-->

ನಮ್ಮದೇ ನಾಗರಿಕ ಸಮಾಜದಲ್ಲಿ ಚಂಡಾಳ ಮಕ್ಕಳು

*ಸರೋಜಮ್ಮರಿಗೆ ಅಂದೇಕೋ ಹಳೆಯ ನೆನಪುಗಳು ಒಂದೊಂದಾಗಿ ಕಾಡಲಾರಂಭಿಸಿತ್ತು..*😔😔

*ಹೌದು.. ಆಕೇಗಿನ್ನೂ 36 ವಯಸ್ಸು,(50 ವರ್ಷದ ಹಿಂದಿನದ್ದು) .. ಗಂಡ ಬಿಟ್ಟು ಹೋಗುವಾಗ 6 ಮಕ್ಕಳನ್ನು ಸೆರಗಿಗೆ ಹಾಕಿ ಹೋಗಿದ್ದ,😔😔*
*ದೊಡ್ಡ ಮಗನಿಗಿನ್ನೂ 12 ವರ್ಷ ಅಷ್ಟೇ... ಕಷ್ಟ ಪಟ್ಟು ಅವರಿವರ ಮನೆ ಕೂಲಿ ಮಾಡಿ, ರಸ್ತೆ ಬದಿಭಿಕ್ಷೆ ಬೇಡಿ 6 ಮಕ್ಕಳನ್ನೂ ಸಾಕಿ ವಿದ್ಯಾಭ್ಯಾಸ ಕೊಟ್ಟು ಬೆಳೆಸಿದಳು...*

*ನನ್ನ ಕಷ್ಟ ನನಗೆ ಕೊನೆ ಗೊಳ್ಳಲಿ.. ಮಕ್ಕಳು ಬೆಳೆದ ನಂತರ ನಾನು ರಾಣಿ ತರ ಬದುಕಬಹುದು ಎಂಬ ಕನಸು  ಆಕೆಯದ್ದಾಗಿತ್ತು.ಅದೆಷ್ಟೋ ರಾತ್ರಿ ಹೊಟ್ಟೆಗೆ ತಣ್ಣೀರಲ್ಲಿ ಅದ್ದ ಬಟ್ಟೆ ಸುತ್ತಿ ಮಲಗಿದ್ದಳು....ಎಲ್ಲಾ ನೆನಪಿತ್ತು ಆಕೆಗೆ...😔😔*

 *ಮಕ್ಕಳೆಲ್ಲರೂ ಸರಕಾರಿ ಆಫೀಸ್ ಗಳಲ್ಲಿ ಕೆಲಸಕ್ಕೆ ಸೇರಿದಾಗಲಂತು  ಆಕೆಯ ಸಂತಸಕ್ಕೆ ಪಾರವೇ ಇರಲಿಲ್ಲ..,ತಲೆಯಲ್ಲಿದ್ದ ಬಿಳಿಯ ಕೂದಲನ್ನು ಲೆಕ್ಕಿಸದೆ ಖುಷಿ ಪಟ್ಟಿದ್ದಳು ಅಂದು.. ಆದರೆ ವಿಪರ್ಯಾಸ ವೆಂದರೆ ಆ ಖುಷಿ ಹೆಚ್ಚು ಸಮಯ ಉಳಿದಿರಲಿಲ್ಲ..😔😔*

*ಪ್ರೀತಿಸಿ ಬೆಳೆಸಿದ ಮಗಳು ಅಳಿಯನ ಸ್ವತ್ತಾದಳು,ಮಗ ಸೊಸೆಯ ಪಾಲಾದ ತಾಯಿ ಮತ್ತೆ ಅನಾಥ ಳಾದಳು ..😔*.. *ತಾಯಿಗೆ 6 ಮಕ್ಕಳು ಭಾರ ವಾಗಿರಲಿಲ್ಲ,6 ಮಕ್ಕಳಿಗೆ ಒಬ್ಬ ತಾಯಿ ಬಾರವಾಗಿದ್ದಳು.*😔😔

*ಆ ದಿನ ಇನ್ನೂ ನೆನಪಿತ್ತು ಆಕೆಗೆ ಪ್ರೀತಿಯ ಕಿರಿಯ ಮಗ ಎಲ್ಲೊ ಕರೆದುಕೊಂಡು ಹೋಗಿದ್ದ.. 😔ಯಾವುದೋ ಊರಿನ ದೊಡ್ಡ ಜನಸಂದಣಿ ಇರುವ ಜಾತ್ರೆಯಲ್ಲಿ ಬಿಟ್ಟು ಹೋಗಿದ್ದ... ಚಂಡಾಳ😔..*

*ಅಂದಿನಿಂದ ಮತ್ತೆ ಅದೆಷ್ಟೋ ರಾತ್ರಿ ಹಗಲು ಅದೇ ಊರಲ್ಲಿ ಅದೆಸ್ಟೋ ಚಳಿ ಮಳೆ ಗಾಳಿ ಸಹಿಸಿ ಕೊಂಡೇ,ಅದೆಸ್ಟೋ ವರ್ಷಗಳೇ ಉರುಳಿದೆ.. ನಿನ್ನೆ ಆ ಗಾಡಿ ಹೊಡೆದದ್ದಷ್ಟೇ ನೆನಪಿತ್ತು ಆಕೆಗೆ... ಯಾರೋ ಕೊಂಡು ಈ ಆಶ್ರಮಕ್ಕೆ ಹಾಕಿದ್ದರು..*😔😔

*ಕಣ್ಣು ತೆರೆದರೆ ಒಂದಷ್ಟು ಜನ ಪ್ರಶ್ನೆಗಳನ್ನು ಕೇಳುತಿದ್ದರು.😔. ನೀನ್ಯಾರು? ನಿನ್ನ ಮನೆ ಎಲ್ಲಿ? ಮಕ್ಕಳು ಎಷ್ಟು?, ಎಲ್ಲಿದ್ದಾರೆ?..*

*ಒಂದೇ ಸಲ ತನ್ನತ್ತ ತೂರಿ ಬಂದ ಪ್ರಶ್ನೆಗಳಿವು....*
*ಆಕೆಗೆ ಎಲ್ಲಾ ಪ್ರಶ್ನೆಗೂ ಉತ್ತರ ಸ್ಪಷ್ಟವಾಗಿ ಗೊತ್ತಿತ್ತು... ಈ 86 ರ ಹರೆಯದಲ್ಲೂ ಅಜ್ಜಿ ಯ ನೆನಪು ಸ್ಪಷ್ಟವಾಗಿತ್ತು... ನನಗೇನು ನೆನಪಿಲ್ಲ ಎಂದು ಬಿಟ್ಟಳು ಅಜ್ಜಿ.ಒಂದೇ ಮಾತಲ್ಲಿ...*😔

*ತನ್ನ ಹೆತ್ತ ಕರುಳ ಬಳ್ಳಿ ಗಳು ಎಲ್ಲೇ ಇದ್ದರೂ ಚೆನ್ನಾಗಿ ಇರಲಿ ಎಂಬುದಷ್ಟೇ ಅವಳ ಆಶಯವಾಗಿತ್ತು... ಮತ್ತೆ ಗೋಣಿಯಂತ ಹೊದಿಕೆ ಯನ್ನು ಹೊದ್ದುಕೊಂಡು ಮಲಗಿದಳು ಅಜ್ಜಿ.......😔😔*

ನಮ್ಮದೇ ನಾಗರಿಕ ಸಮಾಜದಲ್ಲಿ ಚಂಡಾಳ ಮಕ್ಕಳು


*ಹೊದಿಕೆ ಯೊಳಗೆ ಅಳುತಿದ್ದಳು, ಕಣ್ಣೀರು ಕೂಡ ಬತ್ತಿ ಹೋಗಿದ್ದವು ಆದರೆ ತನ್ನ ಕರುಳು ಬಳ್ಳಿ ಗಳು ತನಗೆಸೆದ ದ್ರೋಹಕ್ಕೆ ಪ್ರತೀಕಾರ ಮಾತ್ರ ಆ ತಾಯಿ ಹೃದಯದಲ್ಲಿರಲಿಲ್ಲ.....*😔😔
*ಯಾಕೆಂದರೆ*

*ಆ ನೆನಪುಗಳು... ಆಕೇಯೊಂದಿಗೇ ಮಣ್ಣು ಸೇರಬೇಕೆಂದು ಕೊಂಡಿದ್ದಳು ಆಕೆ 😔😔.*....

*ಇದು ಸರೋಜಮ್ಮ ಎಂಬ ಉಡುಪಿಯ ನಿರ್ಗತಿಕರ ವೃದ್ದೆ ರೊಬ್ಬರ... ಹೃದಯ ವಿದ್ರಾವಕ ಕಥೆ.. ವಿಪರ್ಯಾಸ ವೆಂದರೆ ಇಂತಹ ಮಹಾತಾಯಿಯರು ಊರು ಊರು ಗಳಲ್ಲೂ ಕಾಣ ಸಿಗುತ್ತಾರೆ... ಚಂಡಾಳ... ಮಕ್ಕಳೂ ಇದ್ದಾರೆ ನಮ್ಮದೇ ನಾಗರಿಕ ಸಮಾಜದಲ್ಲಿ... ನಿಜಕ್ಕೂ ನಾವು ಮುಂದುವರಿಯುವ ದಾವಂತದಲ್ಲಿ ಮತ್ತೆ ಅನಾಗರೀಕತೆ ಯತ್ತ ಸಾಗುತ್ತಿದ್ದೇವೋ ಎಂಬ ಪ್ರಶ್ನೆಯೊಂದು ಪ್ರಶ್ನೆಯಾಗೆ ಉಳಿದಿದೆ😔😔....*

–>