-->

ಉಪದೇಶ ಅಲ್ಲ.ಉಪಕಾರದ ಸಂತೋಷ - a short story

ಒಮ್ಮೆ ಒಬ್ಬ ಪತ್ರಕರ್ತ ಒಬ್ಬ ದೊಡ್ಡ ಶ್ರೀಮಂತನನ್ನು ಸಂದರ್ಶನ ಮಾಡಿತ್ತಿದ್ದ"ತಾವು ದೇಶದ  ಶ್ರೀಮಂತರಲ್ಲಿ ಒಬ್ಬರು.ಸುಖ ಭೋಗ.ಅದಕ್ಕೆ ಸಂಬಂಧಿಸಿದ ಎಲ್ಲವೂ ನಿಮ್ಮಲ್ಲಿದೆ.ಹೀಗಿರುವಾಗ ನೀವು ಅತ್ಯಂತ ಸುಖಿಗಳು ಎನ್ನುವುದು ಎಲ್ಲರ ಅನಿಸಿಕೆ.ಈ ಎಲ್ಲಾ ಸುಖ.ಸಂತೋಷಗಳಲ್ಲಿ ತಮಗೆ ಅತಿದೊಡ್ಡ ಸುಖ. ಸಂತೋಷ. ನಿರಾಳ.ನೆಮ್ಮದಿ ನೀಡಿದ ಸುಖ ಯಾವುದು?
~~~~
ಸಿರಿವಂತ ಹೇಳಿದ.... ನಾನು ಬದುಕಿನಲ್ಲಿ ನಾಲ್ಕು ಹಂತದ ಸುಖಗಳನ್ನು ನೋಡಿದ್ದೇನೆ.
ಮೊದಲನೆಯದು...ದುಡ್ಡು ಮಾಡುವ ಹಂತ...ಇದಕ್ಕಾಗಿ ಹಲವಾರು ರೀತಿಯ ಮೋಸ.ವಂಚನೆ.ಸುಳ್ಳು. ಎಲ್ಲವನ್ನೂ ಮಾಡಬೇಕಾಗಿ ಬಂದರು ಕೇರ್ ಮಾಡದೆ ಸಂಪಾದಿಸಿದೆ.ಆದರೆ..ಸಂಪತ್ತುಗಳನ್ನು ಕೂಡಿಹಾಕುವುದೇ ಸಂತೋಷವಲ್ಲ ಎಂದು ಅರ್ಥ ವಾಗಿ.ನಿಜವಾದ ಸುಖ ಎಲ್ಲಿದೆ ಎಂಬ ಯೋಚನೆಯಿಂದ ಸಂಪತ್ತನ್ನು ಅನುಭವಿಸಬೇಕು.ಆಗ ಸುಖ ಸಿಗುತ್ತದೆ ಎಂದುಕೊಂಡೆ ಆದರೆ ಹೇಗೆ.....
~~~~
ಬೆಲೆ ಬಾಳುವ ವಸ್ತುಗಳಿಂದ ಅಂದುಕೊಂಡು...ಅರಮನೆಯಂಥ ಮನೆ.ವಿಮಾನ. ಹಡಗು.ವಿಲ್ಲಾಗಳು ಎಲ್ಲವನ್ನೂ ಖರೀದಿಸಿ ಗುಡ್ಡೆ ಹಾಕಿಕೊಂಡೆ.ಬಯಸಿದ್ದು ಅಂಗೈಯಲ್ಲಿ ಬಂದು ಬೀಳುವಾಗ ಅದಕ್ಕೆ ಬೆಲೆ ಇರುವುದಿಲ್ಲ. ಹಸಿವಾದಾಗ ಹಳಸಿದ ಅನ್ನವೂ ಮೃಷ್ಠಾನ್ನದ ಪರಮಾನ್ನ ಎನಿಸುತ್ತದೆ. ದಣಿವಾದಾಗ ಎಲ್ಲಿ ಮಲಗಿದರು ನಿದ್ದೆ ಒತ್ತರಿಸಿಕೊಂಡು ಬರುತ್ತದೆ. ಹಾಗೆ ನನ್ನಲ್ಲಿರುವ ಈ ಬೆಲೆಕಟ್ಟಲಾಗದ ಸಂಗ್ರಹಕ್ಕೆ ಯಾವುದೇ ಬೆಲೆ ಇಲ್ಲ.ಎನ್ನುವ ಸತ್ಯ ಗೊತ್ತಾಗಿ.ಹಾಗಾದರೆ ನಿಜವಾದ ಸುಖ ಯಾವುದು ಎಂಬ ಕೊರಗು ಮತ್ತೆ ಶುರುವಾಯ್ತು.ಆಗ ಹೊಳೆದದ್ದು ಅಧಿಕಾರ ಮತ್ತು ಕೀರ್ತಿಗಳ ಯೋಚನೆ.....
~~~~~
ಸರಿ ಎಂದು ರಾಜಕೀಯಕ್ಕಿಳಿದೆ.ಡೈರೆಕ್ಟಾಗಿ ಅಲ್ಲದಿದ್ದರೂ ಇನ್ ಡೈರಕ್ಟಾಗಿ ದೇಶ.ರಾಜ್ಯಗಳ ಅಧಿಕಾರದ ಸೂತ್ರದಾರನಾಗಿ ಕಿಂಗ್ ಮೇಕರ್ ಎನಿಸಿಕೊಂಡೆ.ಅಧಿಕಾರದ ನಶೆ ತಲೆಗೇರಿದರೂ....ನಾನು ಹುಡುಕುತ್ತಿರುವುದು "ಇದಲ್ಲ.ಇದಲ್ಲ" ಎಂದು ನನ್ನ ಒಳಮನಸು ಚುಚ್ಚಿ ಚುಚ್ಚಿ ಕೂಗಿ ಕೂಗಿ ಹೇಳುತ್ತಿತ್ತು....
~~~~
ಹೀಗಿರುವಾಗ ಒಂದಿನ  ನನ್ನ ಫ಼್ರೆಂಡ್ ಒಬ್ಬ ಬಂದು ಒಂದು ಒಂದು ಬೇಡಿಕೆ ಇಟ್ಟ."ಅನಾಥ ಮಕ್ಕಳ ಆಶ್ರಮಕ್ಕೆ ನಿನ್ನಿಂದ ನೂರಾರು ಗಾಲಿ ಕುರ್ಚಿಗಳು ಬೇಕಾಗಿದೆ.ಅವುಗಳನ್ನು ನೀನು ಕೊಡಿಸಬೇಕು.ನಂತರ ಅವುಗಳ ವಿತರಣೆಗೆ ಬರಬೇಕು "ಎಂದು ಹೇಳಿದ. ಇದು ನಾನು ಕಂಡು ನೋಡಿರದ ಬದುಕಿನ ಇನ್ನೊಂದು ಮುಖ.ಆಯ್ತು ನೋಡೆಬಿಡೋಣ ಎಂದುಕೊಂಡು ಒಪ್ಪಿಕೊಂಡು ಹೋದೆ.....ಇಲ್ಲಿವರೆಗೂ ತೆವಳಿಕೊಂಡು ಹೋಗುತ್ತಿದ್ದ ಮಕ್ಕಳು ನಾನು ಕೊಡಿಸಿದ ಗಾಲಿ ಕುರ್ಚಿ ಮೇಲೆ ಕುಳಿತು ಚಲಿಸುತ್ತ.ನಗುತ್ತ.ಕೇಕೆ ಹಾಕಿಕೊಂಡು ಕುಪ್ಪಳಿಸುತ್ತಿದ್ದುದನ್ನು ನೋಡಿ ನನಗೆ ಗೊತ್ತಿಲ್ಲದೆ ನನ್ನ ಕಣ್ಣುಗಳು ತೇವಗೊಂಡವು....
~~~~
ಉಪದೇಶ ಅಲ್ಲ.ಉಪಕಾರದ ಸಂತೋಷ - a short story

 ಅವತ್ತಿನಿಂದ ನನ್ನ ಬದುಕು ಹೊಸ ಅಯಾಮ ಪಡೆದುಕೊಳ್ತು.ಇರುವವರಿಗಿಂತ ಇಲ್ಲದವರಿಗೆ.ಅನಗತ್ಯಕ್ಕಿಂತ ಅಗತ್ಯ ಇರುವವರಿಗೆ ಸಹಾಯ ಮಾಡುವುದರಲ್ಲಿ ಸಿಗುವ ತೃಪ್ತಿ. ಸಂತೋಷ...ನನ್ನಲ್ಲಿರುವ ಯಾವ ಐಷಾರಾಮಿ ವಸ್ತುಗಳಿಗೂ ಸಮವಲ್ಲ.ಅನ್ನುಸ್ತು.... ~~~~ ಇದಕ್ಕೂ ಮೀರಿದ ಒಂದು ಘಟನೆ ನನ್ನ ಬದುಕಿನಲ್ಲಿ ನೆಡೆಯಿತು.....ಯಾವುದೋ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿರಬೇಕಾದರೆ ಯಾರೋ ಕಾಲನ್ನು ಹಿಡಿಕೊಂಡಂತಾಗಿ ಬಗ್ಗಿ ನೋಡಿದಾಗ ಒಬ್ಬ ಚಿಕ್ಕ ಹುಡುಗ ನನ್ನ ಕಾಲನ್ನು ಭದ್ರವಾಗಿ ಹಿಡಿದುಕೊಂಡು ನನ್ನನ್ನೆ ನೋಡುತ್ತಿದ್ದ.ನಾನು ಆ ಹುಡುಗನನ್ನು ಹಿಡಿದೆತ್ತಿ" ಏಕೆ ಮಗು ಏನಾಯ್ತು.ಏನಾದರೂ ಬೇಕಿತ್ತಾ"ಎಂದು ಕೇಳಿದೆ.ಆ ಹುಡುಗ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಸುನಗುತ್ತ "ನಿಮ್ಮನ್ನು ಚೆನ್ನಾಗಿ ಕಣ್ಣೊಳಗೆ ಪ್ರಿಂಟ್ ಆಗುವ ಹಾಗೆ ನೋಡಬೇಕು " ಅಂದ.ನಾನು.. ನಗುತ್ತ "ನೋಡು ಕಂದ.ಆದ್ರೆ ಯಾಕೆ ನನ್ನ ನೋಡ್ಬೇಕು ಅಂತ ಹೇಳಿ ನೋಡು ಅಂದೆ".... ~~~~~ ಆದಕ್ಕೆ ಆ ಹುಡುಗ ....." ನಿಮ್ಮಿಂದ ನಮ್ಮ ಜೀವನ ಸುಖ ಸಂತೋಷದಿಂದ ನೆಡೆಯುತ್ತಿದೆ.ಇದಕ್ಕೆ ನಿಮಗೆ ಕೃತಜ್ಞತೆ ಹೇಳಿದರೆ ಅದು ತುಂಬಾ ಸಣ್ಣಮಾತಾಗುತ್ತದೆ.ನಮ್ಮ ಟೀಚರ್ ಹೇಳ್ತಿದ್ರೂ..ಎಲ್ಲರೂ ಒಂದಿನ ಸಾಯಬೇಕು.ಸತ್ತ ನಂತರ ಆ ದೇವರು ನಮಗೆ ಉಪಕಾರ. ಅಪಕಾರ ಮಾಡಿದವರ ಬಗ್ಗೆ ಕೇಳಿ ಅವರನ್ನು ಗುರುತಿಸಲು ಹೇಳುತ್ತಾನಂತೆ.ಆಗ ದೇವರ ಮುಂದೆ ನಿಮ್ಮನ್ನು ಗುರುತಿಸಬೇಕು.ಅವನಿಗೆ ನಿಮ್ಮನ್ನು ಪರಿಚಯ ಮಾಡಿಕೊಡಬೇಕು.....ಇವತ್ತು ನನ್ನ ಮತ್ತೆ ನನ್ನಂತೆ ಇರುವ ಸಾವಿರಾರು ಅಂಗವಿಕಲರು.ಬಡವರು.ಕಣ್ಣಿಲ್ಲದವರು.ಅನಾಥರು.ಅನಾರೋಗ್ಯ... ಮಕ್ಕಳಿಗೆ ಈ ಜಗತ್ತಿನ ಎಲ್ಲ ಸಂತೋಷ. ಸುಖ. ನಗು.ನೆಮ್ಮದಿ ಎಲ್ಲಕ್ಕಿಂತ ಹೆಚ್ಚಾಗಿ ನಮಗಾಗಿ ಯಾರೋ ಒಬ್ಬರು ಇದ್ದಾರೆ ಎನ್ನುವ ನಂಬಿಕೆ. ದೈರ್ಯ.ಭರವಸೆಗಳನ್ನು ಕೊಟ್ಟಿರುವವರು ಇವರು.ಅದಕ್ಕೆ ಪ್ರತಿಯಾಗಿ ನೀನು.....ಅವರು ನಮಗೆ ಕೊಟ್ಟಿರುವ ಎಲ್ಲ ಸುಖ. ಸಂತೋಷಗಳನ್ನು ಇವರಿಗೆ ಕೊಡು ಎಂದು.ದೇವರ ಹತ್ರ ಬೇಡಿಕೊಳ್ಳಬೇಕು.ಅದಕ್ಕಾಗಿ ನಿಮ್ಮ ಮುಖವನ್ನು ನನ್ನ ನೆನಪಿನಲ್ಲಿ ದಾಖಲು ಮಾಡಿಕೊಳ್ಳುತ್ತಿದ್ದೇನೆ"ಎಂದು ಹೇಳಿದ..... ~~~~~ ಆ ಹುಡುಗ ಹೇಳಿದ ಮಾತುಗಳ ಆ ಕ್ಷಣ....ನನ್ನ ಜೀವನದ ಅತ್ಯಂತ ಸುಖಮಯ ಕ್ಷಣ.ಆ ಆನಂದದ ಮುಂದೆ ಯಾವುದು ಶಾಶ್ವತವಲ್ಲ.ನಾನು ಹುಡುಕುತ್ತಿದ್ದ ಸುಖ ಇದೇ."ಬದುಕಲು ಆಸ್ತಿ ಬೇಕು. ಆದರೆ ಆಸ್ತಿ.. ಬದುಕಿನ ಸ್ಥಿತಿ ಗತಿಗಳನ್ನು ಬದಲಾಯಿಸಬಾರದು ಎಂಬ ಸತ್ಯ ಅರ್ಥವಾಗಿ ಬದುಕಿನ ಗತಿ ಈಗ ಬದಲಾಗಿದೆ".ಎನ್ನುತ್ತಾನೆ.ಶ್ರೀಮಂತನ ಉತ್ತರ ಕೇಳಿದ. ಪತ್ರಕರ್ತನ ಕಣ್ಣೊಳಗಿಂದ ನೆಲಕ್ಕೆ ಬಿದ್ದ ನೀರಲ್ಲಿ "ಪುನೀತ" ಭಾವದ ನೆರಳು ಭಾವಗೀತೆ ಹಾಡುತ್ತಿರುವಂತೆ ಕಾಣಿಸುತ್ತದೆ.
–>