-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 9

ನಿಮಗೆ ಎಲ್ಲೇ ಹೋದರೂ ಗೌರವ ಸಿಗುತ್ತಿದೆ ಎಂದಾದರೆ ಅದಕ್ಕೆ ಕಾರಣ ನಿಮ್ಮ ಸ್ವಭಾವ ಮತ್ತು ನಡತೆ.
ಎಲ್ಲರ ಜೊತೆಗೆ ಬೆರೆಯಿರಿ. ಆದರೆ ಸ್ವಭಾವ ಮತ್ತು ನಡತೆಯನ್ನು ಬದಲಾಯಿಸಬೇಡಿ. ದೀಪವನ್ನು ಎಲ್ಲೇ ಹಚ್ಚಿದರೂ ಅದರ ಸ್ವಭಾವ ಬೆಳಕು ನೀಡುವುದು ಮಾತ್ರ.

ಯಾರನ್ನು ಸಂಧಿಸುತ್ತೇವೆ ಎಂಬುದನ್ನು ಕಾಲ ನಿರ್ಧರಿಸಿದರೆ, ನಮ್ಮ ಜೀವನದಲ್ಲಿ ಯಾರು ಉಳಿದುಕೊಳ್ಳತ್ತಾರೆ ಎಂಬುದನ್ನು ನಮ್ಮ ವರ್ತನೆ ನಿರ್ಧರಿಸುತ್ತದೆ

ಮೂಢರ ಹತ್ತಿರ ಮೌನದಿಂದಿರಬೇಕು. ಹೃದಯವಂತರ ಹತ್ತಿರ ಮನಬಿಚ್ಚಿ ಮಾತನಾಡಬೇಕು.

 ನಾವು ಒಬ್ಬರ ಪ್ರೀತಿಗೆ   ಪಾತ್ರರಾಗುವುದಕ್ಕಿಂತ ಒಬ್ಬರ ನಂಬಿಕೆಗೆ ಪಾತ್ರನಾಗಬೇಕು ಏಕೆಂದರೆ ನಂಬಿಕೆ ಅನ್ನುವುದು ಇದ್ದಕಡೆ ಪ್ರೀತಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ

ಅವಮಾನಗಳು ಬದುಕಲೇಬೇಕೆಂಬ ಧೈರ್ಯ ಕೊಟ್ಟರೆ.. ಅನುಭವಗಳು ಹೇಗೆ ಬದುಕಬೇಕೆಂಬ ಮಾರ್ಗ ತೋರಿಸುತ್ತದೆ...

ತಾಳ್ಮೆ ಎಂಬ ಆಯುಧ... ಮೌನ ಎಂಬ ಕಿರೀಟ...  ನಗು ಎಂಬ ಆಭರಣ...ಹೊಂದಿದವರಿಗೆ ಸೋಲೇ ಇಲ್ಲ 

ಮನುಷ್ಯ ಬದುಕಿರುವಾಗಲೇ ಸಾಯುವ ಹಾಗೆ ಮಾಡುವ ಎರಡು ಬಲವಾದ ಆಯುಧಗಳು ಎಂದರೆ..ಒಂದು ಅವಮಾನ ..ಇನ್ನೊಂದು ಅನುಮಾನ

ಕಾಣದ ದಾರಿಯಲ್ಲಿ ನಿನ್ನವರನ್ನು ಹುಡಕ ಬೇಡ. ನಿನ್ನ ದಾರಿಯಲ್ಲಿ ನಿನಗಾಗಿ ಬಂದವರನ್ನು ಕಳೆದುಕೊಳ್ಳಬೇಡ. 

ನಾವು ಒಬ್ಬರ ಪ್ರೀತಿಗೆ   ಪಾತ್ರರಾಗುವುದಕ್ಕಿಂತ ಒಬ್ಬರ ನಂಬಿಕೆಗೆ ಪಾತ್ರನಾಗಬೇಕು ಏಕೆಂದರೆ ನಂಬಿಕೆ ಅನ್ನುವುದು ಇದ್ದಕಡೆ ಪ್ರೀತಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ

ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ,
ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ. ಯಾವುದನ್ನು ಹಚ್ಚಬೇಕೆಂದು ನಾವೇ ನಿರ್ಧರಿಸಬೇಕು

Kannada subhashitha - ಕನ್ನಡ ಸುಭಾಷಿತ ಸಂಗ್ರಹ 9

 

ಗಳಿಸಿಕೊಂಡ ಮೇಲೆ ಅರ್ಥ ಆಗುವುದು ಗೌರವ, ಉಳಿಸಿಕೊಂಡ ಮೇಲೆ ಅರ್ಥ ಆಗುವುದು ನಂಬಿಕೆ, ಕಳೆದುಕೊಂಡ ಮೇಲೆ ಅರ್ಥ ಆಗುವುದು ಪ್ರೀತಿ, ಸ್ನೇಹ, ನಂಬಿಕೆ ವಿಶ್ವಾಸ. ಪ್ರತಿ ಪರಿಸ್ಥಿತಿಯನ್ನು ಅನುಭವಿಸಿದ ಮೇಲೆ ಅರ್ಥ ಆಗುವುದು ಈ ಜೀವನ..

ಪ್ರಯತ್ನ ಪಡುವಾಗ ತಪ್ಪಾದರೆ ತೊಂದರೆಯಿಲ್ಲ.ಆದರೇ ಪ್ರಯತ್ನವೇ ಪಡದಿರುವುದು ಮಾತ್ರ ತಪ್ಪು. ಪ್ರಯತ್ನ ಪಡದೇ ಪ್ರತಿಫಲ ನಿರೀಕ್ಷೆ ಮಾಡುವುದು ಮೂರ್ಖತನದ ಪರಮಾವಧಿ. ಪ್ರಯತ್ನ ನಿರಂತರವಿರಲಿ. ಪ್ರಯೋಜನ ಖಂಡಿತಾ.

ಭಗವಂತ ನಮಗೆಲ್ಲ ಬಾಡಿಗೆಯ ಬದುಕನ್ನು ಕೊಟ್ಟಿದ್ದಾನೆ.ನಾವೆಲ್ಲರು ಬಾಡಿಗೆ ಕಟ್ಟಲೇಬೇಕಿದೆ. ಆದರೆ ಹಣದ ರೂಪದಲಲ್ಲ. ಏಕೆಂದರೆ ನಮ್ಮ ಕರೆನ್ಸಿ ಅಲ್ಲಿ ನಡೆಯುವುದಿಲ್ಲ.ಬದಲಾಗಿ ದಾನ, ಧರ್ಮ, ಪರೋಪಕಾರದ ರೂಪದಲ್ಲಿ ಕಟ್ಟಬೇಕು.

ಜೀವನದಲ್ಲಿ ನೀನು ನಿನಗೆ ಏನು     ಮಾಡುತಿಯೋ,ಅಂತ್ಯದಲ್ಲಿ ಅದು ನಿನ್ನೊಂದಿಗೆ ಕಳೆದುಹೋಗುತ್ತದೆ...! ಅದೇ ನೀನು ಬೇರೆಯಾವರಿಗಾಗಿ ಕೆಲಸ ಮಾಡುತಿಯೋ ಆದು ನಿನ್ನ ನೆನಪಾಗಿ ಈ ಜಗತ್ತಿನಲ್ಲಿಯೇ ಉಳಿಯುತ್ತದೆ.

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಮ್ಮ ಜಾನಪದ ನಾಣ್ಣುಡಿಯಂತೆ ಮಾತು ಎಂಬುದು ಸಂಬಂಧಗಳನ್ನು ಬೆಸೆಯುವ ಒಂದು ಆಯುಧವಿದ್ದಂತೆ.ಆ ದೇವರು ಪ್ರಪಂಚದಲ್ಲಿ ನಮಗಾಗಿ ನೀಡಿರುವ ಒಂದು ಅದ್ಭುತವಾದ ವರವಾಗಿದೆ.    ನಾವು ಆಡುವ ಮಾತು ಹೇಗಿರಬೇಕೆಂದರೆ ನುಡಿದರೆ ಮುತ್ತಿನ ಹಾರದಂತಿರಬೇಕು,ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು,ನುಡಿದರೆ ಲಿಂಗ ಮೆಚ್ಚಿ ಹೌದೌದು ಎನ್ನಬೇಕು ಎಂಬ ವಚನಕಾರರ ಮಾತಿನಂತೆ ಮುತ್ತುಗಳನ್ನು ಜೋಡಿಸಿ ಮಾಡಿದ ಹಾರವು ಹೇಗೆ ಸುಂದರವಾಗಿ ಕಾಣುವುದೋ ನಾವು ಆಡುವ ಮಾತುಗಳು ಹಾಗೆ ಇರಬೇಕು. ಮಾತಿನಿಂದ ನಗೆ ಮಾತಿನಿಂದ ಹಗೆ ಎಂಬಂತೆ ಮಾತುಗಳನ್ನು ಆಡುವಾಗ ಮಾತಿನ ಪರಿಧಿಯನ್ನು ಅರಿತು ಇನ್ನೊಬ್ಬರ ಮನಗಳಿಗೆ ನೋವಾಗದಂತೆ ಆಡಬೇಕು.ಮಾತುಗಳು ಸಂಬಂಧಗಳನ್ನು ಬೆಸೆಯುವಂತಿರಬೇಕೇ ಹೊರತು, ಸಂಬಂಧಗಳನ್ನು ಕಳಚುವಂತಿರಬಾರದು.
ನಮ್ಮ ಮಾತುಗಳು ಯಾವಾಗಲೂ  ಸಕಾರಾತ್ಮಕವಾಗಿರಲಿ , ಸಂತೋಷದಾಯಕವಾಗಿರಲಿ ,ಸಮಾಜಮುಖಿಯಾಗಿರಲಿ.

ನಮ್ಮ ಜೀವನ ಸಾರ್ಥಕವಾಗುವುದು  ನಾವು ಎಷ್ಟು ಸುಖ , ಸಂತೋಷದಿಂದ ಇದ್ದೆವೆ ಎಂಬುವುದರಿಂದಲ್ಲ. ನಮ್ಮಿಂದಾಗಿ ಎಷ್ಟು ಜನ ಸುಖ , ಶಾಂತಿ , ನೆಮ್ಮದಿಯಿಂದಿದ್ದಾರೆ ಎಂಬುವುದರಿಂದ.

ಗೆಲುವಿನ ಅಮಲನ್ನು ತಲೆಯ ಮೇಲಕ್ಕೆ ಏರಲು ಹಾಗೂ ಸೋಲಿನ ನೋವನ್ನು ಮನಸ್ಸಿನ ಆಳಕ್ಕೆ
ಇಳಿಯಲು ಬಿಡಬಾರದು. ಇವೆರಡೂ ನಮ್ಮನ್ನು ಯಾವತ್ತೂ ಮೇಲೇಳದಂತೆ ಅದುಮಿಡುತ್ತವೆ...

ಚಿಂತೆಗಳು ತಲೆಯ ಸುತ್ತ  ಹಾರಾಡುವ  ಹಕ್ಕಿಗಳಿದ್ದಂತೆ, ಹಾರಾಡಲಿ. ಆದರೆ, ಅಲ್ಲಿಯೇ ಗೂಡು ಕಟ್ಟಲು ಅವಕಾಶ ಮಾಡಿಕೊಡಬಾರದು.

ಒಂದು ಆಲೋಚನೆ ನೂರು ಉಪಾಯಗಳನ್ನು  ನೀಡುತ್ತದೆ.ಒಂದು ಚಿಂತನೆ ಬದುಕುವ
ನೂರು ದಾರಿಯನ್ನು ತೋರಿಸುತ್ತದೆ.   ನಮ್ಮ ಪ್ರತಿಯೊಂದು ಆಲೋಚನೆಗಳು, ಚಿಂತನೆಗಳು ನಮ್ಮ ಜೀವನವನ್ನು   ಮಹತ್ವದೆಡೆಗೆ ಕೊಂಡೊಯ್ಯುತ್ತವೆ. ಸಮಯ,ಸಂದರ್ಭ, ಪರಿಸ್ಥಿತಿ ಸನ್ನಿವೇಶಗಳಲ್ಲಿ
   ಆಲೋಚಿಸದೆ ಮಾತನಾಡಿದ ನಮ್ಮ ಹಲವಾರು ಮಾತುಗಳು   ಹಲವು ಸಮಸ್ಯೆಯನ್ನು ತಂದೊಡ್ಡುತ್ತವೆ.ಆಲೋಚಿಸಿ ಮಾತನಾಡಿದ ಹಲವಾರು    ಮಾತುಗಳು ಹಲವು ಮಾರ್ಗೋಪಾಯಗಳನ್ನುಪರಿಹಾರಗಳನ್ನು ಕಂಡುಕೊಳ್ಳುವಂತೆ    ಮಾಡಿ ಹಲವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಅತ್ಯುತ್ತಮ ಆಲೋಚನೆಗಳನ್ನು    ಅನುಸರಿಸುವಂತೆ ಮಾಡಿಸುತ್ತವೆ.
ಆದ್ದರಿಂದ ನಮ್ಮ ಆಲೋಚನೆಗಳು, ಚಿಂತನೆಗಳು  ಧನಾತ್ಮಕ ಮತ್ತು ಸಕಾರಾತ್ಮಕವಾಗಿರಲಿ.

–>