-->

Simple home remedies for oral health care

ಬಾಯಿಯ ಆರೋಗ್ಯ ಸಮಸ್ಯೆಗಳಿಗೆ ಸಿಂಪಲ್ ಹಾಗೂ ಪವರ್‌ಫುಲ್ ಮನೆಮದ್ದುಗಳು

ನಮ್ಮ ದೇಹದ ಒಳಭಾಗದಲ್ಲಿ ನಡೆಯುವ ಕೆಲವೊಂದು ಸಮಸ್ಯೆಗಳನ್ನು ಪತ್ತೆಹಚ್ಚಿ ಆದಷ್ಟು ಬೇಕು ಗುಣಪಡಿಸಿಕೊಳ್ಳಬೇಕು. ಇಲ್ಲಾಂದ್ರೆ ಇದೇ ಸಮಸ್ಯೆ ಕೆಲವೊಮ್ಮೆ ದೊಡ್ಡದಾಗಿ ಬೆಳೆದು ಬಿಟ್ಟು, ನೆಮ್ಮದಿಯೇ ಇಲ್ಲದ ಹಾಗೆ ಮಾಡಿಬಿಡುತ್ತದೆ! ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಬಾಯಿಯ ಆರೋಗ್ಯ...

ಹೌದು ಬಾಯಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು. ಏಕೆಂದರೆ ನಾವು ಸೇವನೆ ಮಾಡುವ ಆಹಾರ ಕೆಲವೊಮ್ಮೆ ಹಲ್ಲುಗಳ ಸಂದುಗಳಲ್ಲಿ ಹಾಗೆ ಉಳಿದು ಬಾಯಿಯ ದುರ್ವಾನೆಗೆ ಕಾರಣವಾಗಿ ಬಿಡುತ್ತದೆ, ಅಷ್ಟೇ ಅಲ್ಲದೇ ಹಲ್ಲು ಹಾಗೂ ವಸಡುಗಳ ಕಾಯಿಲೆಗಳಿಗೆ ಕಾರಣವಾಗುವ ಕೆಲವೊಂದು ಬ್ಯಾಕ್ಟೀರಿಯಗಳು ಉತ್ಪತ್ತಿ ಆಗಲು ಇದು ಅನುಕೂಲ ಮಾಡಿ ಕೊಡುತ್ತದೆ.

ಬನ್ನಿ ಇಂದಿನ ಲೇಖನದಲ್ಲಿ ಬಾಯಿಗೆ ಸಂಬಂಧಪಟ್ಟಂತೆ ಇರುವ ಆರೋಗ್ಯದ ತೊಂದರೆಗಳನ್ನು ಸುಲಭವಾಗಿ ಮನೆಯಲ್ಲಿ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ, ಮುಂದೆ ಓದಿ...
 

ಉಪ್ಪು ನೀರು ಬಳಿಸಿ

ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರತಿ ದಿನ ಎರಡು ಬಾರಿ ಹಲ್ಲುಜ್ಜುವುದು ಮಾತ್ರ ಅಲ್ಲದೆ ನಾಲಿಗೆಯನ್ನು ಚೆನ್ನಾಗಿ ತಿಕ್ಕುವುದರ ಜೊತೆಗೆ ಪ್ರತಿ ದಿನ ಉಪ್ಪಿನ ನೀರಿನಿಂದ ಬಾಯಿ ಮುಕ್ಕಳಿಸುವ ಅಭ್ಯಾಸ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು . ಇದು ಹಲ್ಲುಗಳ ಸದೃಢತೆಯನ್ನು ಕಾಪಾಡುವುದರ ಜೊತೆಗೆ ವಸಡುಗಳ ರಕ್ತ ಸ್ರಾವವನ್ನು ನಿಯಂತ್ರಣ ಮಾಡುತ್ತದೆ ಎಂದು ಹೇಳುತ್ತಾರೆ.

ಲವಂಗ

ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಲವಂಗವು ಇದ್ದೇ ಇರುವುದು. ಹೀಗಾಗಿ ಹಲ್ಲು ನೋವು ಕಡಿಮೆ ಮಾಡಲು ಲವಂಗವನ್ನು ವಿವಿಧ ರೀತಿಯಿಂದ ಬಳಕೆ ಮಾಡಬಹುದು. ಉದಾಹರಣೆಗೆ ಲವಂಗದ ಎಣ್ಣೆ, ಲವಂಗದ ಹುಡಿ ಮತ್ತು ಇಡೀ ಲವಂಗವನ್ನು ಬಳಸಿ ಕೊಳ್ಳಬಹುದು

ಲವಂಗದ ಎಣ್ಣೆ ಬಳಕೆ ಮಾಡುತ್ತಲಿದ್ದರೆ, ಆಗ ಒಂದು ಹತ್ತಿ ಉಂಡೆಗೆ ಕೆಲವು ಹನಿ ಲವಂಗದ ಎಣ್ಣೆಯನ್ನು ಹಾಕಿಕೊಂಡು ಅದನ್ನು ನೋವಿರುವ ಹಲ್ಲಿನ ಭಾಗಕ್ಕೆ ಇಟ್ಟುಬಿಡಿ. ಇಲ್ಲಾಂದ್ರೆ ಇಡೀ ಲವಂಗವನ್ನು ಹಲ್ಲಿನ ಮೇಲೆ ಇಟ್ಟುಕೊಂಡು ಹಾಗೆ ಅದನ್ನು ಜಗಿಯಿರಿ. ಇದನ್ನು ಹಾಗೆ 30 ನಿಮಿಷ ಕಾಲ ಹಲ್ಲಿನಲ್ಲಿಡಿ.

ಪುದೀನಾ ಎಣ್ಣೆ

ಹಲ್ಲು ನೋವು ನಿವಾರಣೆ ಮಾಡಲು 10-15 ಹನಿಯಷ್ಟು ಪುದೀನಾ ಎಣ್ಣೆಯನ್ನು ಎರಡು ಚಮಚದಷ್ಟು ತೆಂಗಿನ ಎಣ್ಣೆಯ ಜತೆಗೆ ಮಿಶ್ರಣ ಮಾಡಿಕೊಳ್ಳಿ. ಇನ್ನು ಒಂದು ಹತ್ತಿ ಉಂಡೆಯ ಸಹಾಯದಿಂದ, ಈ ಮಿಶ್ರಣದಲ್ಲಿ ಅದ್ದಿಕೊಂಡು ಹಲ್ಲು ನೋವಿರುವ ಕಡೆ ಇಟ್ಟುಬಿಡಿ.

ಬಾಳೆಹಣ್ಣಿನ ಸಿಪ್ಪೆ ಬಳಸಿ

ಬಾಳೆಹಣ್ಣು ತಿಂದು ಸಿಪ್ಪೆಯನ್ನು ಅಲ್ಲೋ ಇಲ್ಲೋ ಎಸೆದು ಬಿಡುವ ಬದಲು ಅದರಿಂದ ನಿಮ್ಮ ಹಲ್ಲುಗಳ ಮೇಲ್ಭಾಗದಲ್ಲಿ ಉಜ್ಜಿಕೊಂಡು ಆನಂತರ 15 ನಿಮಿಷಗಳಲ್ಲಿ ಬಾಯಿ ತೊಳೆದು ಕೊಂಡರೆ, ಹಲ್ಲುಗಳ ಮೇಲ್ಭಾದಲ್ಲಿ ಕಂಡುಬರುವ ಕಲೆಗಳು ಮಾಯವಾಗಿ, ಪಳಪಳನೆ ಹೊಳೆಯುವ ಹಲ್ಲುಗಳು ನಿಮ್ಮದಾಗುತ್ತವೆ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಹೀಗೆ ಮಾಡಿದರೆ, ಒಳ್ಳೆಯದು.

Simple home remedies for oral health care


ಬಾಯಿ ವಾಸನೆ ಸಮಸ್ಯೆಗೆ ಏಲಕ್ಕಿ

ಏಲಕ್ಕಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯಿಂದ ಬರುವ ದುರ್ವಾಸನೆ ಇಲ್ಲಾಂದ್ರ ಬಾಯಿಯ ವಾಸನೆ ಸಮಸ್ಯೆ ಕಮ್ಮಿ ಆಗುತ್ತದೆ. ಮಧ್ಯಾಹ್ನ ಊಟ ಮಾಡಿದ ನಂತರ ಅಥವಾ ರಾತ್ರಿ ಸಮಯದಲ್ಲಿ ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯುವುದರಿಂದ ಅಥವಾ ಬೆಳಗಿನ ಸಮಯದಲ್ಲಿ ಏಲಕ್ಕಿ ಚಹಾ ತಯಾರು ಮಾಡಿ ಕುಡಿಯುವ ಅಭ್ಯಾಸ ಇಟ್ಟುಕೊಳ್ಳು ವುದರಿಂದ ಬಾಯಿಯ ದುರ್ವಾಸನೆ ಖಂಡಿತವಾಗಿ ದೂರವಾಗುತ್ತದೆ.

ಹಲ್ಲುಗಳ ಹಾಗೂ ವಸಡಿನ ಸಮಸ್ಯೆಗೆ ಶುಂಠಿ

ನೂರಾರು ವರ್ಷಗಳ ಹಿಂದಿನಿಂದಲೂ ಶುಂಠಿಯನ್ನು ನಮ್ಮ ಆಯುರ್ವೇದ ಪಂಡಿತರು ತಯಾರು ಮಾಡುವ ಮನೆ ಮದ್ದುಗಳಲ್ಲಿ ಬಳಕೆಯಾಗುತ್ತಾ ಬಂದಿದೆ. ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ ಇದರಲ್ಲಿ ಆಂಟಿ - ಆಕ್ಸಿಡೆಂಟ್ ಮತ್ತು ಗುಣ - ಲಕ್ಷಣಗಳು ಹೆಚ್ಚಾಗಿರುವುದರಿಂದ ಹಲ್ಲುಗಳ ವಸಡಿನ ಭಾಗದಲ್ಲಿ ಮತ್ತು ಹಲ್ಲುಗಳ ಬೇರುಗಳಲ್ಲಿ ಕಂಡು ಬರುವ ಬ್ಯಾಕ್ಟೀರಿಯಾಗಳನ್ನು ಇದು ತೆಗೆದು ಹಾಕುತ್ತದೆ.

ಇದಕ್ಕಾಗಿ ಸುಮಾರು ಅರ್ಧ ಇಂಚು ಶುಂಠಿಯನ್ನು ಸ್ವಲ್ಪ ಜಜ್ಜಿ ರಸ ತೆಗೆಯಿರಿ. ಇನ್ನು ಇದಕ್ಕೆ ಅರ್ಧ ಟೀ ಚಮಚ ಉಪ್ಪು ಹಾಕಿ ಬೆರೆಸಿ ನಯವಾದ ಪೇಸ್ಟ್ ತಯಾರು ಮಾಡಿಕೊಂಡು ಹಲ್ಲು ಹಾಗೂ ವಸಡುಗಳ ಮೇಲೆ ಅನ್ವಯಿಸಿ.

ಸುಮಾರು ಹತ್ತು ನಿಮಿಷಗಳ ನಂತರ ನಿಮ್ಮ ಬಾಯಿಯನ್ನು ತೊಳೆದುಕೊಳ್ಳಿ. ದಿನದಲ್ಲಿ 2 ರಿಂದ 3 ಬಾರಿ ಇದೇ ರೀತಿ ಮಾಡುವುದರಿಂದ ನಿಮ್ಮ ಹಲ್ಲುಗಳ ನೋವು ಮತ್ತು ಒಸಡುಗಳ ಊತ ಕಡಿಮೆಯಾಗುತ್ತದೆ.

ನಿಂಬೆ ಹಣ್ಣಿನ ರಸ

ಸಿಟ್ರಸ್ ಜಾತಿಗೆ ಸೇರಿದ ಈ ನಿಂಬೆ ಹಣ್ಣಿನಲ್ಲಿ, ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ಆಂಟಿ - ಬ್ಯಾಕ್ಟೇರಿಯಾಲ್ ಮತ್ತು ಆಂಟಿ - ಮೈಕ್ರೋಬಿಯಲ್ ಗುಣ ಲಕ್ಷಣಗಳು ಕೂಡ ಯಥೇಚ್ಛವಾಗಿ ಕಂಡು ಬರುತ್ತದೆ. ಜೊತೆಗೆ ತನ್ನ ಆಂಟಿ - ಇಂಪ್ಲಾಮೇಟರಿ ಗುಣ ಲಕ್ಷಣಗಳಿಂದ ಬಾಯಿಯ ಬ್ಯಾಕ್ಟಿರಿಯಾ ನಿವಾರಣೆ ಮಾಡುವುದರ ಜೊತೆಗೆ ನೋವಿನ ನಿವಾರಣೆ ಕೂಡ ಅತ್ಯದ್ಭುತವಾಗಿ ನಡೆಯುತ್ತದೆ.

ಒಂದು ಲೋಟ ಬಿಸಿ ನೀರಿಗೆ ಒಂದು ಟೇಬಲ್ ಚಮಚ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಿ ಅದರ ನೀರಿನಿಂದ ದಿನದಲ್ಲಿ ಎರಡು ಬಾರಿ ಬಾಯಿ ಮುಕ್ಕಳಿಸುವ ಅಭ್ಯಾಸ ಇಟ್ಟುಕೊಳ್ಳಬೇಕು.ಇದರಿಂದ ಹಲ್ಲು ನೋವು ಮತ್ತು ವಸಡುಗಳ ಊತ ನಿಯಂತ್ರಣಕ್ಕೆ ಬರುತ್ತದೆ.

–>