-->

ವಿದುರ ಮೇತ್ರೆಯರ ದಿವ್ಯ ಸಮಾಗಮ , ಮಹಾಭಾರತ ಸಾರ

 ಅಧರ್ಮಗಳ ಪ್ರತೀಕರಾದ ದುಯೋಧನಾದಿಗಳು ನ್ಯಾಯಮೂರ್ತಿಗಳಾದ ಪಾಂಡವರನ್ನು ಹಿಂಸೆ ಮಾಡುವುದನ್ನು ವಿರೋಧಿಸಿದವನು ವಿದುರ ಒಬ್ಬನೇ.
ಪಾಂಡವರನ್ನು ಅರಗಿನ ಮನೆಯ ಬೆಂಕಿಲ್ಲಿ ಸುಡುವ ಪ್ರಯತ್ನ ಮಾಡಿದಾಗ ವಿದುರ ನಿರ್ಮಿಸಿದ ದೋಣಿ ಮೂಲಕ ಪಾರಾದರು. ಅರುಗಿನ ಮನೆಯಿಂದ ಭೀಮಸೇನ ದೇವರು ಎಲ್ಲರನ್ನೂ  ಹೊತ್ತುಕೊಂಡು ಹೋಗುತ್ತಾರೆ. ವಿದುರ ಎಂದರೆ ಧರ್ಮ, ಭೀಮಸೇನ ದೇವರು ಜ್ಞಾನದ ಪ್ರತೀಕ. ನಾವು ಧರ್ಮವನ್ನು ಆಚರಿಸಿದರೆ ಎಂತಹ ಕಷ್ಟದಲ್ಲಿದ್ದರೂ ಧರ್ಮ ಮತ್ತು ಜ್ಞಾನ ನಮ್ಮನ್ನು ಕಾಪಾಡುತ್ತವೆ ಎಂಬುದು ಇದರ ತಾತ್ಪರ್ಯ.
ಜೂಜಾಟದಲ್ಲಿ ಪಾಂಡವರನ್ನು ಅನ್ಯಾಯವಾಗಿ ಸೋಲಿಸಿ, ವನವಾಸಕ್ಕೆ ಕಳಿಸಿದರೂ ವಿದುರ ಸಹನೆಯಿಂದ ಇದ್ದ. ವನವಾಸದಿಂದ ಬಂದರೂ ರಾಜ್ಯ ನೀಡಲು ನಿರಾಕರಿಸಿದಾಗ ಕೃಷ್ಣ ಸಂಧಾನಕ್ಕೆ ಬಂದಾಗಲೂ ದುರ್ಯೋಧನ ಗೌರವ ನೀಡಲಿಲ್ಲ. ನಿನ್ನ ಅಭಿಪ್ರಾಯವೇನು ಎಂದು ಕೃಷ್ಣ ವಿದುರನಿಗೆ ಕೇಳಿದಾಗ ಒಬ್ಬನ ಪ್ರೀತಿಗಾಗಿ ಇಡೀ ರಾಜ್ಯದ ಪ್ರಜೆಗಳಿಗೆ ಕಷ್ಟ ನೀಡುವ ಬದಲು ದುರ್ಯೋಧನನನ್ನೇ ರಾಜ್ಯದಿಂದ ಹೊರಗೆ ಹಾಕಬೇಕು. ಇದು ಸಮಸ್ತ ಪ್ರಜೆಗಳಿಗೆ ಓಳಿತನ್ನು ನೀಡುತ್ತದೆ ಎಂದು ಪ್ರತಿಪಾದಿಸಿದ. ಧುರ್ಯೋಧನ ವಿಧುರನನ್ನೇ ಹೊರಗೆ ಹಾಕಲು ನಿರ್ಧಸಿದ. ಅದನ್ನೆ ಕಾಯುತ್ತಿದ್ದ ವಿದುರ ತೀರ್ಥ ಯಾತ್ರೆಗೆ ತೆರಳುತ್ತಾನೆ. ಯಾರಾದರೂ ತಪ್ಪು ಮಾಡುತ್ತಿದ್ದರೆ ನೋಡಿ ಸುಮ್ಮನಿರಬಾರದು, ಪ್ರತಿಭಟಿಸಬೇಕು. ಪ್ರತಿಭಟಿಸಲು ಅಗದಿದ್ದರೆ ಅಲ್ಲಿಂದ ದೂರ ಸರಿಬೇಕು ಎಂಬುದು ಇದರ ಅರ್ಥ. ವಿದುರ ಮತ್ತು ಉದ್ಧವರ ಸಮಾಗಮವಾಗುತ್ತದೆ. ಇನ್ನು ಸ್ವಲ್ಪ ದಿನದಲ್ಲಿ ಕೃಷ್ಣ ಪರಂಧಾಮಕ್ಕೆ ತೆರಳುವ ವಿಷಯ ಮತ್ತು ಯಾದವರ ಕುಲ ನಾಶ ವಾಗಲಿದೆ ಎಂದು ಉದ್ಧವ ತಿಳಿಸುತ್ತಾನೆ.
ಯಾದವರೆಲ್ಲ ದೇವಕುಲದವರು ಅವರನ್ನು ಹೇಗೆ ಉಪ ಸಂಹಾರ ಮಾಡುವುದು ಎಂದು ಯೋಚಿಸಿ ಕೃಷ್ಣ ಯಾದವರಲ್ಲಿ ಒಬ್ಬನನ್ನು  ಹೆಣ್ಣು ವೇಷ ಧರಿಸುವಂತೆ ಮಾಡಿ ಋಷಿ ಹತ್ತಿರ ಕಳಿಸುತ್ತಾನೆ. ನನಗೆ ಯಾವ ಮಗು ಹುಟ್ಟಲಿದೆ ಎಂದು ಆ ಸ್ತ್ರೀ ವೇಷಧಾರಿ ಋಷಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಕೇಳಿದ್ದಕ್ಕೆ ಒನಕೆ ಹುಟ್ಟುತ್ತದೆ ಅದರಿಂದಲೆ ನಿಮ್ಮ ನಾಶ ಎಂದು ಜ್ಞಾನಿ ಹೇಳುತ್ತಾನೆ. ಜ್ಞಾನಿಗಳ ಮಾತಿನಂತೆ  ಆ ಸ್ತ್ರೀ ವೇಷಧಾರಿ ಪುರುಷನಿಗೆ ಒನಕೆ ಜನಿಸುತ್ತದೆ. ಇದನ್ನೆ ಕುಟ್ಟಿ ಹಾಕಿದರೆ ನಮ್ಮ ಸಂಹಾರ ಎಲ್ಲಿಂದ ಎಂದು ಆ ಒನಕೆಯನ್ನು ಕುಟ್ಟಿ ಪುಡಿ ಮಾಡಿ ಸಮುದ್ರದಲ್ಲಿ ಹಾಕುತ್ತಾರೆ. ಒನಕೆ ಪುಡಿ ಸಮುದ್ರದ ದಂಡೆಯಲ್ಲಿ ದರ್ಭವಾಗಿ ಬೆಳೆಯುತ್ತದೆ. ಅದೆ ದರ್ಭದಿಂದ ಹೊಡೆದಾಡಿ ಯಾದವ ವಂಶಸ್ಥರು ಸಾಯುುತ್ತಾರೆಂದು ಹೇಳಿದ. ತತ್ವಜ್ಞಾನ ಪ್ರಸಾರ ಮಾಡಲು ಯಾದವ ಕುಲದಲ್ಲಿ ನನ್ನನ್ನು ಮಾತ್ರ ಉಳಿಸಿದ್ದಾನೆ ಎಂದು ಉದ್ಧವ ಹೇಳಿದ.

ವಿದುರ ಮೇತ್ರೆಯರ ದಿವ್ಯ ಸಮಾಗಮ ,  ಮಹಾಭಾರತ ಸಾರ
ಮುಂದೆ ವಿದುರ ಮೇತ್ರೆಯರ ಸಮಾಗಮವಾಗುತ್ತದೆ. ಮೇತ್ರೆಯರು ಬ್ರಹ್ಮಾಂಡ ಸೃಷ್ಟಿಯ ಬಗ್ಗೆ ವಿವರಿಸಿ, ಭಗವಂತ ಮೊದಲು ಬ್ರಹ್ಮದೇವರನ್ನು ಸೃಷ್ಟಿಸಿದ ಲೋಕದಲ್ಲಿ ಜನರನ್ನು ಸೃಷ್ಟಿಸಲು ಬ್ರಹ್ಮದೇವರು ಸನಕಾದಿಯರನ್ನು ಸೃಷ್ಟಿಸಿದರು. ಅವರು ಸಂಸಾರಿಗಳಾಗುವುದಿಲ್ಲ ಎಂದು ನಿರಾಕರಿಸಿದಕ್ಕೆ ಬ್ರಹ್ಮ ದೇವರ ಸಿಟ್ಟಿನಿಂದ ರುದ್ರ ದೇವರು ಜನಿಸಿದರು. ಇವರಿಂದ ಜನರ ಸೃಷ್ಟಿ ಆಗದಿದ್ದಕ್ಕೆ ಮತ್ತೆ ಶ್ವಯಂಭು ಮನು ರನ್ನು ಸೃಷ್ಟಿಸಿ ಜನರ ಸೃಷ್ಟಿಯ ಜವಬ್ದಾರಿ ವಹಿಸಿದ. ಪ್ರಳಯದಲ್ಲಿ ಭೂಮಿ ಮುಳಗಿತ್ತು. ವರಹರೂಪಿ ಭಗವಂತ ಭೂಮಿಯನ್ನು ರಕ್ಷಿಸಿದ ಎಂದು ಬ್ರಹ್ಮಾಂಡ ಸೃಷ್ಠಿಯ ಬಗ್ಗೆ  ಮೇತ್ರೆಯರು ಹೇಳಿದರು.
ನಾವು ಸುಖ ಬಯಸಿದರೂ ದು:ಖ ಸಿಗುತ್ತದೆ. ಲೌಕಿಕ ಸುಖ ಬೇಡಿದರೆ ಕೆಲ ಸಮಯ ಮಾತ್ರ ಸುಖ ಸಿಗಬಹುದು ಆದರೆ  ದುಃಖ ವನ್ನು ಬೇಡಿದರೆ ಶಾಶ್ವತ ಸುಖ ಸಿಗುತ್ತದೆ. ನಾವು ತಪಸ್ಸು ಮಾಡುವುದು ಮುಖ್ಯವಲ್ಲ. ಅನೇಕ ಜನರಿಗೆ ಶಾಸ್ತ್ರೋಪದೇಶ ನೀಡುವುದು ಮುಖ್ಯ.
ಜ್ಞ್ಞಾನಿಗಳಿಂದ ಶಾಪ ಪಡೆದರೆ ನರಕದಲ್ಲೂ ನಮ್ಮನ್ನು  ಅತ್ಯಂತ ಹೀನಾಯ ಸ್ಥಿತಿಯಲ್ಲಿ ಭಗವಂತ ಇಡುತ್ತಾನೆ. ನರಕದಲ್ಲಿಯೂ ನಮ್ಮನ್ನು ಕಡೆಗಣಿಸುತ್ತಾರೆ. ಅದಕ್ಕಾಗಿಯೇ ಮಹಾತ್ಮ, ಜ್ಞಾನಿಗಳನ್ನು ನಿಂದಿಸಬಾರದು ಎಂದು ಶಾಸ್ತ್ರ ಹೇಳಿದೆ.

- ಶಾಮಸುಂದರ ಕುಲಕರ್ಣಿ, ಕಲಬುರಗಿ (9886465925)

–>