-->

ಕಾಡು ಸೇರಿದ ನಳ ದಮಯಂತಿ , ಮಹಾಭಾರತಸಾರ

ಒಂದು ದಿನ ರಾತ್ರಿ ನಳ ಮೂತ್ರ ವಿಸರ್ಜಿಸಿ ಕೈ ಕಾಲು ತೊಳೆಯದೇ ಹಾಗೆ ಮಲಗಿದ. ನಳನಲ್ಲಿ‌ ದೋಷಕ್ಕಾಗಿ ಬಹುದಿನದಿಂದ ಕಾಯುತ್ತಿದ್ದ ಕಲಿ ನಳನ ದೇಹದಲ್ಲಿ ಪ್ರವೇಶಿಸುತ್ತಾನೆ. ಅಲ್ಲಿಂದಲೇ ಶುರುವಾಯಿತು ಕಲಿ ಪ್ರಭಾವ.

ಒಂದು ದಿನ ನಳನ ಸಹೋದರ ಪುಷ್ಕರ ಅಣ್ಣನನ್ನು ಜೂಜಾಟಕ್ಕೆ ಕರೆದಿದ್ದಾನೆ. ಕಲಿ ಪ್ರಭಾವದಿಂದ ನಳ ಜೂಜಾಟಕ್ಕೆ ಸಿದ್ದ ನಾದ. ಪುಷ್ಕರನಲ್ಲಿ ದ್ವಾಪರ ಪ್ರವೇಶಿಸಿದ್ದರಿಂದ ಮೋಸದಿಂದ ಎಲ್ಲವನ್ನು ಗೆಲ್ಲುತ್ತಿದ್ದಾನೆ. ದಮಯಂತಿ ನಳನಿಗೆ ಎಚ್ಚರಿಕೆ ಕೊಟ್ಟಿದ್ದಾಳೆ. ಆದರೂ ನಳ ಜೂಜಾಟ ಮುಂದು ವರಿಸಿದ. ದಮಯಂತಿಯಲ್ಲಿ ಕರ್ತವ್ಯ ಪ್ರಜ್ಞೆ ಮೂಡಿದೆ. ಸಾರಥಿಯನ್ನು ಕರೆದು ಮಕ್ಕಳಿಬ್ಬರನ್ನೂ ತವರು ಮನೆಗೆ ಕಳಿಸಿದ್ದಾಳೆ. ಇತ್ತ ನಳ ಎಲ್ಲವನ್ನೂ ಸೋತಿದ್ದಾನೆ. ದಮಯಂತಿಯನ್ನು ಪಣಕ್ಕಿಡು ಎಂದು ತಮ್ಮ ಕೇಳಿದಾಗ ಮೊದಲು ಗಳಿಸಿದ ಪುಣ್ಯದ ಫಲವಾಗಿ ನಳ ನಿರಾಕರಿಸಿ ರಾಜವನ್ನೇ ತೊರೆದು ಹೆಂಡತಿ ಜತೆ ಕಾಡಿಗೆ ಹೊರಟ. ಮೂರು ದಿನವಾದರೂ ಕಾಡಿನಲ್ಲಿ ಆಹಾರ ಸಿಗಲಿಲ್ಲ. ಅಲ್ಲೊಂದು ಬಂಗಾರದ ಪಕ್ಷಿ ಕಂಡಿತು. ಅದನ್ನು ಹಿಡಿದು ಉಪಜೀವನ ಸಾಗಿಸಬೇಕು ಎಂದು ಮೈ ಮೇಲೆ ಇರುವ ಬಟ್ಟೆಯನ್ನು ಪಕ್ಷಿ ಮೇಲೆ ಹಾಕಿದ್ದಾನೆ. ಬಟ್ಟೆ ಸಮೇತ ಪಕ್ಷಿ ಹಾರಿಹೋಯಿತು. ಬಟ್ಟೆ ಇಲ್ಲದೆ ಹಾಗೆ ಕಾಡಿನಲ್ಲಿ ಅಲೆಯುತ್ತಿದ್ದಾನೆ. ದಮಯಂತಿಗೆ ಹೇಳಿದ ಇದು ವಿದರ್ಭ ದೇಶಕ್ಕೆ ಹೋಗುವ ಮಾರ್ಗ ಎಂದು. ಆಗ ದಮಯಂತಿ ಹೇಳಿದಳು ನಾನು ನಿನ್ನ ಬಿಟ್ಟು ತವರು ಮನೆಗೆ ಹೋಗುವುದಿಲ್ಲ ಎಂದಳು.


ಕಾಡಿನಲ್ಲಿ ಒಂದು ಭವನ ಕಂಡಿತು. ಅಲ್ಲಿ ಮಲಗಿದ್ದಾರೆ. ಗಂಡ ಮಲಗುವ ವರೆಗೂ ಮಲಗದ ದಮಯಂತಿ ಅಂದು ಬೇಗ ಮಲಗಿದ್ದಾಳೆ. ರಾತ್ರಿ ಎದ್ದು ನಳ ಅವಳನ್ನು ಬಿಟ್ಟು ಹೋಗಲು ನಿರ್ಧರಿಸಿದ. ಅವಳು ತವರು ಮನೆಗೆ ಹೋಗಿ ಸುಖವಾಗಿರಲಿ ಎಂದು ನಳ ಅವಳನ್ನು ಬಿಟ್ಟು ಹೋಗಲು ನಿರ್ಧರಿಸಿದ.
ದಮಯಂತಿ ಮಲಗಿದ್ದಾಳೆ. ನಳನಿಗೆ ರಾತ್ರಿ‌ಎಚ್ಚರವಾಯಿತು. ದಮಯಂತಿಯನ್ನು ಬಿಟ್ಟು ನಳ ಹೊರಟುಹೋದ.


ಸ್ವಲ್ಪ‌ಸಮಯದ ನಂತರ ದಮಯಂತಿಗೆ 

ಕಾಡು ಸೇರಿದ ನಳ ದಮಯಂತಿ , ಮಹಾಭಾರತಸಾರ

ಎಚ್ಚರ ವಾಯಿತು.ಗಂಡ ಇಲ್ಲದ್ದನ್ನು ಕಂಡು ಗಾಬರಿಯಾಗಿದ್ದಾಳೆ. ಗಂಡನನ್ನು ಹುಡಕುತ್ತಿದ್ದಾಳೆ. ಕಾಡಿನಲ್ಲಿ  ಅಜಗರ (ಹೆಬ್ಬಾವು) ಬಾಯಿಗೆ ಸಿಕ್ಕಿದ್ದಾಳೆ. ಈಗಲಾದರೂ ರಕ್ಷಣೆಗೆ ಬಾ ಎಂದು ನಳನನ್ನು ಕರೆದಿದ್ದಾಳೆ. ಒಬ್ಬ ವ್ಯಕ್ತಿ ಬಂದು ರಕ್ಷಿಸಿದ್ದಾನೆ. ಅವಳ ಸೌಂದರ್ಯಕ್ಕೆ ಮಾರು ಹೋಗಿ ತಪ್ಪು ಮಾಡಲು ಮುಂದಾದ. ಬುದ್ದಿ ಮಾತು ಹೇಳಿದರೂ ಕೇಳಲಿಲ್ಲ. ಪಾತಿವ್ರತೆಯ ಶಕ್ತಿಯಿಂದ ಅವನಿಂದ ಪಾರಾಗಿದ್ದಾಳೆ.
 ರಾಜನಾಗಿದ್ದಾಗ ಗಂಡ ಸುಖಕೊಟ್ಟಿದ್ದು ಸತ್ಯವಾದರೆ, ಈಗ ಕಷ್ಟವೂ ಸತ್ಯ ಎಂದು ನಿರ್ಧರಿಸಿದ್ದ ದಮಯಂತಿ ಯ ಔದಾರ್ಯ ಇಂದಿನ ಯುವತಿಯರಿಗೆ ಆದರ್ಶಪ್ರಾಯವಾಗಿದೆ.
ಎಷ್ಟೆಲ್ಲ ಧರ್ಮ ಆಚ ರಿಸಿದರೂ ಸಣ್ಣ ದೋಷ ಮಾಡಿದರೂ ಕಷ್ಟ ಅನುಭವಿಸಬೇಕಾಗುತ್ತದೆ.  ಯಾವ ಸಮಯದಲ್ಲಿ ಕಷ್ಟ ಬರುತ್ತದೆಯೋ ಗೊತ್ತಾಗಲ್ಲ. ಕಷ್ಟ ಎದುರಿಸುವ ಶಕ್ತಿ ಹೊಂದಬೇಕು ಎಂದು ಮಹಾ ಭಾರತ ಸಂದೇಶ ನೀಡಿದೆ.

ಕೇಳಿದಷ್ಟು ಹಣ, ಬಯಸಿದ ವಾಹನ ಎಲ್ಲವೂ ಕೊಡಿಸಿದರೂ ಸಣ್ಣ ವಸ್ತು ಕೊಡಿಸಿಲ್ಲ ಎಂದು ಗಂಡನ ಮನೆ ತೊರೆಯುವ ಇಂದಿನ ಮಹಿಳೆಯರಿಗೆ ದಮಯಂತಿ  ಆದರ್ಶವಾಗಿದ್ದಾಳೆ. ಮಹಿಳೆಯರಿಗೆ ಪಾತಿವತ್ರೆಯ ಶಕ್ತಿ ರಕ್ಷಣೆ ನೀಡುತ್ತದೆ ಎಂಬುದನ್ನು ದಮಯಂತಿ ಕಥೆಯಿಂದ ತಿಳಿಯಬಹುದಾಗಿದೆ.
 

- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

 

–>