಾಡಿದ.
ಹಲೋ  ಇದು ಫ್ಲಿಪ್ ಕಾರ್ಟ್ ಅವರ ಆಫೀಸ್ ತಾನೇ?
ಫ್ಲಿಪ್  ಕಾರ್ಟ್: ಹೌದು ಸರ್, ಹೇಳಿ ನಮ್ಮಿಂದ ಏನು ಸಹಾಯ ಬೇಕು
ಗುಂಡಣ್ಣ : ಇವತ್ತು ನನ್ನ ಶ್ರೀಮತಿಗೆ ಡೆಲಿವರಿ ಆಗಿದೆ. ನಮಗೆ ಮುದ್ದಾದ ಗಂಡು ಮಗು ಹುಟ್ಟಿದೆ. ಈ ಸಂತೋಷದ ಸುದ್ದಿ ನಿಮಗೆ ತಿಳಿಸೋಣ ಅಂತ ಫೋನ್ ಮಾಡಿದೆ
ಫ್ಲಿಪ್ ಕಾರ್ಟ್: ತುಂಬಾ ಸಂತೋಷ್ ಸರ್, ನಿಮಗೂ ಮತ್ತು ನಿಮ್ಮ ಮನೆಯವರಿಗೆ ನಮ್ಮ ಅಭಿನಂದನೆಗಳು. ಆದರೆ ನಮ್ಮಿಂದ ತಮಗೆ ಏನು ಸೇವೆ ಆಗಬೇಕು ತಿಳಿಸಿ
ಗುಂಡಣ್ಣ: ಹೆಚ್ಚಿನ ವಿಶೇಷ ಏನಿಲ್ಲಾ, ನನ್ನ ಬ್ಯಾಂಕಿನ ಖಾತೆಯ ನಂಬರ್ ಬರೆದು ಕೊಳ್ರಿ, ಮತ್ತ ಲಗೂನ ಅದಕ್ಕ ರೊಕ್ಕಾ ಜಮಾ ಮಾಡ್ರಿ.
ಫ್ಲಿಪ್ ಕಾರ್ಟ್: ಸರ್ ನಿಮಗ ಏನೋ ಕನ್ಫ್ಯೂಸ್ ಆಗ್ಯದ ಅನಸ್ತದ, ರೊಕ್ಕಾ ನಿಮ್ಮ ಖಾತೆಗೆ ನಾವ್ಯಾಕ ಜಮಾ ಮಾಡಬೇಕು ಹೇಳ್ರಿ
ಗುಂಡಣ್ಣ: ಭಾಳ ಜಾಣ ನ ಹಂಗ ಮಾತಾಡ್ತಿಯಪಾ, ಅಲ್ಲಾ ಮತ್ತ ಊರ ತುಂಬಾ 'ಕ್ಯಾಶ್ ಆನ್ ಡೆಲಿವರಿ' ಅಂತ ದೊಡ್ಡ ದೊಡ್ಡ ಬೋರ್ಡ್ ಯಾಕೆ ಹಾಕಿರಿ, ಅದನ್ನ ಹೇಳ್ರಿ
ಫ್ಲಿಪ್ ಕಾರ್ಟ್ ಮೂರ್ಛೆ ಹೋದವನು ಇನ್ನು ಎದ್ದಿಲ್ಲ.
😁😁😁😁😁😁😁😁 

*********

Part 150 - Jokes , Fun , Haasya , Humor , Quotes , Greetings

 

 

*ನ್ಯೂ ವರ್ಷನ್ ಗಾದೆಗಳು.!!


● ಕೈಗೆ ಸ್ಯಾನಿಟೈಸರಾದರೆ., 👏🏻 ಬಾಯಿಗೆ ಮಾಸ್ಕು..😷

● ಒಗ್ಗಟ್ಟಿನಲ್ಲಿ ಕರೋನ ಇದೆ..!🤔😳

● ಉಪ್ಪಿಗಿಂತ ರುಚಿಯಿಲ್ಲ.,😛 ವೈದ್ಯರಿಗಿಂತ👨🏻‍⚕️ ದೇವರಿಲ್ಲ..👆🏼🙏🏻

● ಮಾತು ಆಡಿದರೆ ಹೋಯ್ತು., 😏ಮುತ್ತು ಕೊಟ್ಟರೆ ಹೊಯ್ತು..😘🥵

● ಕೊರೋನಾದಿಂದ ಕೆಟ್ಟು ಹಳ್ಳಿ ಸೇರು..🙃😇

● ಮಾತು ಬಲ್ಲವನಿಗೆ ಜಗಳವಿಲ್ಲ., 🧐🤩ಮಾಸ್ಕ್ ಧರಿಸಿವನಿಗೆ ರೋಗವಿಲ್ಲ..😷😍

● ಮಾತು ಮನೆ ಕೆಡುಸ್ತು.,😒🏡 ಕರೋನ ಪ್ರಪಂಚ ಕೆಡುಸ್ತು..🥳🌃🌆🌇

● ಮನೇಲಿದ್ದೋನೆ🏡👆🏼👍🏻💪🏻🤷🏻‍♂️ ಮಹಾಶೂರ., ಹೊರಗ್ ಹೋದವ ಹರೋಹರ..🛵🚘🙃😇🏥😤🥺🥶

● ಬೆಂಗಳೂರಿನಿಂದ ಬಂದಾಗ ಹೋದ ಮಾನ.,😩😫 ಮಾಸ್ಕ್,😷 ಸ್ಯಾನಿಟೈಸರ್,👏🏻  ಹಾಕ್ಕೊಂಡು ತಿರುಗಿದರೂ🚶🏻‍♂️ ಬಾರದು..🙆🏻‍♂️

● ಮಾಸ್ಕು ಬೆಳ್ಳಿ.,😷 Distance ಬಂಗಾರ..!🏃🏻‍♂️🧍🏻

● ಉಪ್ಪಿಗಿಂತ ರುಚಿ ಇಲ್ಲ.,😋 ಕರೋನಗಿಂತ ರೋಗವಿಲ್ಲ..!🥵😡🥶

● ಹಾಕೋಳ್ಳೋಕೆ ಹೊಸಾ ಚೆಡ್ಡಿ ಇಲ್ಲಾಂದ್ರೂ., 🩳🩲ಮುಖಕ್ಕೆ ಮಾಸ್ಕ್, 😷ಕೈಗೆ ಸಾನಿಟೈಜರ್,👏🏻 ಇರ್ಲೇಬೇಕಂತೆ..🤷🏻‍♂️😎

● ಪ್ಲೇಗಿಗೊಂದು ಕಾಲ.,🙊 ಕರೊನಕ್ಕೊಂದು ಕಾಲ..🐡❄️

● ಕೆಮ್ಮಿದ್ದೆಲ್ಲಾ ಕೊರೋನಾ ಅಲ್ಲ., 🤤😪ಕೈಲಿದ್ದಿದ್ದೆಲ್ಲಾ ಸ್ಯಾನಿಟೈಝರ್ ಅಲ್ಲ..👊🏻👎🏻👏🏻😸😹

● ಸುಮ್ಮನೆ ಇರಲಾರದೆ., 😙 ಕೊರೋನಾ❄️🐡 ಬಿಟ್ಕೋಂಡ್ರಂತೆ..🙆🏻‍♂️

● ಕರೀನಾಗೊಂದು ಕಾಲ,💃🏻🤷🏻‍♀️ ಕೊರೊನಾಗೊಂದು ಕಾಲ..❄️🐡🤷🏻‍♂️

● ಬೀದೀಲಿ ಕೆಮ್ಮಿ ನೋಡು., 🥵😡ಹಾದೀಲಿ ಸೀನಿ ನೋಡು..😪😤 


******************

ಈ ಲಾಕ್ಡೌನ್ ಒಂಥರಾ ಡಿಫರೆಂಟ್
ಎಷ್ಟು ಬೇಕಾದ್ರೂ ಲಿಕ್ಕರ್ 🍺 ಸಿಗುತ್ತೆ,
ಆದ್ರೆ ಅರ್ಜೆಂಟ್ ಆಗಿ ಒಂದು ನಿಕ್ಕರ್ 🩳 ಬೇಕು ಅಂದ್ರು ಸಿಗಲ್ಲ......
😂😂😂😂😂


ಮದುವೆಗೆ ಅವಕಾಶ ಇದೆ ಅಂತೆ....
ಆದ್ರೆ,
ಬಟ್ಟೆ ಅಂಗಡಿ 👕,
ಆಭರಣ ಅಂಗಡಿ 👑,
ಫ್ಯಾನ್ಸಿ ಅಂಗಡಿ 💄
ಎಲ್ಲವೂ ಬಂದ್... ಹಾಗಾದರೆ ಮದುಮಕ್ಕಳು ಬರ್ಮುಡಾ ಮತ್ತು ನೈಟಿ ಯಲ್ಲಿ ಮದುವೆ ಮಾಡಿಕೊಳ್ಳುವುದೇ.....
😂😂😂😂😂


ಎಣ್ಣೆ, ಬಾರ್, ರೆಸ್ಟೋರೆಂಟ್ ಬಂದ್
        ಹೆಂಡತಿ ಖುಷ್. 🙎🏻‍♀️
ಬೆಳ್ಳಿ, ಬಂಗಾರ, ಸೀರೆ ಅಂಗಡಿ ಬಂದ್
        ಗಂಡ ಖುಷ್.    🙎🏻‍♂️
ಸ್ಕೂಲ್, ಕಾಲೇಜ್ ಬಂದ್
    ಮಕ್ಕಳು ಖುಷ್.    👯🏻‍♀️
ಒಟ್ನಲ್ಲಿ ಸುಖ ಸಂಸಾರಕ್ಕೆ ಇನ್ನೂ ಏನ್ ಬೇಕು......
😂😂😂😂😂


ನಿಮ್ಮ ನೆಚ್ಚಿನ ಆಟ ಯಾವುದೂ !!?
  🤔🤔🤔🤔
ಸಧ್ಯಕ್ಕೆ.....    ಉಸಿರಾಟ
  😤😤😤😤
😂😂😂😂😂


ಸರ್ಕಾರ ಹೇಳಿದಾಂಗೆ ಮನೇಲಿ ಇದ್ರೆ
   "ಮೇ"    ನಲ್ಲಿ ಸಿಗೋಣ,
ವಿನಾ ಕಾರಣ ಮನೆ ಬಿಟ್ಟು ಹೊರಗೆ ಬಂದ್ರೆ     "ಮೇಲೆ"     ಸಿಗೋಣ.
😂😂😂😂😂


ಸಧ್ಯಕ್ಕೆ ಈಗ ಇರೋದು ಏರಡೇ ಕಾಲಗಳು..... 🤔🤔
ಒಳಗಡೆ ಇದ್ರೆ    "ಉಳಿಗಾಲ"       🏘️
ಹೊರಗಡೆ ಬಂದ್ರೆ "ಕೊನೆಗಾಲ"    🎡
😂😂😂😂😂

ಪ್ರೇಮಿಗಳು ಒಟ್ಟಿಗೆ ಇರೋ ದಿನ
"ವ್ಯಾಲೆಂಟೈನ್"  ❤️  ಡೇ.
ಮನೆ ಮಂದಿಯೆಲ್ಲಾ ಒಟ್ಟಿಗೆ ಇರೋ ದಿನ "ಕ್ವಾರಂಟೆನ್"  🏚️  ಡೇ.
😂😂😂😂😂

ಅಂದು ಯುದ್ಧ ⚔️⚔️ಮಾಡಿ ದೇಶವನ್ನು ಉಳಿಸಬೇಕಿತ್ತು.
ಆದ್ರೆ ಈ ಇಂದು ನಿದ್ದೆ 😴😴  ಮಾಡಿ ದೇಶವನ್ನು ಉಳಿಸುವ ಪರಿಸ್ಥಿತಿ ಬಂದಿದೆ.
😂😂😂😂😂


ಅಂತೂ ಇಂತೂ
"ಎಣ್ಣೆ  🍻    ಹಾಲು" 🥛
ಬೆಳಿಗ್ಗೆ ಒಟ್ಟಿಗೆ ತರೂ ಟೈಮ್ ಬಂತು.....
😂😂😂😂😂


ಇನ್ಮುಂದೆನೂ ಕೋರೋನಾ ತೊಲಗದೆ ಇದ್ರೆ ಬಿಲ್ಡರ್ಸ್ ಗಳು ಹೀಗೆ ಜಾಹೀರಾತು ನೀಡಬಹುದು.....
2 ಬೆಡ್ ರೂಮ್,
ಕಿಚನ್, ಹಾಲ್,
ಐಸೋಲೇಷನ್ ರೂಮ್,
ಆಕ್ಸಿಜನ್ ಪೈಪ್ ಲೈನ್, ಮತ್ತೆ ವೆಂಟಿಲೇಟರ್ ಸೌಲಭ್ಯ ಇದೆ". !!!!!
😂😂😂😂😂


ಏನ್ ಮಾಡಿದ್ರೂ ಟೈಮ್ ಪಾಸ್ ಆಗ್ತಾ ಇಲ್ಲಾ ಅಂದ್ರೆ.....
ನೀವೇ ನಟಿಸಿರುವ ,  ನಿಮ್ಮದೇ ಮೂವೀ
             " ನಿಮ್ಮ ಮದುವೆ "
ಸಿಡಿ ಹಾಕಿಕೊಂಡು ನೋಡಿ.... 😂
ಸತ್ಯ ಘಟನೆ ಆಧಾರಿತ ಚಿತ್ರ.
😂😂😂😂😂

–>