-->
MENU 🏠 HOME 🔍 SEARCH ThinkBangalore 🔖 FOLLOW
×

Subscribe , Follow on

Follow ThinkBangalore pageFacebook Follow ThinkBangalore tweetsTwitter Follow ThinkBangalore Youtube channelYouTube Follow ThinkBangalore LinkedIn pageLinkedIn

ಗೋ ಹತ್ಯೆಭಯಂಕರ ಪರಿಣಾಮ , ಯಾದವ ವಂಶ, ಮಹಾಭಾರತ ಸಾರ

ತಿಳಿದೋ ತಿಳಿಯದೋ ಯಾರಾದರು  ಹಣದಾಸೆಯಿಂದ ಮತ್ತೊಬ್ಬರ ಹಸುವನ್ನು ಕದ್ದು ಅದನ್ನು ಬೇರೆಯವರಿಗೆ ಮಾರಿದರೆ ಅಂತಹವರಿಗೆ ಎಂಥ ಗತಿ ಪ್ರಾಪ್ತ ವಾಗುತ್ತದೆ‌ ಎಂದು ಇಂದ್ರನು ಕೇಳುತ್ತಾನೆ.
ಸೇವಿಸುವುದಕ್ಕಾಗಲಿ, ಮಾರುವುದಕ್ಕಾಗಲಿ, ಬ್ರಾಹ್ಮಣರಿಗೆ ದಾನ ಕೊಡುವುದಕ್ಕಾಗಲಿ ಬೇರೆಯವರ ಗೋವನ್ನು  ಕದ್ದರೆ ಭಯಂಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬ್ರಹ್ಮ ಹೇಳಿದ.
ಮಾಂಸ ಮಾರುವ ಸಲುವಾಗಿ ಗೋವನ್ನು ಹಿಂಸಿಸುವವರು,  ಗೋ ಮಾಂಸ ಭಕ್ಷಿಸುವರು ಮತ್ತು ಕಟುಕರಿಗೆ ಗೋವುಗಳನ್ನು ಮಾರುವವರು ಮಹಾ ಪಾಪಕ್ಕೆ ಗುರಿಯಾಗುತ್ತಾರೆ.
ಗೋವು ಕೊಲ್ಲುವವರು, ಗೋ ಹತ್ಯೆಗೆ ಅನುಮತಿಸುವವರು ಅಂತವರು ಕೊಲೆಗಿಡಾದ ಹಸುವಿನಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ವರ್ಷಗಳಕಾಲ ನರಕದಲ್ಲಿ ಬಿದ್ದಿರುತ್ತಾರೆ.
ಬ್ರಾಹ್ಮಣರು ಮಾಡುತ್ತಿರುವ ಯಜ್ಞ ಗಳನ್ನು ಹಾಳು ಮಾಡಿದವರಿಗೆ ಬರುವ ಪಾಪದಷ್ಟು  ಗೋವು ಕದ್ದವರು  ಅನುಭವಿಸಬೇಕಾಗುತ್ತದೆ.
ಯಾರು ಗೋವು ಕದ್ದು ಬ್ರಾಹ್ಮಣನಿಗೆ ದಾನ ಮಾಡುತ್ತಾರೋ ಅಂಥವರು ತಾವೆ ಸಂಪಾದಿಸಿ ಗೋದಾನ ಮಾಡಿದರೆ ಎಷ್ಟು ವರ್ಷ ಪುಣ್ಯ ಗಳಿಸುತ್ತಾರೋ ಅಷ್ಟು ವರ್ಷಗಳ ಕಾಲ ನರಕಯಾತನೆ ಅನುಭವಿಸಬೇಕಾಗುತ್ತದೆ.
ಗೋದಾನದಲ್ಲಿ ಸುವರ್ಣ ದಕ್ಷಿಣೆ ಸೇರಿಸಿ ಕೊಡಬೇಕು ಎಂಬ ನಿಯಮವಿದೆ.
ಗೋದಾನ ಮಾಡುವುದರಿಂದ  ತನ್ನ ಹಿಂದಿನ ಏಳು ತಲೆಮಾರಿನವರನ್ನು ಹಾಗೂ ಮುಂದಿನ ಏಳು ತಲೆ ಮಾರಿನವರು ಉದ್ಧಾರವಾಗುತ್ತಾರೆ. ಸುವರ್ಣ ಸಹಿತ ಗೋದಾನ ಮಾಡಿದರೆ ಅದರ ಪಟ್ಟು ತಲೆ ಮಾರಿನವರು ಉದ್ಧಾರವಾಗುತ್ತಾರೆ ಎಂದು ಬ್ರಹ್ಮದೇವರು ಹೇಳಿದರು.
 

ಗೋ ಹತ್ಯೆಭಯಂಕರ ಪರಿಣಾಮ , ಯಾದವ ವಂಶ, ಮಹಾಭಾರತ ಸಾರ

ಯಾದವ ವಂಶ
 

ಪೂರ್ವದಲ್ಲಿ ಆಹುಕನೆಂಬ ಗಂಧರ್ವನಿದ್ದನು. ಆತನು ಶ್ರೀ ಹರಿಯ ಸೇವಾರ್ಥವಾಗಿಯೇ ಭೂಲೋಕದಲ್ಲಿ‌‌ ಜನಿಸಿದ್ದನು.
ಅವನ ಮಗನೇ ದೇವಕ. ದೇವಕನು ಯಾದವ ಮನೆತನದವನು. ಉಗ್ರಸೇನನು ಒಬ್ಬ ಗಂಧರ್ವನೆ. ಅವನು‌ ಅದೇ ಹೆಸರಿನಿಂದಲೇ ಭೂಲೋಕದಲ್ಲಿ ಜನಿಸಿದ್ದಾನೆ. ದೇವಕನು ಉಗ್ರಸೇನನ ತಮ್ಮನು. ದೇವಕನ ಹೊಟ್ಟೆಯಲ್ಲಿಯೇ ದೇವಕಿ ಜನಿಸಿದಳು.
ದೇವಕಿ ಮೂಲದಲ್ಲಿ ಕಷ್ಯಪರ ಹೆಂಡಂದಿರಲ್ಲಿ ಹಿರಿಯಳು.ಈಗ ದೇವಕನ ಮಗಳಾಗಿ ಜನಿಸಿದ್ದಾಳೆ. ಅವಳನ್ನೆ‌ ಆಹುಕನು ತನ್ನ ಮಗಳನ್ನಾಗಿ ಮಾಡಿಕೊಂಡಿದ್ದಾನೆ. ದೇವಕಿಯು ಕಂಸನಿಗೆ ತಂದೆಯ ಕಡೆಯಿಂದ ನೋಡಿದಾಗ ತಂಗಿಯಾಗಬೇಕು. ತಂದೆಯ ತಂಗಿ ಎನ್ನುವ ದೃಷ್ಟಿಯಿಂದ  ಸೋದರತ್ತೆಯೂ ಹೌದು.
ಅದಿತೆಯೇ  ಇಂದು ದೇವಕಿಯಾಗಿದ್ದಾಳೆ. ಅವಳನ್ನೆ ವಸುದೇವನಿಗೆ ಮದುವೆ ಮಾಡಿಕೊಡಲಾಯಿತು. ನವ ದಂಪತಿಗಳು ಕುಳಿತಿರುವ ರಥವನ್ನು ಕಂಸನೇ ಸಾರಥಿಯಾಗಿ  ನಡಿಸುತ್ತಿದ್ದಾನೆ. ಆ ಸಮಯದಲ್ಲಿ ಆಕಾಶದಲ್ಲಿ ಒಂದು ಭಯಾನಕ‌ ಶಬ್ದ ಕೇಳಿಸಿತು. ಈ ದೇವಕಿಯ ಎಂಟನೇ ಮಗನಿಂದಲೇ‌ ನಿನ್ನ ಮರಣ ಎಂದು‌ ಆಕಾಶವಾಣಿ ಆಯಿತು. ಇದನ್ನು ಕೇಳಿದ ಕಂಸನು  ಕಿರುಗತ್ತಿ ತೆಗೆದುಕೊಂಡು ದೇವಕಿಯನ್ನು ಕೊಲ್ಲಲು ಮುಂದಾದ. ನಿನ್ನ ಸಾವು ಇವಳ ಮಕ್ಕಳಿಂದ. ಇವಳಿಂದಲ್ಲವಲ್ಲ. ಹಾಗಾದರೆ ಇವಳನ್ನೇಕೆ ಕೊಲ್ಲಿವಿ. ಮಕ್ಕಳನ್ನು ನಿನಗೆ ಒಪ್ಪಿಸುವೆ ದೇವಕಿಯನ್ನು ಕೊಲ್ಲಬೇಡ ಎಂದು ಹೇಳುತ್ತಾನೆ. ವಸುದೇವನು ದೇವಕಿಯನ್ನು ಗಂಡಾಂತರದಿಂದ ಪಾರು ಮಾಡಿದ. ಕಂಸನು ಅವರಿಬ್ಬರನ್ನು ಕಾರಾಗೃಹದಲ್ಲಿಟ್ಟನು.
ವಾಸುದೇವನಲ್ಲಿನ ಸಮಯ ಪ್ರಜ್ಞೆ ಎಲ್ಲರಲ್ಲೂ ಇರಬೇಕು.  ಮನುಷ್ಯರಲ್ಲಿ ಇರಬೇಕಾದ ಅತಿ ಅವಶ್ಯಕ ಗುಣವಿದು. ಗಂಡಾಂತರ ಬಂದಾಗ ಪಾರು ಮಾಡುತ್ತದೆ ಈ ಸಮಯ ಪ್ರಜ್ಞೆ ಎಂಬುದನ್ನು ಮಹಾಭಾರತ ನಿರೂಪಿಸಿದೆ.

- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ (9886465925)

–>