-->

ಕುರುವಂಶದ ಕತೆ , ಮಹಾಭಾರತ ಸಾರ

ಗಾಂಧಾರಿಯು ತನ್ನ ಗರ್ಭವನ್ನು ತಾನೆ ಜಜ್ಜಿಕೊಂಡಿದ್ದಾಳೆ ಎಂಬ ವಾರ್ತೆ ಕೇಳಿದ ಕೇಶವನ ಅವತಾರಿಯಾದ  ವ್ಯಾಸರು ಅಲ್ಲಿಗೆ ಬಂದಿದ್ದಾರೆ. ಆ ಗರ್ಭವನ್ನು‌ಅನೇಕ ಚೂರುಗಳನ್ನು ಮಾಡಿ ಒಂದು  ಗಡಿಗೆ (ಘಟ)ದಲ್ಲಿ ತುಂಬಿದರು. ನೂರಾ ಒಂದು ಚೂರು ಮಾಡಿದ್ದಾರೆ. ಆ ನೂರು ಭಾಗಗಳಿಂದ (ದುರ್ಯೋಧನ) ನೇ ಮೊದಲಾದ  ನೂರು ಜನ‌ ಅಣ್ಣತಮ್ಮಂದಿರು ಹುಟ್ಟಿಕೊಂಡರು. ನಂತರ ನೂರಾ ಒಂದನೇ ಭಾಗದಿಂದ ದುಶ್ಯಲೆ‌ ಎಂಬ ಕನ್ಯ ಹುಟ್ಟಿಕೊಂಡಳು.
ಧೃತರಾಷ್ಟ್ರನ ಹಿರಿಯ ಪುತ್ರನನ್ನು ಎಲ್ಲರೂ ದುಯೋರ್ಧದನ ಎಂದು ಕರೆದರೆ ಧರ್ಮರಾಜ ಮಾತ್ರ ಸುಯೋಧನ ಎಂದು ಕರೆಯುತ್ತಿದ್ದನು. ಇದರಿಂದ‌ ಧರ್ಮನ ಸಂಸ್ಕೃತಿ ವ್ಯಕ್ತವಾಗುತ್ತದೆ.
ಪರಮಾತ್ಮನ ಕಾರ್ಯವನ್ನು  ಸಿದ್ಧಿಸುವುದಕ್ಕಾಗಿ ಪ್ರಭುವಾದ ಪರಾಶರಾತ್ಮಜ ವ್ಯಾಸರು ವಿಚಿತ್ರ ವೀರ್ಯ ವಂಶದ ಆ ಗರ್ಭವನ್ನು ರಕ್ಷಿಸಿದರು. ಇದುವೆ ಭಗವಂತ ಕೃಷ್ಣಾವತಾರದ  ಪೀಠಿಕೆ.
ಕಲಿಯೇ ದುರ್ಯೋಧನನಾಗಿ ಜನಿಸಿದ್ದಾನೆ. ಅವನು ಮಹಾ ಪರಾಕ್ರಮಿಯೂ ಹೌದು ಮತ್ತು ಆತನಲ್ಲಿ ಪ್ರಧಾನವಾಯುವಿನ ಸನ್ನಿಧಾನವಿರುವುದರಿಂದ ಅಧಿಕ ಬಲಶಾಲಿಯು ಆಗಿದ್ದಾನೆ.
ದುರ್ಯೋಧನ ಬಲಶಾಲಿಯಾಗಿರಲು ಇನ್ನೊಂದು ಕಾರಣವಿದೆ.
ಭೂಲೋಕದಲ್ಲಿ  ಹುಟ್ಟಬೇಕಾದರೆ ಮೇರುಪರ್ವತದ ಮೇಲ್ಬಾಗದಲ್ಲಿ ಜನಿಸಬೇಕು ಎಂಬ ಈ ಮಾತನ್ನು‌ ಸ್ವರ್ಗದಲ್ಲಿರುವ  ದೇವತೆಗಳಿಂದ ದೈತ್ಯರು ಮೊದಲೇ ಕೇಳಿದವರಾಗಿದ್ದರು.
ಹೀಗಾಗಿ ಕಲಿ ಮೊದಲಾದ ದೈತ್ಯರು ಮೇರು ಪರ್ವತಕ್ಕೆ  ಬಂದು ಮುಕ್ಕಣ್ಣನಾದ ರುದ್ರದೇವರನ್ನು ಕುರಿತು‌ ತಪಸ್ಸು ಮಾಡಿ,  ವ್ರತ ಕೈಗೊಂಡರು. ಆಗ  ಯಾರಿಂದಲೂ ಸಾಯದಿರಲಿ ಎಂದು ಕಲಿ ವರವನ್ನು ಪಡೆದನು. ಮೇರು ಪರ್ವತದ ಮೇಲ್ಬಾಗವು ಇಂದಿಗೂ  ದೇವತೆಗಳ ಬೀಡು ಎನಿಸಿಕೊಂಡಿದೆ.
ಕಲಿಯು ದೈತ್ಯರ ಮುಂದಾಳು  ಹಿಗಾಗಿ ಎಲ್ಲರೂ ತಮ್ಮ ಮುಂದಾಳುವಿನ ಯಶಸ್ಸಿಗಾಗಿ ಪ್ರಾರ್ಥಿಸಿಕೊಂಡರು.

ದಕುರುವಂಶದ ಕತೆ , ಮಹಾಭಾರತ ಸಾರ
ೇವ ಕಂಠಕನಾದ ಕಲಿಯು ಉಮಾಪತಿಯ ವರದ ಪ್ರಯುಕ್ತ  ಮಹಾ ಬಲಶಾಲಿಯಾಗಿ ವಜ್ರಕಾಯಕ್ಕೆ‌ ಸಮಾನವಾದ  ಗಟ್ಟಿದೇಹವನ್ನು ಪಡೆದನು. ಎಲ್ಲರಿಂದ ಅವಧ್ಯನಾದ ಆ ಸುಯೋಧನನು ಘೃತಘಟದಿಂದ  ಹೊರ ಬಂದ ನಂತರ  ಮತ್ತೊಂದು ತುಪ್ಪದ ಕೊಡದಿಂದ  ಅಂದಿನ ಇಂದ್ರಜೀತುವೇ ಮತ್ತೆ ದುಶ್ಯಾಸನ ನಾಗಿ ಹೊರಗೆ ಬಂದಿದ್ದಾನೆ.
ಇಂದ್ರಜೀತು ದುಃಖದ ಶಾಸನಕ್ಕೆ ಕಾರಣನಾದನು. ನಂತರ ಅತಿಯಾನು ವಿಕರ್ಣನಾಗಿ ಹುಟ್ಟಿದನು. ನಂತರ ಖರಾಸುರನ ಜನ್ಮವಾಯಿತು. ಅವನು ಮಹಾ ಬಲಶಾಲಿಯಾದನು. ಅಂದಿನ ಖರಾಸುರನೇ ಇಂದು ಚಿತ್ರಸೇನ ನಾಗಿ ಹೊರಬಂದನು. ಅನಂತರ ಅನೇಕ ರಾಕ್ಷಸರು ಮಹಾ ಪರಾಕ್ರಮಿಗಳಾಗಿ ಧೃತರಾಷ್ಟ್ರನ ಮಕ್ಕಳಾಗಿ ಹೊರ ಬಂದರು.
ಸಕಲ ದೋಷಗಳೆ  ಶರೀರಗಳನ್ನು ಧರಿಸಿ ಆ ಮಕ್ಕಳ ರೂಪದಲ್ಲಿ ಹೊರಬಂದರು. ಸುಳ್ಳಿನ ಹೆಸರೆ ಆ ದುಶ್ಯಲಳಾಗಿದ್ದಳು. ಕಳಾಹೀನ ಚಂದ್ರನಂತೆ ಕಾಣುತ್ತಿದ್ದಳು. ಅರ್ಜುನ ಮಗನನ್ನು ಕೊಲ್ಲುವುದಕ್ಕಾಗಿ ಅವಳು ತ್ರಿಶೂಲಿ ಕುರಿತು ತಪಸ್ಸು ಮಾಡುತ್ತಿದ್ದಳು. ಅವಳೆ ಇಲ್ಲಿ ಹುಟ್ಟಿಬಂದಿದ್ದಾಳೆ.
ಅರ್ಜುನನ ಮಗನನ್ನು ಕೊಂದವನು ಸೈಂಧವನಲ್ಲವೇ?. ಅದಕ್ಕೂದುಶ್ಯಲೆಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಉತ್ತರ ನಾಳೆ ತಿಳಿದುಕೊಳ್ಳೋಣ.

- ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ ( 9886465925 )

–>