-->
MENU 🔍 SEARCH ThinkBangalore 🔖 FOLLOW 📢 SHARE
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

ನಳ ದಮಯಂತಿ ಸಮ್ಮೀಲನ , ಮಹಾಭಾರತಸಾರ


ನಾಗ ಹೇಳಿದಂತೆ ನಳ ಮಹಾರಾಜ ಅಯೋಧ್ಯ ಪಟ್ಟಣಕ್ಕೆ ಬಂದು ಋತುಪರ್ಣರಾಜನಲ್ಲಿ ಸಾರಥಿಯಾಗಿ ದ್ದಾನೆ.
ಇತ್ತ ನಳನನ್ನು ಹುಡುಕಲು ದಮಯಂತಿ ಪರಣಾ ಎಂಬ ಬ್ರಾಹ್ಮಣನ್ನು ಕರೆದು ಒಂದು ಶ್ಲೋಕ ಹೇಳಿ ಕಳಿಸಿದ್ದಾಳೆ. ಈ ಶ್ಲೋಕಕ್ಕೆ ಯಾರೂ ಉತ್ತರ ಕೊಡುವರು ನನಗೆ ತಿಳಿಸು ಎಂದಿದ್ದಾಳೆ. ದೇಶ ಸಂಚರಿಸುತ್ತ ಸಿಕ್ಕವರೆದುರಿಗೆ ಈ ಶೋಕ ಹೇಳಿದ್ದಾನೆ. ಯಾರಿಂದಲೂ ಉತ್ತರ ಬರುತ್ತಿಲ್ಲ. ಅಯೋಧ್ಯ ಪಟ್ಟಣಕ್ಕೆ ಬಂದಿದ್ದಾನೆ. ಅಲ್ಲಿ ಈ ಶ್ಲೋಕ ಹೇಳಿದಾಗ ನಳ ಕೂಡಲೇ ಉತ್ತರ ಕೊಟ್ಟಿದ್ದಾನೆ. ಎಂಥ ಆಪತ್ತು ಬಂದರೂ  ತನ್ನ ಪಾತಿವ್ರತೆ ಬಲದಿಂದ ಸ್ತ್ರೀ ರಕ್ಷಣೆ ಮಾಡಿಕೊಳ್ಳುವಳು ಎಂದು ಉತ್ತರಿಸಿದ್ದಾನೆ. ಪರಣಾ ಬ್ರಾಹ್ಮಣನು ದಮಯಂತಿಗೆ ಈ ವಿಷಯ ತಿಳಿಸಿದ. ಅವನೇ ನಳನಿರಬಹುದು ಎಂದು ಕರೆಸುವ ಉಪಾಯ ಮಾಡಿದ್ದಾಳೆ. ಧೂತ ವಸುದೇವ ನನ್ನು ಕರೆದು ಅಯೋಧ್ಯಕ್ಕೆ ಹೋಗಿ ದಮಯಂತಿಯ ಸ್ವಯಂವರ ನಾಳೆನೇ ಏರ್ಪಡಿಸಲಾಗಿದೆ ಎಂದು ತಿಳಿಸಿಬಾ ಎಂದಿದ್ದಾಳೆ. ವಸುದೇವ ಋತುಪರ್ಣ ರಾಜನಿಗೆ ವಾರ್ತೆ ಮುಟ್ಟಿಸಿದ. ರಾಜ ನಳನನ್ನು ಕರೆದು ನಾಳೆ ಬೆಳಗಾಗುವುದರಲ್ಲಿ ವಿದರ್ಭ ದೇಶಕ್ಕೆ ತಲುಪಬೇಕು. ದಮಯಂತಿಯ ಸ್ವಯಂರ ಇದೆ ಎಂದ. ನನ್ನನ್ನು ಕರಿಸಿಕೊಳ್ಳಲು ದಮಯಂತಿ ಮಾಡಿದ ನಾಟಕ ಎಂದು ನಳನಿಗೆ ವಿಶ್ವಾಸವಿತ್ತು. ರಾಜನನ್ನು ಕರೆದುಕೊಂಡು ಹೊರಟ, ಮಾರ್ಗ ಮಧ್ಯೆದಲ್ಲಿ ರಾಜನ ವಸ್ತ್ರ ಕೆಳಗೆ ಬಿದ್ದಿತು. ನಿಲ್ಲಿಸು ಒಂದು ಕ್ಷಣ ಎಂದ ರಾಜ. ನಿನ್ನ ವಸ್ತ್ರ ಸಿಗುವುದಿಲ್ಲ. ಎಷ್ಟೋ ಯೋಜನೆಯಷ್ಟು ದೂರ ಬಂದಿದೆ ರಥ ಎಂದ ನಳ. ರಾಜನಿಗೆ ಸಿಟ್ಟು ಬಂತು ನೀನೊಬ್ಬನೆ ಪಂಡಿತನಲ್ಲ ಎಂದ. ಈ ಮರದಲ್ಲಿ ಎಷ್ಟು ಹಣ್ಣು, ಎಲೆಗಳಿವೆ ಎಂದು ಹೇಳುವೆ ಎಂದು ಹೇಳಿದ ರಾಜ. ಆಗ ನಳನಿಗೆ ಅಶ್ಚರ್ಯ ವಾಯಿತು. ರಾಜ ತನ್ನಲ್ಲಿನ ಅಕ್ಷಯ ವಿದ್ಯ ನಳನಿಗೆ ಕೊಟ್ಟು ಅವನಲ್ಲಿನ ಅಶ್ವ ವಿದ್ಯ ಪಡೆದ. ಆಗ ಕಲಿ ನಳನಿಂದ ಹೊರಗೆ ಬಂದು ಆ ಮರದಲ್ಲಿ ಪ್ರವೇಶಿಸಿದ.

ಕಾಡು ಸೇರಿದ ನಳ ದಮಯಂತಿ , ಮಹಾಭಾರತಸಾರ

 

 ಇಬ್ಬರು ವಿದರ್ಭಕ್ಕೆ ಬಂದಿದ್ದಾರೆ. ಸಂಯಂವರದ ಲಕ್ಷಣವೇ ಇಲ್ಲ. ಆದರೂ ರಾಜನ ಭೇಟಿಯಾಗಿ ಹೋದರಾಯಿತು ಎಂದು
ಆಸ್ತಾನಕ್ಕೆ ಬಂದಿದ್ದಾನೆ. ಆಗ ದಮಯಂತಿ ನಳನನ್ನು ಸಾಕಷ್ಟು ಪರೀಕ್ಷೆ ಮಾಡಿದ್ದಾಳೆ. ನಳನೆಂದು ದೃಡಪಡಿಸಿಕೊಂಡಿದ್ದಾಳೆ. ಇಬ್ಬರ ಸಮ್ಮಿಲನವಾಗಿದೆ. ನಳ ನಾಗನ ಸ್ಮರಣೆ ಮಾಡಿದ . ಮತ್ತೆ ಮೊದಲಿನ ಸೌಂದರ್ಯ ಬಂದಿತು.
ನಳ ಮಹಾರಾಜ ದಮಯಂತಿ ಮತ್ತು ಮಕ್ಕಳ ಜತೆ ತನ್ನ ರಾಜ್ಯಕ್ಕೆ ಬಂದನು. ಯಾರು ಸೋಲುವರೋ ಪ್ರಾಣ ತ್ಯಾಗ ಮಾಡಬೇಕು ಎಂಬ ಷರತ್ತಿನೊಂದಿಗೆ ತಮ್ಮನನ್ನು ಜೂಜಾಟಕ್ಕೆ ಕರದಿದ್ದಾನೆ. ತಮ್ಮ ಸೋತಿದ್ದಾನೆ. ಪ್ರಾಣ ತ್ಯಾಗ ಮಾಡುವುದು ಬೇಡ. ಇದರಲ್ಲಿ ಅರ್ಧ ಸಂಪತ್ತು ನಿನಗೆ ಕೊಡುವೆ ನೀನು ಸುಖವಾಗಿರು ಎಂದು ನಳಮಹಾರಾಜ ಹೇಳಿದ ಎಂದು ಭೃಗ ಮಹರ್ಷಿಗಳು ಧರ್ಮರಾಜನಿಗೆ ನಳ ದಮಯಂತಿಯ ಕಥೆ ಹೇಳಿದರು.
ಕಾಡಿಗೆ ಕಳಿಸದ ತಮ್ಮನ ಸುಖ ಬಯಸಿದ ನಳನ ಕಥೆಯಿಂದ ಮಹಾಭಾರತ ಬದುಕುವುದನ್ನು ಕಲಿಸಿಕೊಟ್ಟಿದೆ.
ಆಸ್ತಿಗಾಗಿ ದ್ವೇಷ ಸಾಧಿಸುವ  ಇಂದಿನ ಸಮಾಜದಲ್ಲಿ ತಮ್ಮ ಜೂಜಾಟದಲ್ಲಿ ಸೋತರೂ ಅರ್ಧ ರಾಜ್ಯವನ್ನು ಕೊಡುವ ಮೂಲಕ ನಳ ಮಹಾರಾಜನ ಆದರ್ಶ ಇಂದು ಪ್ರಸ್ತುತವಾಗಿದೆ. ನಳನ ಆದರ್ಶ, ಸತ್ಯ, ಧರ್ಮವಂತಿಕೆ ಪುರುಷರು, ದಮಯಂತಿಯ ಪಾತ್ರವ್ರತೆ ಸ್ತ್ರಿಯರು ಅಳವಡಿಸಿಕೊಂಡರೆ ನಮ್ಮೆಲ್ಲರ ಬದುಕು ಸುಂದರವಾಗಿಬಲ್ಲದು.


- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

–>