-->

Few tips for parents on handling their kids

ಪ್ರತಿಯೊಬ್ಬರು ಓದಲೇ ಬೇಕಾದ ಒಂದು ಸಂದೇಶ . ಎಲ್ಲ ಪೋಷಕರ ಗಮನಕ್ಕೆ👇🏼..


👉🏻 ನಿಮ್ಮ ಮಕ್ಕಳು ಏನಾದರೂ ಬೇಕೆಂದು ಗಲಾಟೆ ಮಾಡಿದರೆ ಅದನ್ನು ನೀವು ನಿಮ್ಮ ಮಕ್ಕಳಿಗೆ ಕೂಡಲೇ ಕೊಟ್ಟರೆ. ಮುಂದೆ ಆ ಮಕ್ಕಳು ತಮಗೆ ಬೇಕಾದ್ದನ್ನು ಪಡೆಯಲು ಗಲಾಟೆಯೇ ಶ್ರೇಷ್ಠ ವಾದ ಮಾರ್ಗ ಎಂದು ತಿಳಿಯುತ್ತಾರೆ

👉🏻 ನಿಮ್ಮ ಮಕ್ಕಳು ಮಾತಿನಲ್ಲಿ ಅಸಭ್ಯ ಭಾಷೆಯನ್ನು ಬಳಸಿದಾಗ ನೀವದನ್ನು ತಮಾಷೆ ಎಂದು ನಕ್ಕು ಸುಮ್ಮನಾದರೆ ಮುಂದೆ ಆ ಮಕ್ಕಳು ಅಸಭ್ಯ ಭಾಷೆಯನ್ನೇ ಬಳಸುತ್ತಾರೆ ಸಭ್ಯ ಭಾಷೆಯನ್ನು ಕಲಿಯುವುದೇ ಇಲ್ಲ

👉🏻 ನಿಮ್ಮ ಮಕ್ಕಳಿಗೆ ಪೂಜೆ ಪುನಸ್ಕಾರ ದೇವರಿಗೆ ನಮಸ್ಕಾರ ಇವುಗಳನ್ನು ಈಗಲೇ ಹೇಳಿಕೊಡುವುದು ಬೇಡ ಮುಂದೆ ಅವರು ದೊಡ್ಡವರಾದ ಮೇಲೆ ಅವರೇ ಕಲಿತುಕೊಳ್ಳುತ್ತಾರೆ ಎಂಬುದು ನಿಮ್ಮ ಭಾವನೆಯೇ. ಹಾಗಾದರೆ ಅವರು ದೊಡ್ಡವರಾದಂತೆ ದೇವರಿಗೂ ಹೆದರುವುದಿಲ್ಲ ದೆವ್ವಕ್ಕೂ ಹೆದರುವುದಿಲ್ಲ ಕಡೆಗೆ ನಿಮಗೂ ಸಹ ಹೆದರುವುದಿಲ್ಲ.

👉🏻 ನಿಮ್ಮ ಮಕ್ಕಳು ತಪ್ಪು ಮಾಡಿದಾಗ ಅವರನ್ನು ದಂಡಿಸಿದರೆ ಅದರಿಂದ ಅವರಲ್ಲಿ ಒಂದು ಬಗೆಯ ಕೀಳು ರಿಮೆ ಬೆಳಸಿಕೊಳ್ಳುತ್ತಾರೆ ಎಂದುಕೊಳ್ಳುತ್ತೀರಾ. ಮುಂದೊಮ್ಮೆ ಅವರು ತಪ್ಪು ಮಾಡಿ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಟ್ಟರೆ ಆಗ ಅವರುಗಳು ಶಾಪ ಹಾಕುವುದು ಕಾನೂನಿಗಲ್ಲ ಬದಲಿಗೆ ನಿಮಗೆ ಶಾಪ ಹಾಕುತ್ತಾರೆ

👉🏻 ನಾವು ಸಣ್ಣವರಿದ್ದಾಗ ಬಡತನ ದಲ್ಲಿ ಇದ್ದೆವು ಈಗ ನಮ್ಮ ಮಕ್ಕಳೇಕೆ ಬಡತನ ದಲ್ಲಿರಬೇಕು ಎಂಬ ಕಾರಣಕ್ಕೆ ನಿಮ್ಮ ಮಕ್ಕಳಿಗೆ ಕೇಳಿದ ತಕ್ಷಣ ಪ್ಯಾಕೆಟ್ ಮನಿ ಕೊಟ್ಟು ಬೆಳಸಿದರೆ ಮುಂದೆ ಅವರು ಹಣ ಸಂಪಾದನೆ ಮಾಡಲು ಹೋಗುವುದೇ ಇಲ್ಲ, ಬದಲಿಗೆ ತಮ್ಮ ಖರ್ಚಿಗೆ ಹಣ ಹೊಂದಿಸುವ ಜವಾಬ್ದಾರಿ ನಿಮ್ಮದು ಎಂದು ಭಾವಿಸುತ್ತಾರೆ

👉🏻 ನಿಮ್ಮ ಮಕ್ಕಳು ಮನೆಯಲ್ಲಿ ಕೆಲ ವಸ್ತುಗಳನ್ನು ಚಲ್ಲಾಪಿಲಿಯಾಗಿ  ಬಿಸಾಡಿ ಅದನ್ನು ಸರಿಯಾಗಿ ಎತ್ತಿ ಇಡದಿದ್ದರೆ, ಮತ್ತು ನೀವೇ ಅದನ್ನು ಎತ್ತಿ ಇಟ್ಟರೆ ಮುಂದೆ ಅವರು ಮಾಡುವ ಎಲ್ಲ ಹೇರಾಪೇರಿಗಳನ್ನು ರಿಪೇರಿ ಮಾಡುವುದು ನಿಮ್ಮ ಕರ್ತವ್ಯ ಎಂದು ತಿಳಿಯುತ್ತಾರೆ.

Few tips for parents on handling their kids



👉🏻 ನಿಮ್ಮ ಮಕ್ಕಳಿಗೆ ಊಟ ತಿಂಡಿ, ಆಟ ಪಾಠ ಗಳ ವಿಷಯದಲ್ಲಿ ನಿಯಮಗಳನ್ನು ಹೇರುವುದು ಒಂದು ಬಗೆಯ ಅನಾಗರಿಕತೆ ಎಂದು ನೀವು ತಿಳಿದರೆ,ಮುಂದೆ ಅವರು ಅನಾಗರಿಕ ರಂತೆಯೇ ತಿನ್ನುವುದು ಮತ್ತು ಬದುಕುವುದನ್ನು ರೂಢಿಸಿಕೊಂಡರೆ ಅದಕ್ಕೆ ನೀವೇ ಜವಾಬ್ದಾರಿ ಯಾಗುತ್ತಿರಿ.

👉🏻 ನಿಮ್ಮ ಮಕ್ಕಳು ಶಾಲೆಯ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡರೆ ಆಗ ಅವರ ಮುಂದೆಯೇ ಶಾಲೆಯನ್ನೇ ದೂರಿದರೆ ,ಮುಂದೆ ಅವರುಗಳು ಶಾಲಾ ಕಾಲೇಜುಗಳಿಂದ ದೊರವೇ ಉಳಿಯುತ್ತಾರೆ. ಅದಕ್ಕೂ ನೀವೇ ಜವಾಬ್ದಾರರು.

👉🏻 ನಿಮ್ಮ ಮಕ್ಕಳ ಇಂದಿನ ಬದುಕು ಸಾಧ್ಯವಾದಷ್ಟು ಸರಾಗ ವಾಗಿರಬೇಕು, ಅವರುಗಳು ಕಷ್ಟವನ್ನೇ ಪಡಬಾರದು,ಎಂಬುದು ನಿಮ್ಮ ಅಪೇಕ್ಷೆ ಯಾದರೆ ಮುಂದೆ ಅವರು ತಮಗೆ ಎದುರಾದ ಕಷ್ಟವನ್ನು ಎದುರಿಸಲಾಗದೆ ಊರಿನಿಂದಲೇ ಪರಾರಿ ಯಾದರೆ/ಆತ್ಮಹತ್ಯೆ ಬಗ್ಗೆ ಚಿಂತಿದರೆ ಅದಕ್ಕೂ ನೀವೇ ಹೊಣೆ. ಆದ್ದರಿಂದ ನಿಮ್ಮ ಮಕ್ಕಳ ಬಗ್ಗೆ ಅತಿಯಾದ ಕಾಳಜಿ ಯೂ ಬೇಡ ಹಾಗೆಂದು ನಿರ್ಲಕ್ಷವೂ ಬೇಡ.

- ರವೀಂದ್ರ ಟಿ ಶಿವಮೊಗ್

–>