-->

Haridasara Dinachari Kannada movie review , songs , trailer

Haridasa Dinachari captures a day in the life of the revered composer and saint, Purandara Dasa. The film portrays his devotion, daily rituals, and the creation of his iconic song "Jagadodharana" through vivid visuals and an inspiring narrative . The story delves into his spiritual journey and the impact of his music on society.

Gokul Iyer delivers a heartfelt performance, embodying the saint's devotion and humility. Sri Vidyabhushana adds depth to the film with his portrayal of a fellow devotee. Chalapathy, Ghanshyam K.V, Vasudeva Murthy K.N as other key characters brings authenticity to the film's portrayal of Purandara Dasa's life. Director Girish Nagaraja brings a nuanced approach to the film, balancing reverence with storytelling. The screenplay is well-crafted, offering a glimpse into Purandara Dasa's life without feeling overly dramatized. The film's pacing is steady, allowing the audience to immerse themselves in the spiritual journey. The film's music, composed by Sri Vidyabhushana, is a highlight. The soundtrack features devotional songs that are both soulful and uplifting, perfectly complementing the film's theme. The music adds an ethereal quality to the film, enhancing the overall viewing experience.

The film emphasizes the importance of devotion and humility in one's spiritual journey. It highlights how music can be a powerful tool for spiritual and social change. The story of Purandara Dasa serves as a reminder of the lasting impact one individual can have on society through their art and devotion.

Haridasara Dinachari Kannada movie review , songs , trailer

Listen , Share , Promote Original Kannada Music

Hanuman chalisa lyrics in kannada

ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥
ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥

ಧ್ಯಾನಂ
ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ ।
ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಮ್ ॥
ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ ।
ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ॥

ಚೌಪಾಈ
ಜಯ ಹನುಮಾನ ಜ್ಞಾನ ಗುಣ ಸಾಗರ ।
ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥

ರಾಮದೂತ ಅತುಲಿತ ಬಲಧಾಮಾ ।
ಅಂಜನಿ ಪುತ್ರ ಪವನಸುತ ನಾಮಾ ॥ 2 ॥

ಮಹಾವೀರ ವಿಕ್ರಮ ಬಜರಂಗೀ ।
ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥

ಕಂಚನ ವರಣ ವಿರಾಜ ಸುವೇಶಾ ।
ಕಾನನ ಕುಂಡಲ ಕುಂಚಿತ ಕೇಶಾ ॥ 4 ॥

ಹಾಥವಜ್ರ ಔ ಧ್ವಜಾ ವಿರಾಜೈ ।
ಕಾಂಥೇ ಮೂಂಜ ಜನೇವೂ ಸಾಜೈ ॥ 5॥

ಶಂಕರ ಸುವನ ಕೇಸರೀ ನಂದನ ।
ತೇಜ ಪ್ರತಾಪ ಮಹಾಜಗ ವಂದನ ॥ 6 ॥

ವಿದ್ಯಾವಾನ ಗುಣೀ ಅತಿ ಚಾತುರ ।
ರಾಮ ಕಾಜ ಕರಿವೇ ಕೋ ಆತುರ ॥ 7 ॥

ಪ್ರಭು ಚರಿತ್ರ ಸುನಿವೇ ಕೋ ರಸಿಯಾ ।
ರಾಮಲಖನ ಸೀತಾ ಮನ ಬಸಿಯಾ ॥ 8॥

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ ।
ವಿಕಟ ರೂಪಧರಿ ಲಂಕ ಜಲಾವಾ ॥ 9 ॥

ಭೀಮ ರೂಪಧರಿ ಅಸುರ ಸಂಹಾರೇ ।
ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥

ಲಾಯ ಸಂಜೀವನ ಲಖನ ಜಿಯಾಯೇ ।
ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥

ರಘುಪತಿ ಕೀನ್ಹೀ ಬಹುತ ಬಡಾಯೀ ।
ತುಮ ಮಮ ಪ್ರಿಯ ಭರತ ಸಮ ಭಾಯೀ ॥ 12 ॥

ಸಹಸ್ರ ವದನ ತುಮ್ಹರೋ ಯಶಗಾವೈ ।
ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥

ಸನಕಾದಿಕ ಬ್ರಹ್ಮಾದಿ ಮುನೀಶಾ ।
ನಾರದ ಶಾರದ ಸಹಿತ ಅಹೀಶಾ ॥ 14 ॥

ಯಮ ಕುಬೇರ ದಿಗಪಾಲ ಜಹಾಂ ತೇ ।
ಕವಿ ಕೋವಿದ ಕಹಿ ಸಕೇ ಕಹಾಂ ತೇ ॥ 15 ॥

ತುಮ ಉಪಕಾರ ಸುಗ್ರೀವಹಿ ಕೀನ್ಹಾ ।
ರಾಮ ಮಿಲಾಯ ರಾಜಪದ ದೀನ್ಹಾ ॥ 16 ॥

Hanuman chalisa lyrics in kannada



ತುಮ್ಹರೋ ಮಂತ್ರ ವಿಭೀಷಣ ಮಾನಾ ।
ಲಂಕೇಶ್ವರ ಭಯೇ ಸಬ ಜಗ ಜಾನಾ ॥ 17 ॥

ಯುಗ ಸಹಸ್ರ ಯೋಜನ ಪರ ಭಾನೂ ।
ಲೀಲ್ಯೋ ತಾಹಿ ಮಧುರ ಫಲ ಜಾನೂ ॥ 18 ॥

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ।
ಜಲಧಿ ಲಾಂಘಿ ಗಯೇ ಅಚರಜ ನಾಹೀ ॥ 19 ॥

ದುರ್ಗಮ ಕಾಜ ಜಗತ ಕೇ ಜೇತೇ ।
ಸುಗಮ ಅನುಗ್ರಹ ತುಮ್ಹರೇ ತೇತೇ ॥ 20 ॥

ರಾಮ ದುಆರೇ ತುಮ ರಖವಾರೇ ।
ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥

ಸಬ ಸುಖ ಲಹೈ ತುಮ್ಹಾರೀ ಶರಣಾ ।
ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥

ಆಪನ ತೇಜ ಸಮ್ಹಾರೋ ಆಪೈ ।
ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥

ಭೂತ ಪಿಶಾಚ ನಿಕಟ ನಹಿ ಆವೈ ।
ಮಹವೀರ ಜಬ ನಾಮ ಸುನಾವೈ ॥ 24 ॥

ನಾಸೈ ರೋಗ ಹರೈ ಸಬ ಪೀರಾ ।
ಜಪತ ನಿರಂತರ ಹನುಮತ ವೀರಾ ॥ 25 ॥

ಸಂಕಟ ಸೇ ಹನುಮಾನ ಛುಡಾವೈ ।
ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥

ಸಬ ಪರ ರಾಮ ತಪಸ್ವೀ ರಾಜಾ ।
ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥

ಔರ ಮನೋರಧ ಜೋ ಕೋಯಿ ಲಾವೈ ।
ತಾಸು ಅಮಿತ ಜೀವನ ಫಲ ಪಾವೈ ॥ 28 ॥

ಚಾರೋ ಯುಗ ಪ್ರತಾಪ ತುಮ್ಹಾರಾ ।
ಹೈ ಪ್ರಸಿದ್ಧ ಜಗತ ಉಜಿಯಾರಾ ॥ 29 ॥

ಸಾಧು ಸಂತ ಕೇ ತುಮ ರಖವಾರೇ ।
ಅಸುರ ನಿಕಂದನ ರಾಮ ದುಲಾರೇ ॥ 30 ॥

ಅಷ್ಠಸಿದ್ಧಿ ನವ ನಿಧಿ ಕೇ ದಾತಾ ।
ಅಸ ವರ ದೀನ್ಹ ಜಾನಕೀ ಮಾತಾ ॥ 31 ॥

ರಾಮ ರಸಾಯನ ತುಮ್ಹಾರೇ ಪಾಸಾ ।
ಸದಾ ರಹೋ ರಘುಪತಿ ಕೇ ದಾಸಾ ॥ 32 ॥

ತುಮ್ಹರೇ ಭಜನ ರಾಮಕೋ ಪಾವೈ ।
ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥

ಅಂತ ಕಾಲ ರಘುಪತಿ ಪುರಜಾಯೀ ।
ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥

ಔರ ದೇವತಾ ಚಿತ್ತ ನ ಧರಯೀ ।
ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥

ಸಂಕಟ ಕ(ಹ)ಟೈ ಮಿಟೈ ಸಬ ಪೀರಾ ।
ಜೋ ಸುಮಿರೈ ಹನುಮತ ಬಲ ವೀರಾ ॥ 36 ॥

ಜೈ ಜೈ ಜೈ ಹನುಮಾನ ಗೋಸಾಯೀ ।
ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥

ಜೋ ಶತ ವಾರ ಪಾಠ ಕರ ಕೋಯೀ ।
ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥

ಜೋ ಯಹ ಪಡೈ ಹನುಮಾನ ಚಾಲೀಸಾ ।
ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥

ತುಲಸೀದಾಸ ಸದಾ ಹರಿ ಚೇರಾ ।
ಕೀಜೈ ನಾಥ ಹೃದಯ ಮಹ ಡೇರಾ ॥ 40 ॥

*ದೋಹಾ*

*ಪವನ ತನಯ ಸಂಕಟ ಹರಣ - ಮಂಗಳ ಮೂರತಿ ರೂಪ್ ।*
*ರಾಮ ಲಖನ ಸೀತಾ ಸಹಿತ - ಹೃದಯ ಬಸಹು ಸುರಭೂಪ್ ॥*
*ಸಿಯಾವರ ರಾಮಚಂದ್ರಕೀ ಜಯ ।* *ಪವನಸುತ ಹನುಮಾನಕೀ ಜಯ । ಬೋಲೋ ಭಾಯೀ*

Sri Raghavendra Swamy sthothra slokas with summary meaning

ಶ್ರೀ ರಾಘವೇಂದ್ರ ಸ್ತೋತ್ರಂ

ಶ್ರೀ ಪೂರ್ಣಬೋಧ ಗುರುತೀರ್ಥ ಪಯೋಬ್ಧಿಪಾರಾ
ಕಾಮಾರಿಮಾಕ್ಷ ವಿಷಮಾಕ್ಷ ಶಿರಸ್ಪೃಶಂತೀ |
ಪೂರ್ವೋತ್ತರಾಽಮಿತ ತರಂಗ ಚರತ್ಸುಹಂಸಾ
ದೇವಾಲಿ ಸೇವಿತ ಪರಾಂಘ್ರಿಪಯೋಜಲಗ್ನಾ || ೧ ||


ಶ್ಲೋಕ 1

ಆನಂದ ಲೋಕಗಳನ್ನು ಕರುಣಿಸುವ ಆನಂದತೀರ್ಥರ ಶಾಸ್ತ್ರವೆಂಬ ಕ್ಷೀರಸಾಗರವೇ ಪರಿಧಿಯಾಗಿ ಉಳ್ಳ, ಕಾಮಕ್ರೋಧಾದಿಗಳಿಗೆ ಶತ್ರುವೆನಿಸಿರುವ ನಿಜವಾದ ತಿಳುವಳಿಕೆಎಂಬ ಒಳಗಣ್ಣುಳ್ಳ ಜ್ಞಾನಿಗಳಿಂದ ತಲೆಯಲ್ಲಿ ಧರಿಸಲ್ಪಡುವ, ಪೂರ್ವಪಕ್ಷ ಮತ್ತು ಸಿದ್ಧಾಂತಗಳನ್ನು ಅರಿತ ಪರಮಹಂಸರಿಂದಲೂ ಸೇವಿಸಲ್ಪಡುವ, ಚತುರ್ಮುಖನೇ ಮೊದಲಾದ ದೇವತಾವೃಂದದಿಂದ ಸೇವಿತನಾದ ಶ್ರೀಹರಿಯ ಪದಕಮಲಗಳಲ್ಲಿ ಅನುರಕ್ತವಾದ, ಕುರ್ವಾದಿಗಳ ಗರ್ವವನ್ನಡಿರಿಸುವ.

ಜೀವೇಶ ಭೇದ ಗುಣಪೂರ್ತಿ ಜಗತ್ಸುಸತ್ವ
ನೀಚೋಚ್ಚಭಾವ ಮುಖನಕ್ರ ಗಣೈಸ್ಸಮೇತಾ |
ದುರ್ವಾದ್ಯಜಾಪತಿಗಿಲೈರ್ಗುರು ರಾಘವೇಂದ್ರ
ವಾಗ್ದೇವತಾಸರಿದಮುಂ ವಿಮಲೀಕರೋತು || ೨ ||

ಶ್ಲೋಕ 2

 ಜೀವ ಜೀವರ ಭೇದ ಭಗವಂತನ ಗುಣಪೂರ್ಣತೆ, ಜಗತ್ತಿನ ಪಾರಮಾರ್ಥಿಕ  ಸತ್ಯತೆ, ಜೀವ, ಈಶ, ಹಾಗೂ ಜಡಗಳಲ್ಲಿರುವ ಭೇದಪಂಚಕ, ಮತ್ತು ಅವರಲ್ಲಿರುವ ತಾರತಮ್ಯಭಾವವೇ ಮೊದಲಾದ ತತ್ವಗಳೆಂಬ ಮೊಸಳೆಗಳಿಂದ ಕೂಡಿದ, ದೇವಗಂಗೆಯಂತೆ ಪರಮಪವಿತ್ರವಾದ, ಗುರುರಾಘವೇಂದ್ರರ ವಾಗ್ಗಂಗಾ ರೂಪದಲ್ಲಿರುವ ಅವರ ಗ್ರಂಥಗಳು ಆದರಿಸುವ ಭಕ್ತವರ್ಗವನ್ನು ಪರಿಶುದ್ಧರನ್ನಾಗಿಸಲಿ.

ಶ್ರೀರಾಘವೇಂದ್ರಸ್ಸಕಲಪ್ರದಾತಾ ಸ್ವಪಾದಕಂಜದ್ವಯ ಭಕ್ತಿಮದ್ಭ್ಯಃ |
ಅಘಾದ್ರಿಸಂಭೇದನ ದೃಷ್ಟಿವಜ್ರಃ ಕ್ಷಮಾಸುರೇಂದ್ರೋಽವತು ಮಾಂ ಸದಾಯಂ || ೩ ||


ಶ್ಲೋಕ 3 

 ತಾತ್ಪರ್ಯ-- ತಮ್ಮ ಪದಕಮಲಗಳಲ್ಲಿ ಭಕ್ತಿಮಾಡುವ ಸುಜನರಿಗೆ ಅವರವರ ಯೋಗ್ಯತೆಗನುಸಾರವಾಗಿ ಅವರ ಸಾಧನೆಗೆ ಪೂರಕವಾಗುವಂತೆ ಸಕಲ ಮನೋರಥಗಳನ್ನು ಕೊಡುವವರು, ತಿಳಿಯದೇ ಭಕ್ತರು ಮಾಡಿದ ಪರ್ವತಪ್ರಾಯವಾದ ಪಾಪಗಳನ್ನೂ ಅಂತೆಯೇ ಆಯಾ ಪಾಪಗಳಿಗೆ ಫಲರೂಪವಾಗಿ ಪ್ರಾಪ್ತವಾದ ಸಹಿಸಲಸಾಧ್ಯವಾದ ದುಃಖಗಳನ್ನೂ ಪರಿಹರಿಸುವ ವಜ್ರಾಯುಧಕ್ಕೆ ಸಮನಾದ ಕೃಪಾದೃಷ್ಠಿಯನ್ನು ಹೊಂದಿದವವರಾಗಿ ಎಲ್ಲಾ ಸುಜನರಿಗೂ ಗುರುಗಳೆನಿಸಿರುವ  ಶ್ರೀ ರಾಘವೇಂದ್ರರು ನಮ್ಮನ್ನು ಸದಾಕಾಲವೂ ಎಡಬಿಡದೇ ರಕ್ಷಿಸಲಿ.

ಶ್ರೀ ರಾಘವೇಂದ್ರೋ ಹರಿಪಾದಕಂಜ ನೀಷೇವಣಾಲ್ಲಬ್ಧ ಸಮಸ್ತ ಸಂಪತ್ |
ದೇವಸ್ವಭಾವೋ ದಿವಿಜದ್ರುಮೋಽಯ ಮಿಷ್ಟಪ್ರದೋಮೇ ಸತತಂ ಸ ಭೂಯಾತ್ || ೪ ||

ಶ್ಲೋಕ 4 

 ತಾತ್ಪರ್ಯ:-- ನಿರಂತರವಾಗಿ ತಾವು ನಡೆಸಿದ ಭಗವಂತನ  ಉಪಾಸನೆಯ ಫಲವಾಗಿ ಪರಿಶುದ್ಧವಾದ ಜ್ಞಾನವನ್ನು ಅಂತೆಯೇ ಸಕಲಸಂಪತ್ತುಗಳನ್ನೂ ಪಡೆದವರು ಶ್ರೀ ರಾಘವೇಂದ್ರರು ಭಗವಂತನಲ್ಲಿ ದೇವತೆಗಳಂತೆ ಭಕ್ತಿಮಾಡುವ ಸ್ವಭಾವವುಳ್ಳವರು ಹಾಗೂ ಶಾಂತಿ, ಪ್ರಸನ್ನತೆ ಮೊದಲಾದ ದೇವತಾ ಸ್ವಭಾವದಿಂದ ಕಂಗೊಳಿಸುವವರು, ದೇವತರುವಾದ ಕಲ್ಪವೃಕ್ಷದಂತೆ ಸೇವಿಸುವವರಿಗೆ ಸೇವೆಗೆ ಅನುರೂಪವಾದ ಫಲಗಳನ್ನು ಕೊಡುವ ಗುರುರಾಜರು ಎಲ್ಲರ ಬಯಕೆಗಳನ್ನು ಈಡೇರಿಸಲಿ.

ಭವ್ಯ-ಸ್ವರೂಪೋ ಭವ-ದುಃಖ-ತೂಲ-
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ |
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ || ೫ ||

ಶ್ಲೋಕ --5
ತಾತ್ಪರ್ಯ-- ನಯನಗಳಿಗೆ ಆಹ್ಲಾದವನ್ನುಂಟುಮಾಡುವ ಮನೋಹರವಾದ ಆಕೃತಿಯುಳ್ಳವರು ರಾಯರು. ಸಂಸಾರದಲ್ಲಿ ಜೀವರು ಅನುಭವಿಸುವ ಮಹಾದುಃಖಗಳೆಂಬ ಹತ್ತಿಗೆ ಅಗ್ನಿಪ್ರಾಯರು.ಸರ್ವದಾ ಭಗವಂತನ ಧ್ಯಾನದಿಂದ ಉಂಟಾದ ಸುಖ ಹಾಗೂ ಧೈರ್ಯಗಳಿಂದ ಕೂಡಿದವರಾಗಿ ಭಕ್ತರಿಗೆ ಒದಗುವ ಭೂತ ಪಿಶಾಚಿಗಳೇ ಮೊದಲಾದ ದುಷ್ಟಗ್ರಹಗಳ ಪೀಡೆಯನ್ನು ಪರಿಹರಿಸುವಲ್ಲಿ ಸಮರ್ಥರು .ದಾಟಲು ಆಸಾಧ್ಯವೆನಿಸಿರುವ ಸಂಸಾರಸಾಗರವನ್ನು ದಾಟುವಲ್ಲಿ ಸೇತುವೆಯಂತೆ ಇರುವ ಇಂತಹ ಗುರುಗಳು ನಮ್ಮನ್ನು ಕಾಪಾಡಲಿ.

ನಿರಸ್ತದೋಷೋ ನಿರವದ್ಯವೇಷಃ
ಪ್ರತ್ಯರ್ಥಿಮೂಕತ್ತ್ವನಿದಾನಭಾಷಃ
ವಿದ್ವತ್ಪರಿಜ್ಞೇಯ ಮಹಾವಿಶೇಷೋ
ವಾಗ್ವೈಖರೀನಿರ್ಜಿತಭವ್ಯಶೇಷಃ || ೬ ||

ಶ್ಲೋಕ --6
ತಾತ್ಪರ್ಯ-- ಕಾಮ ಕ್ರೋಧಾದಿಗಳೇ ಮೊದಲಾದ ದೋಷಗಳಿಂದ ದೂರಾದವರು ,ಯಾವುದೇ ವಿಧವಾದ ದುರ್ಲಕ್ಷಣಗಳಿಂದ ಕೂಡಿದವರಾಗದೇ ಲಕ್ಷಣೋಪೇತವಾದ ರೂಪಿನವರು ರಾಯರು.ಪರವಾದಿಗಳನ್ನೂ ಮೂಕರನ್ನಾಗಿಸುವಂತ ಮಾತುಗಾರರು , ಕೇವಲ ವಿದ್ವಜನರಿಂದಲೇ ತಿಳಿಯಲು ಯೋಗ್ಯವಾದ ಗುಣವಿಶೇಷವುಳ್ಳವರು. ತಮ್ಮ ವಾಕ್ಚಾತುರ್ಯದಿಂದ ಶೇಷ ಎಂಬ ವಾದಮಲ್ಲನನ್ನು ಗೆಲ್ಲಿದ ಗುರುರಾಜರು ನಮಗೆ ಜಯವಿತ್ತು ಸಲಹಲಿ.

ಸಂತಾನ ಸಂಪತ್ಪರಿಶುದ್ಧ ಭಕ್ತಿ ವಿಜ್ಞಾನವಾಗ್ದೇ ಹಸುಪಾಟವಾದೀನ್ |
ದತ್ವಾಶರೀರೋಽತ್ಥ ಸಮಸ್ತದೋಷಾನ್ ಹತ್ವಾ ಸ ನೋಽವ್ಯಾದ್ಗುರು ರಾಘವೇಂದ್ರಃ || ೭ ||

ಶ್ಲೋಕ 7
ತಾತ್ಪರ್ಯ--ಭಜಕರಿಗೆ, ಒಳ್ಳೆಯ ಸಂತಾನ, ಮದವೇರಿಸದ ಸಂಪತ್ತು, ಭಗವಂತನಲ್ಲಿ ದೃಢವಾದ ಮತ್ತು ನಿರ್ಮಲವಾದ ಭಕ್ತಿ, ಮೋಕ್ಷಪಯೋಗಿಯಾದ ತಿಳುವಳಿಕೆ , ಮಾತಿನಲ್ಲಿ ಚಾತುರ್ಯ ,ದೇಹದಲ್ಲಿ ನಿರೋಗಿತ್ವ   ಮುಂತಾದುವನ್ನು ಅನುಗ್ರಹಿಸುವ ಗುರುರಾಜರು ದೇಹ ಹಾಗೂ ಇಂದ್ರೀಯಗಳಲ್ಲಿ ಇರುವ ಸಮಸ್ತ ದೋಷಗಳನ್ನು  ಪರಿಹರಿಸಿ ನಿರಂತರವಾಗಿ ನಮ್ಮನ್ನು ರಕ್ಷಿಸಲಿ.

ಯತ್ಪಾದೋದಕಸಂಚಯಃ ಸುರನದೀ ಮುಖ್ಯಾಪಗಾಸಾಧಿತಾಽ
ಸಂಖ್ಯಾನುತ್ತಮ ಪುಣ್ಯಸಂಘ ವಿಲಸತ್ಪ್ರಖ್ಯಾತ ಪುಣ್ಯಾವಹಃ |
ದುಸ್ತಾಪತ್ರಯ ನಾಶನೋಭುವಿ ಮಹಾವಂದ್ಯಾ ಸುಪುತ್ರಪ್ರದೋ
ವ್ಯಂಗಸ್ವಂಗ ಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂಶ್ರಯೇ || ೮ ||

ಶ್ಲೋಕ -8
ತಾತ್ಪರ್ಯ--ಯಾವ ಪಾದೋದಕ ಸೇವನೆಯು, ದೇವನದಿಯಾದ ಗಂಗೆಯಲ್ಲಿ ಶಾಸ್ತ್ರೋಕ್ತವಾಗಿ ಮಿಂದ ಮಾತ್ರದಿ ಲಭಿಸುವ ಅಗಣಿತವಾದ ಪುಣ್ಯರಾಶಿಯಂತೆ ಪುಣ್ಯವನ್ನು ಕೊಡುವ ಸಾಮರ್ಥ್ಯವುಳ್ಳದಾಗಿದೆಯೋ, ಯಾವ ಪಾದೋದಕವು ಭಜಕರ ತಾಪತ್ರಯವನ್ನು  ದೂರ ಗೊಳಿಸುವುದೋ, ಲೋಕದಲ್ಲಿ ಬಂಜೆ ಎನಿಸಿರುವ ಸ್ತ್ರೀಗೂ ಸಂತಾನವನ್ನು ಕೊಡುವಲ್ಲಿ, ವಿಕಲಾಂಗರಿಗೆ ಉತ್ತಮವಾದ ಅಂಗಸಂಪತ್ತನೀಯುವಲ್ಲಿ, ದುಷ್ಟಗ್ರಹಗಳನ್ನು, ರೋಗಾದಿಗಳನ್ನು ಹಾಗೂ ಮಹಾಪಾಪಗಳನ್ನು ಪರಿಹರಿಸುವಲ್ಲಿ ಯಾವ ಪಾದೋದಕವು ಸಮರ್ಥವಾಗಿದೆಯೋ ಅಂತಹ ಪಾದೋದಕ ಮಹಿಮೆಯುಳ್ಳ ಗುರುರಾಜರ ಪದಕಮಲಗಳನ್ನು ಸರ್ವದಾ ಸೇವಿಸುತ್ತೇನೆ.

ಯತ್ಪಾದಕಂಜರಜಸಾ ಪರಿಭೂಷಿತಾಂಗಾ
ಯತ್ಪಾದಪದ್ಮ ಮಧುಪಾಯಿತ ಮಾನಸಾ ಯೇ |
ಯತ್ಪಾದಪದ್ಮ ಪರಿಕೀರ್ತನ ಜೀರ್ಣವಾಚಃ
ತದ್ದರ್ಶನಂ ದುರಿತಕಾನನ ದಾವಭೂತಂ || ೯ ||

ಶ್ಲೋಕ --9
ತಾತ್ಪರ್ಯ-- ಯಾರು ಗುರುರಾಯರ ಪದಕಮಲಗಳ ಧೂಳಿಯಿಂದ ತಮ್ಮೆಲ್ಲಾ ಅಂಗಾಂಗಗಳನ್ನು ಅಲಂಕರಿಸಿಕೊಂಡಿರುವರೋ, ಯಾರು ಗುರುಗಳ ಪದಕಂಜದಲ್ಲಿಯೇ ದುಂಬಿಯಂತೆ ಸರ್ವದಾ ಆಸಕ್ತರಾಗಿರುವರೋ, ಹರಿಪ್ರಸಾದದಿಂದ ಲಭಿಸಿದ ಗುರುರಾಜರ ಉತ್ತಮವಾದ ಮಹತ್ಯದ ಕೀರ್ತನೆಯಿಂದ ತಮ್ಮ ಮಾತುಗಳನ್ನು ಯಾರು ಪಕ್ವಗೊಳಿಸಿಕೊಂಡಿರುವರೋ ಅಂತಹ ಭಕ್ತರ ಸಂದರ್ಶನವೇ ಅರಣ್ಯಕ್ಕೆ ಕಾಳ್ಗಿಚ್ಚಿನಂತೆ, ಪಾಪಗಳೆಂಬ ಮರಗಳನ್ನು ಭಸ್ಮೀಕರಿಸಬಲ್ಲದು. ಅಂದಮೇಲೆ ಗುರುಗಳ ದರ್ಶನ, ಸೇವನ ಮುಂತಾದವುಗಳಿಂದ ಉಂಟಾಗುವ ಫಲಗಳ ಕುರಿತು ಹೇಳುವುದೇನಿದೆ.?

ಸರ್ವತಂತ್ರ ಸ್ವತಂತ್ರೋಸೌ ಶ್ರೀಮಧ್ವಮತವರ್ಧನಃ |
ವಿಜಯೀಂದ್ರ ಕರಾಬ್ಜೋತ್ಥ ಸುಧೀಂದ್ರ ವರಪುತ್ರಕಃ || ೧೦ ||

ಶ್ಲೋಕ  -- 10
ತಾತ್ಪರ್ಯ-- ಸಕಲ ಶಾಸ್ತ್ರಗಳಲ್ಲಿಯೂ ತಲಸ್ಪರ್ಶಿಯಾದ ಪಾಂಡಿತ್ಯವನ್ನು ಹೊಂದಿದವರಾದ ಗುರುಗಳು, ಆಚಾರ್ಯಮಧ್ವರ ತತ್ವವಾದವನ್ನು ಅಭಿವೃದ್ಧಿಪಡಿಸಿದಂಥವರು. ಶ್ರೀ ವಿಜಯೀoದ್ರತೀರ್ಥರ ಕರಕಮಲ ಸಂಜಾತರಾದ ಶ್ರೀಸುಧೀಂದ್ರತೀರ್ಥರ ವರಕುಮಾರರಾಗಿ ಶ್ರೀರಾಘವೇಂದ್ರತೀರ್ಥ ರೆಂದು ಪ್ರಸಿದ್ಧರಾಗಿರುವರು.

ಶ್ರೀ ರಾಘವೇಂದ್ರೋ ಯತಿರಾಟ್ ಗುರುರ್ಮೇ ಸ್ಯಾದ್ಭಯಾಪಃ |
ಜ್ಞಾನಭಕ್ತಿ ಸುಪುತ್ರಾಯುರ್ಯಶಃ ಶ್ರೀ ಪುಣ್ಯವರ್ಧನಃ || ೧೧ ||

ಶ್ಲೋಕ--11
ತಾತ್ಪರ್ಯ-- ಅಂತಹ ಯತಿರಾಜರಾದ ಗುರುಗಳು ನಮಗೆ ಭಗವಂತನ ಅರಿವು ಹರಿಗುರುಗಳಲ್ಲಿ ಭಕುತಿ, ಒಳ್ಳೆಯಸಂತಾನ, ಆಯುಷ್ಯ, ಆಯಸ್ಸು,ಕಾಂತಿ ಮುಂತಾದವುಗಳನ್ನು ಕರುಣಿಸಿ, ಜೀವನದಲ್ಲಿ ಬರುವ ಎಲ್ಲ ವಿಧವಾದ ಭಯಗಳನ್ನು ಪರಿಹರಿಸಿ ನಮ್ಮನ್ನು ರಕ್ಷಿಸಲಿ.

ಪ್ರತಿವಾದಿ ಜಯಸ್ವಾಂತ ಭೇದಚಿಹ್ನಾದರೋ ಗುರುಃ |
ಸರ್ವವಿದ್ಯಾ ಪ್ರವೀಣಾನ್ಯೋ ರಾಘವೇಂದ್ರಾನ್ನವಿದ್ಯತೇ || ೧೨ ||

ಶ್ಲೋಕ --12
ತಾತ್ಪರ್ಯ--ತತ್ವವಾದಕ್ಕೆ ವಿರುದ್ಧವಾಗಿ ವಾದಿಸುವ ವಾದಮಲ್ಲರನ್ನು ಪರಾಜಿತರನ್ನಾಗಿ ಮಾಡಿ,ಅವರ ಮನವನ್ನು ಭೇದಿಸುವಲ್ಲಿ ಆದರವುಳ್ಳವರು,ಶಿಷ್ಯರ ಮನದ ಅಂದಕಾರವನ್ನು  ನೀಗಿಸುವರಾಗಿ ನಿಜವಾದ ಗುರುಗಳೆನಿಸಿ, ಸಕಲ ಶಾಸ್ತ್ರಗಳಲ್ಲೂ ಅನುಪಮವಾದ ಪ್ರಾವೀಣ್ಯವನ್ನು ಹೊಂದಿರುವರು ಇವರು. ಇಂತಹ ಗುರುರಾಜರನ್ನುಳಿದು ಜ್ಞಾನಿಗಳಾದ ಬೇರಾವ ಗುರುಗಳೂ[ಉತ್ತಮರನ್ನು ಬಿಟ್ಟು] ಜಗತ್ತಿನಲ್ಲಿ ಇಲ್ಲ.

ಅಪರೋಕ್ಷೀಕೃತ ಶ್ರೀಶಃ ಸಮುಪೇಕ್ಷಿತಭಾವಜಃ |
ಅಪೇಕ್ಷಿತ ಪ್ರದಾತಾನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೩ ||

ಶ್ಲೋಕ --13
ತಾತ್ಪರ್ಯ--ತಮ್ಮ ಅಸದೃಶವಾದ ಉಪಾಸನೆಯಿಂದ ಸಿರಿಯರಸನನ್ನು  ಪ್ರತ್ಯಕ್ಷೀಕರಿಸಿಕೊಂಡವರು, ಮನದ ಭಾವನೆಗಳೆನಿಸಿರುವ ಕಾಮ, ಕ್ರೋಧಾದಿಗಳನ್ನು ಉಪೇಕ್ಷಿಸಿದವರು, ಅಂತೆಯೇ ಭಕ್ತರ ಮನಸ್ಸಿನ ಕಾಮನೆಗಳನ್ನು ಪೂರೈಸುವವರೂ ಆದ ಶ್ರೀರಾಘವೇಂದ್ರರನ್ನು ಉಳಿದು ಬಯಸಿದ್ದನ್ನು ಕೊಡುವವರು[ಉತ್ತಮರನ್ನು ಬಿಟ್ಟು] ಲೋಕದಲ್ಲಿ ಅನ್ಯರಾರು ಇಲ್ಲ.

ದಯಾದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿತಃ |
ಶಾಪಾನುಗ್ರಹಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೪ ||

ಶ್ಲೋಕ --14
ತಾತ್ಪರ್ಯ-- ಆರ್ತರಾಗಿ ಬಂದ ಭಕ್ತರ ದುಃಖಗಳನ್ನು ಪರಿಹರಿಸುವ ದಯೆಯುಳ್ಳ, ಸುಜನರ ಮನದಿಂಗಿತವನ್ನು ಅರಿತು ಅದರಂತೆ ನಡೆಯಿಸುವ, ವಿಷಯಗಳಲ್ಲಿ ವಿರಕ್ತರಾದ, ಅತ್ಯುತ್ತಮವಾದ ಮಾತುಗಾರಿಕೆಯೇ ಮೊದಲಾದ ಸುಗುಣಗಳಿಂದ ಕೊಡಿದವರಾಗಿ, ದುಷ್ಟಜನರನ್ನು ಶಿಕ್ಷಿಸುವಲ್ಲಿ ಹಾಗೂ ಸುಜನರನ್ನು ರಕ್ಷಿಸುವಲ್ಲಿ ಸಮರ್ಥರಾದವರು ಶ್ರೀ ರಾಘವೇಂದ್ರರನ್ನು ಹೊರತು【ಉತ್ತಮರನ್ನು ಬಿಟ್ಟು】 ಮತ್ತಾರು ಇಲ್ಲ.

ಅಜ್ಞಾನ ವಿಸ್ಮೃತಿ ಭ್ರಾಂತಿ ಸಂಶಯಾಪಸ್ಮೃತಿಕ್ಷಯಾಃ |
ತಂದ್ರಾಕಂಪವಚಃ ಕೌಂಠ್ಯಮುಖಾಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ ಪ್ರಸಾದತಃ || ೧೫ ||

ಶ್ಲೋಕ --15
ತಾತ್ಪರ್ಯ--ಉತ್ತಮ ಜೀವನಿಗೆ ಕರ್ಮಾನುಸಾರ ಒದಗಬಹುದಾದ ಜ್ಞಾನದ ಅಭಾವರೂಪವಾದ ಅಜ್ಞಾನ ಮರೆವು,ತಪ್ಪಾದ ತಿಳುವಳಿಕೆ, ಡೋಲಾಯಮಾನ ಜ್ಞಾನವಾದ ಸಂಶಯ, ಅಪಸ್ಮಾರ,ಭಯಂಕರವಾದ ಕ್ಷಯರೋಗ,ಆಕಳಿಕೆ ಮತ್ತು ತೂಕಡಿಕೆ, ದೇಹದ ನಡುಗುವಿಕೆ, ತೊದಲುಮಾತು ಇವೇ ಮೊದಲಾದ ಇಂದ್ರಿಯಗಳಿಂದ ಉಂಟಾಗುವ ಆ ಎಲ್ಲಾ ದೋಷಗಳೂ ಗುರುರಾಘವೇಂದ್ರರ ಪ್ರಸಾದದಿಂದಾಗಿ ಸಮೂಲ ನಾಶಹೊಂದುವವು.

ಓಂ ಶ್ರೀರಾಘವೇಂದ್ರಾಯ ನಮಃ
ಇತ್ಯಷ್ಟಾಕ್ಷರಮಂತ್ರತಃ |
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ
ಸ್ಯುರ್ನಸಂಶಯಃ || ೧೬ ||

ಶ್ಲೋಕ--16
ತಾತ್ಪರ್ಯ--ಶ್ರೀ ರಾಘವೇಂದ್ರ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಸರ್ವದಾ ಜಪಿಸುವುದರಿಂದ ಮತ್ತು ಈ ಮಂತ್ರದ ಮೂಲಕ ಗುರುಗಳ ಅಂತರ್ಯಾಮಿಯಾದ ಶ್ರೀಹರಿಯನ್ನು ಧ್ಯಾನಿಸುವುದರಿಂದ ಸದುದ್ದೇಶದಿಂದ ಕೂಡಿದ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುದರಲ್ಲಿ ಯಾವ ಸಂಶಯವೂ ಇಲ್ಲ.

Sri Raghavendra sthothra with summary meaning


ಹಂತು ನಃ ಕಾಯಜಾನ್ ದೋಷಾನಾತ್ಮಾತ್ಮೀಯ ಸಮುದ್ಭವಾನ್ |
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ || ೧೭ ||

ಶ್ಲೋಕ--17
ತಾತ್ಪರ್ಯ-- ನಮ್ಮ ದೇಹದಿಂದ ಉಂಟಾಗುವ ದೂಷಗಳನ್ನೂ , ಮಾನಸಿಕವಾಗಿ ನಾವು ಮಾಡುವ ಅಪಚಾರವನ್ನೂ ಎಣಿಸದೆ ಆ ಎಲ್ಲ ಪಾಪಗಳನ್ನೂ ಗುರುರಾಜರು ಕಳೆಯಲಿ ಮತ್ತು ಭಗವಂತನನ್ನು ಸರ್ವದಾ ಕಾಣುವ ಅವರು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನಿತ್ತು ನಮ್ಮನ್ನು ಸಲಹಲಿ.

ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ |
ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ || ೧೮ ||

ಶ್ಲೋಕ--18
ತಾತ್ಪರ್ಯ-- ಈ ರೀತಿ ಹಿಂದೆ ತಿಳಿಸಿದಂತೆ, ಯಾರು ಪ್ರತಿದಿನವೂ ಮೂರುಹೊತ್ತು ಗುರುಗಳನ್ನು ಈ ಸ್ತೋತ್ರಪರಾಯಣದ ಮೂಲಕ ಪ್ರಾರ್ಥಿಸುವರೋ ಅಂತಹವರು ಇಹಪರಗಳಲ್ಲಿ ಸಕಲ ಇಷ್ಟಗಳನ್ನು ಹೊಂದಿ ಆನಂದದಿಂದ ಇರುವರು. ಇದರಲ್ಲಿ ಯಾವ ಸಂಶಯವೂ ಇಲ್ಲ.

ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ |
ಶ್ರೀ-ಮಧ್ವ-ಮತ-ದುಗ್ಧಾಬ್ಧಿ-ಚಂದ್ರೋಽವತು ಸದಾಽನಘಃ || ೧೯ ||

ಶ್ಲೋಕ--19
ತಾತ್ಪರ್ಯ--ಈ ಜಗತ್ತಿನಲ್ಲಿ ಯಾರಿಂದಲೂ ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲದ ಮಹಿಮೆಯುಳ್ಳವರು, ಅಸದೃಶವಾದ ಕೀರ್ತಿಸಂಪನ್ನರು, ಇವೆಲ್ಲಕ್ಕೂ ಕಲಶಪ್ರಾಯವಾಗಿ ಶ್ರೀಮದಾನಂದತೀರ್ಥರ ಸಿದ್ಧಾಂತವೆಂಬ ಪಾಲ್ಗಡಲಿಗೆ ಹುಣ್ಣಿಮೆಯ ಚಂದ್ರನಂತೆ ಪೊಳೆವ , ದೂಷವಿದೂರರಾದ ಶ್ರೀ ರಾಘವೇಂದ್ರರರು ಸರ್ವದಾ ನಮ್ಮನ್ನು ರಕ್ಷಿಸಲಿ.

ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ |
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ || ೨೦ ||

ಶ್ಲೋಕ --20
ತಾತ್ಪರ್ಯ--ಭರತಭೂಮಿಯ ದೇವನಿರ್ಮಿತಗಳಾದ ಸಮಸ್ತ ಪುಣ್ಯಕ್ಷೇತ್ರಗಳ ಸಂಚಾರದಿಂದ ಒದಗುವ ಪುಣ್ಯದ ಪ್ರಾಪ್ತಿಗಾಗಿ ನಿಮ್ಮ ಪ್ರದಕ್ಷಿಣೆಯನ್ನು ಶಕ್ತಿಗನುಸಾರವಾಗಿ ಮಾಡುತ್ತೇನೆ ಮತ್ತು ಎಲ್ಲಾ ಪಾವನ ತೀರ್ಥಗಳ ದರ್ಶನ,ಸ್ಪರ್ಶನ, ಸ್ನಾನ, ಪಾನಾದಿಗಳಿಂದ ಉಂಟಾಗುವ ಅತಿಶಯ ಪುಣ್ಯಫಲವನ್ನು ಬಯಸಿ ನಿಮ್ಮಯ ವೃಂದಾವನಕ್ಕೆ ಅಭಿಷೇಕ ಮಾಡಿದ ಜಲವನ್ನು ಭಕ್ತಿ ಶ್ರದ್ಧೆಗಳಿಂದ ತಲೆಯಲ್ಲಿ ಧರಿಸುತ್ತೇನೆ.

ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ || ೨೧ ||

ಶ್ಲೋಕ--21
ತಾತ್ಪರ್ಯ--ಬೇಡಿದವರ ಬಗೆಬಗೆಯ ಕಾಮನೆಗಳನ್ನು ಪೂರೈಸುವ ನಿಮಗೆ, ನನ್ನ ಎಲ್ಲ ತೆರನಾದ ಬಯಕೆಗಳನ್ನು ಹೊಂದುವುದಕ್ಕಾಗಿ ಭಕ್ತಿಯಿಂದ ನಮಿಸುತ್ತೇನೆ ಮತ್ತು ವೇದ, ಇತಿಹಾಸ, ಪುರಾಣಗಳೇ ಮೊದಲಾದ ಸಚ್ಚಾಸ್ತ್ರಗಳ ಯಥಾರ್ಥವಾದ ತಿಳುವಳಿಕೆಗಾಗಿ ಉತ್ತಮವಾದ ನಿಮ್ಮ ಚರಿತೆಯನ್ನು ಸರ್ವದಾ ಪಾಡುತ್ತಿರುತ್ತೇನೆ.

ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ-ಭಂಗಾಕುಲೇ |
ನಾನಾ-ವಿಭ್ರಮ-ದುರ್ಭ್ರಮೇಽಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ || ೨೨ ||

ಶ್ಲೋಕ-22 

ಸ್ವಾಭಾವಿಕವಾಗಿ ತಿಳಿಯಲು ಆಗದ ಆಳ, ಅಗಲಗಳಿಂದ ಕೂಡಿದ ಸಮುದ್ರದಂತೆ, ಸಂಸಾರವೆಂಬ ಸಮುದ್ರವು ಜನನ-ಮರಣಗಳೆಂಬ ಆಳ-ಅಗಲಗಳಿಂದ ಕೂಡಿದೆ. ಈ ಸಾಗರದಲ್ಲಿ ಸರ್ವರೀತಿಯ ಪಾಪಗಳೆಂಬ ಕ್ರೂರ ಜಲಚರ ಪ್ರಾಣಿಗಳು, ಕಾಮ, ಕ್ರೋಧಾದಿಗಳೆಂಬ ಅತ್ಯಂತ ರಭಸವಾದ ಅಲೆಗಳು, ನಾನಾ ವಿಧವಾದ ಸಂಸಾರಿಕವಾದ ವಿಲಾಸ ಹಾಗೂ ಭ್ರಾಂತಿಗಳೆಂಬ ಭಯಂಕರವಾದ ಸುಳಿಗಳು ಮತ್ತು ಎಣಿಸಲು ಆಗದ ನೊರೆಗಳು ಇದ್ದು ಮಹಾದುಃಖಗಳೆಂಬ ವಿಷದ ನೀರಿರುವುದು. ಇಂತಹ ಸಂಸಾರಸಾಗರದಲ್ಲಿ ಸರ್ವದಾ ಮುಳುಗಿಯೇ ಇರುವ ನನ್ನನ್ನು ಕರುಣಾಮೂರ್ತಿಗಳಾದ ಹೇ ರಾಘವೇಂದ್ರಗುರುಗಳೇ ಉದ್ಧರಿಸಿ.|

ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ || ೨೩ ||

ಶ್ಲೋಕ--23
ತಾತ್ಪರ್ಯ--ಯಾರು ಗುರುರಾಘವೇಂದ್ರರ ಉತ್ತಮವಾದ ಮಹಾತ್ಮ್ಯವನ್ನು ವರ್ಣಿಸುವ ಈ ಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಪಾರಾಯಣವೇ ಮೊದಲಾದವುಗಳನ್ನು ನಡೆಸುವರೋ, ಅಂತವರ ಕುಷ್ಠವೇ ಅತೀ ಶೀಘ್ರದಲ್ಲಿ ಪರಿಹೃತವಾಗುವುದು.

ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ || ೨೪ ||

ಶ್ಲೋಕ--24
ತಾತ್ಪರ್ಯ--ಅದ್ಭುತವಾದ ಈ ಸ್ತೋತ್ರವನ್ನು ಜಪಿಸುವುದರಿಂದ ಜನ್ಮತಃ ಕುರುಡನಾದವನು ಉತ್ತಮದೃಷ್ಠಿಯನ್ನು ಪಡೆಯುವನು,ಹುಟ್ಟಿದಂದಿನಿಂದ ಕಿವುಡನೂ ಮೂಕನೂ ಆಗಿರುವ ವ್ಯಕ್ತಿಯು ಇದರ ಮಹಿಮೆಯಿಂದ ಚತುರ ಮಾತುಗಾರನಾಗುವನು, ಆರೋಗ್ಯದಿಂದ ಕೂಡಿದ ಪೂರ್ಣಾಯುಷ್ಯವೂ ಸಕಲವ ಸಂಪತ್ತು ಸಮೃದ್ಧಿಯೂ ಈ ಸ್ತೋತ್ರದ ಪಾರಾಯಣಗಳಿಂದ ಆಗುವುದು.

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ || ೨೫ ||

ಶ್ಲೋಕ--25
ತಾತ್ಪರ್ಯ-- ಯಾರು , ಉತ್ತಮವಾದ ಈ ಗುರು ಸ್ತೋತ್ರದಿಂದಅಭಿಮಂತ್ರಿತವಾದ ಜಲವನ್ನು ಭಕ್ತಿಯಿಂದ ಕುಡಿಯುವರೋ ಅಂತವರ ಉದರದಲ್ಲಿರುವ ಸರ್ವದೋಷಗಳೂ ತತ್ಕ್ಷಣದಲ್ಲಿಯೇ ನಾಶವನ್ನು ಹೊಂದುವುವು.

ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |
ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ || ೨೬ ||

ಶ್ಲೋಕ --26
ತಾತ್ಪರ್ಯ--ತನ್ನ ಎರಡು ಕಾಲುಗಳನ್ನು ಕಳೆದುಕೊಂಡು ಹೇಳದವ ಎನಿಸಿರುವ ಮತ್ತು ಕಾಲಿಲ್ಲದ ಕುಂಟನೂ ಆದ ವ್ಯಕ್ತಿಯು ಯಾವ ರಾಯರ ಈ ದಿವ್ಯಸ್ತೋತ್ರವನ್ನು ಪಠಿಸುತ್ತ ಗುರುಗಳ ವೃಂದಾವನದ ಸಮೀಪ ಬಂದವರಾಗಿ ಪ್ರದಕ್ಷಿಣೆ ನಮಸ್ಕಾರಾದಿಗಳನ್ನು ಮಾಡುವರೋ ಅಂತವರು ಗುರುರಾಜರ ಪ್ರಸಾದದಿಂದ ಬಹುಬೇಗನೆ ನಡೆದಾಡುವ ಸಾಮರ್ಥ್ಯವನ್ನು ಪಡೆಯುವರು.

ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || ೨೭ ||

ಶ್ಲೋಕ --27
ತಾತ್ಪರ್ಯ--ಯಾರು ಚಂದ್ರ ಸೂರ್ಯರ ಗ್ರಹಣಕಾಲಗಳಲ್ಲಿ, ಪುಷ್ಯನಕ್ಷತ್ರದೊಡನೆ ರವಿವಾರ ಸೇರಿದಾಗ, ವ್ಯತೀಪಾತ, ವೈಧೃತಿ , ಪದ್ಯಕ, ಅರ್ಧೋದಯ, ಮಹೋದಯ ಯೋಗಗಳಲ್ಲಿ ,ಪೂರ್ಣಿಮಾ, ಅಮಾವಾಸ್ಯೆ ಮೊದಲಾದ ಪರ್ವಕಾಲಗಳಲ್ಲಿ , ಜನ್ಮನಕ್ಷತ್ರವೇ ಮೊದಲಾದ ದಿನಗಳಲ್ಲಿ ಈ ಗುರುಸ್ತೋತ್ರವನ್ನು ನೂರಾಎಂಟುಬಾರಿ ಪಠಿಸುವರೋ ಅಂತವರಿಗೆ ಎಂದಿಗೂ ಭೂತ, ಪ್ರೇತ ಪಿಶಾಚಿಗಳೇ ಮುಂತಾದ ಯಾವ ದುಷ್ಟಪೀಡೆಗಳೂ ಇರುವುದಿಲ್ಲ.

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ || ೨೮ ||

ಶ್ಲೋಕ--28
ತಾತ್ಪರ್ಯ--ಶ್ರೀ ರಾಘವೇಂದ್ರ ಸ್ತೋತ್ರವನ್ನು ಪಠಿಸುತ್ತಾ ಗುರುರಾಜರ ಬೃಂದಾವನ ಸನ್ನಿಧಿಯಲ್ಲಿ ದೀಪವನ್ನು ಹಚ್ಚಿಟ್ಟವರಿಗೆ ,ಶಾಸ್ತ್ರದ ಯತಾರ್ಥಜ್ಞಾನವು ಲಭಿಸುವುದು, ಪುತ್ರ ಸಂತಾನವಾಗುವುದು,ಈ ಬಗ್ಗೆ ಸಂಶಯಬೇಡ!ತಪ್ಪದೇ ಫಲವು ದೊರೆಯುವುದು.

ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |
ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || ೨೯ ||

ಶ್ಲೋಕ--29
ತಾತ್ಪರ್ಯ--ಶ್ರೀ ಗುರುಸ್ತೋತ್ರವನ್ನು ಸದಾಪಾರಾಯಣ ಮಾಡುವುದರಿಂದ ವಾದದಲ್ಲಿ ಜಯವು ಲಭಿಸುವುದು, ಜ್ಞಾನಾವೃದ್ಧಿಯಾಗುವುದು, ಪರಮಾತ್ಮನಲ್ಲಿ ಭಕ್ತಿ ಹೆಚ್ಚುವುದು, ಸಕಲ ಅಭೀಷ್ಟಗಳು ಪೂರ್ಣವಾಗುವುವು. ಈ ವಿಷಯದಲ್ಲಿ ಸಂದೇಹವಿಲ್ಲ.

ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೩೦ ||

ಶ್ಲೋಕ--30
ತಾತ್ಪರ್ಯ-- ಶ್ರೀ ಗುರುಸ್ತೋತ್ರವನ್ನು ಭಕ್ತಿ ಪೂರ್ವಕವಾಗಿ ಪಠನೆ ಮಾಡುವುದರಿಂದ ರಾಜದಂಡನೆ ತಪ್ಪುವುದು, ಚೋರಭಯ ನಿವಾರಣೆಯಾಗುವುದು, ಸರ್ಪನಕ್ರಾದಿ ಕ್ರೂರಪ್ರಾಣಿಗಳ ಬಾಧೆಗಳು ತೊಲಗುವುವು. ಈ ವಿಷಯದಲ್ಲಿ ಸಂಶಯವೇ ಬೇಡ!

ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” || ೩೧ ||

ಶ್ಲೋಕ--31
ತಾತ್ಪರ್ಯ--ಯಾರು ಶ್ರೀ ರಾಘವೇಂದ್ರ ಗುರುಸಾರ್ವಬೌಮನ ಚರಣ ದ್ವಯೆವನ್ನು ಭಕಿಪೂರ್ವಕ ಸ್ಮರಿಸಿ  , ಶ್ರೀ ಗುರುಸ್ತೋತ್ರವನ್ನು ಭಕ್ತಿಯಿಂದ ಸದಾ ಪಠಣ ಮಾಡುವರೋ ಅವರಿಗೆ, ದುಃಖಗಳು ದೂರಾಗುವುವು, ಶ್ರೀ ಗುರುರಾಜರು ಸಂತುಷ್ಟರಾಗುವರು, ಶ್ರೀ ಗುರುರಾಜoತರ್ಗತ ಶ್ರೀ ಲಕ್ಶ್ಮೀಪತಿಯ ಪ್ರೀತನಾಗುವನು ಅದರಿಂದಾಗಿ ಅವರ ಕೀರ್ತಿಯ ದಶದಿಶೆಗಳ್ಳಲ್ಲಿ ಹಬ್ಬುವುದು, ಅವರಿಗೆ ಅತುಲೈಶ್ವರ್ಯವು ಪ್ರಾಪ್ತಿಯಾಗುವುದು.

ಶ್ರೀ ಗುರುಸ್ತುತಿಯನ್ನು ಶ್ರೀಮದಪ್ಪಣಾಚಾರ್ಯರು ರಚಿಸಿದರು, ಗುರುಸ್ತುತಿಯಲ್ಲಿ ಹೇಳಿದುದೆಲ್ಲವೂ ಸತ್ಯವೆಂಬುದಾಗಿ ಶ್ರೀ ಗುರುರಾಜರ ಬೃಂದಾವನದಿಂದ "ಸಾಕ್ಷೀ ಹಯಾಸ್ತೋತ್ರಹಿ" ಎಂಬ ಅನುಗ್ರಹ ವಚನವು ಬಂದಿತು! ಅಂದರೆ ಸ್ತೋತ್ರದಲ್ಲಿ ಹೇಳಿರುವುದೆಲ್ಲವೂ ಸತ್ಯವೆಂತಲೂ ಅದಕ್ಕೆ ನಮ್ಮ ಉಪಾಸ್ಯಮೂರ್ತಿಯಾದ ಶ್ರೀ ಹಯಗ್ರೀವ ದೇವರೇ ಸಾಕ್ಷಿ ಎಂಬುದಾಗಿ ಪ್ರಾಜ್ಞ ಜನರ ಅಭಿಪ್ರಾಯವಾಗಿದೆ!.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ 

ಶ್ಲೋಕ--32

ಪರಮಪೂಜ್ಯ ಗುರುಗಳಾದ ಶ್ರೀ ರಾಘವೇಂದ್ರರು ಸತ್ಯ, ಧರ್ಮಗಳಲ್ಲಿ ರತರು.
ಭಜಿಪ ಜನರ ಪಾಲಿಗೆ ಕಲ್ಪವೃಕ್ಷವಾಗಿಯೂ, ನಮಿಪ ಭಕ್ತರಿಗೆ ಕಾಮಧೇನುವಾಗಿಯು, ಅಭೀಷ್ಟಗಳನ್ನು ಪೂರ್ಣಮಾಡುವರು.


ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತದಯಾಲವೇ

ಶ್ಲೋಕ--33

ಕರುಣಾಸಮುದ್ರರಾದ ಶ್ರೀ ರಾಘವೇಂದ್ರ ಗುರುಗಳು , ಅಜ್ಞಾನಾಂದಕಾರವನ್ನು ಕಳೆಯಲು ಪ್ರಕಾಶಮಾನವಾದ ಸೂರ್ಯರಾಗಿರುವರು ವಿಷ್ಣುಭಕ್ತರೆಂಬ ಕಮಲಗಳ ಪಾಲಿಗೆ ಚಂದ್ರಮರಾಗಿರುವರು.

Srinivasa Govinda devotional kannada song lyrics

  ಶ್ರೀನಿವಾಸ ಗೋವಿಂದ ||2||
ಶ್ರೀ ವೆಂಕಟೇಶ ಗೋವಿಂದ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಶ್ರೀನಿವಾಸ ಗೋವಿಂದ||2||
ಶ್ರೀ ವೆಂಕಟೇಶ ಗೋವಿಂದ||2||
ಭಕ್ತ ವತ್ಸಲ ಗೋವಿಂದಾ||2||
ಭಾಗವತ ಪ್ರಿಯ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ನಿತ್ಯ ನಿರ್ಮಲ ಗೋವಿಂದಾ||2||
ನೀಲ ಮೇಘ ಶ್ಯಾಮ ಗೋವಿಂದಾ||2||
ಪುರಾಣ ಪುರುಷ ಗೋವಿಂದಾ||2||
ಪುಂಡರೀ ಕಾಕ್ಷ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ನಂದ ನಂದನ ಗೋವಿಂದಾ||2||
ನವನೀತ ಚೋರ ಗೋವಿಂದಾ||2||
ಪಶು ಪಾಲಕ ಶ್ರೀಗೋವಿಂದಾ||2||
ಪಾಪ ವಿಮೋಚನ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ದುಷ್ಟ ಸಂಹಾರ ಗೋವಿಂದಾ||2||
ದುರಿತ ನಿವಾರಣ ಗೋವಿಂದಾ||2||
ಶಿಷ್ಟ ಪರಿ ಪಾಲಕ ಗೋವಿಂದ||2||
ಕಷ್ಟ ನಿವಾರಣ ಗೋವಿಂದ||2|
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ವಜ್ರ ಮುಕುಟಧರ ಗೋವಿಂದ||2||
ವರಾಹ ಮೂರ್ತಿ ಗೋವಿಂದ||2||
ಗೋಪಿ ಜನ ಲೋಲ ಗೋವಿಂದ||2||
ಗೋವರ್ಧನೋದ್ದಾರ ಗೋವಿಂದ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ದಶರಥ ನಂದನ ಗೋವಿಂದ||2||
ದಶಮುಖ ಮರ್ಧನ ಗೋವಿಂದ||2||
ಪಕ್ಷಿವಾಹನ ಗೋವಿಂದ||2||
ಪಾಂಡವ ಪ್ರಿಯ ಗೋವಿಂದ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

Srinivasa Govinda devotional kannada song lyrics


ಮತ್ಸ್ಯಕೂರ್ಮಾ ಗೋವಿಂದಾ||2||
ಮಧುಸೂಧನ ಹರಿ ಗೋವಿಂದಾ||2||
ವರಾಹ ನರಸಿಂಹ ಗೋವಿಂದಾ||2||
ವಾಮನಭೃಗು ರಾಮ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಬಲರಾಮನುಜ ಗೋವಿಂದಾ||2||
ಬೌದ್ಧಕಲ್ಕಿ  ಗೋವಿಂದಾ||2||
ವೇಣು ಗಾನ ಪ್ರಿಯ ಗೋವಿಂದಾ||2||
ವೆಂಕಟರಮಣ ಗೋವಿಂದಾ||2||
ಗೋವಿಂದಾ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಸೀತಾ ನಾಯಕ ಗೋವಿಂದಾ||2||
ಶ್ರಿತಜನ ಪಾಲಕ ಗೋವಿಂದಾ||2||
ದರಿದ್ರಜನ ಪೋಷಕ ಗೋವಿಂದಾ||2||
ಧರ್ಮ ಸಂಸ್ಥಾಪಾಕ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಅನಾಥ ರಕ್ಷಕ ಗೋವಿಂದಾ||2||
ಆಪ ದ್ಬಾಂಧವ ಗೋವಿಂದಾ||2||
ಶರಣಾಗತ ವತ್ಸಲ ಗೋವಿಂದಾ||2||
ಕರುಣಾ ಸಾಗರ ಗೋವಿಂದಾ||2||
ಗೋವಿಂದಾ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಕಮಲದಳಾಕ್ಷ ಗೋವಿಂದ||2||
ಕಾಮಿತಾಫಲದಾತಾ ಗೋವಿಂದಾ||2||
ಪಾಪವಿನಾಶಕ ಗೋವಿಂದಾ||2||
ಪಾಹಿ ಮುರಾರಿ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಶ್ರೀ ಮುದ್ರಾಂಕಿತ ಗೋವಿಂದಾ||2||
ಶ್ರೀ ವಾತ್ಸಂಕೀತ ಗೋವಿಂದಾ||2||
ಧರಣಿ ನಾಯಕ ಗೋವಿಂದಾ||2||
ದಿನಕರತೇಜ ಗೋವಿಂದಾ||2||
ಗೋವಿಂದಾ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಪದ್ಮಾವತಿ ಪ್ರಿಯ ಗೋವಿಂದಾ||2||
ಪ್ರಸನ್ನ ಮೂರ್ತಿ ಗೋವಿಂದಾ||2||
ಅಭಯ ಹಸ್ತ  ಗೋವಿಂದಾ||2||
ಮತ್ಸ್ಯಾವತಾರಾ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಶಂಖ ಚಕ್ರ ಧರ ಗೋವಿಂದಾ||2||
ಶಾಂತ ಗಧಾದರ ಗೋವಿಂದಾ||2||
ವಿರಜಾತೀರ್ಥ ಗೋವಿಂದಾ||2||
ವಿರೋಧಿ ಮರ್ಧನ ಗೋವಿಂದಾ||2||
ಗೋವಿಂದಾ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಸಾಲಗ್ರಾಮ ಹರ ಗೋವಿಂದಾ||2||
ಸಹಸ್ರ ನಾಮ ಗೋವಿಂದಾ||2||
ಲಕ್ಷ್ಮೀ ವಲ್ಲಭ ಗೋವಿಂದಾ||2||
ಲಕ್ಷ್ಮಣಾಗ್ರಜ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಕಸ್ತೂರಿ ತಿಲಕ ಗೋವಿಂದಾ||2||
ಕಾಂಚನಾಂಬರಧಾರ ಗೋವಿಂದಾ||2||
ಗರುಡ ವಾಹನ ಗೋವಿಂದಾ||2||
ಗಜರಾಜ ರಕ್ಷಕ ಗೋವಿಂದಾ||2||
ಗೋವಿಂದಾ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ವಾನರ ಸೇವಿತ ಗೋವಿಂದಾ||2||
ವಾರಧಿ ಬಂಧನ ಗೋವಿಂದಾ||2||
ಸಪ್ತ ಗಿರಿವಾಸನೆ ಗೋವಿಂದಾ||2||
ಏಕ ಸ್ವರೂಪ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಶ್ರೀ ರಾಮಕೃಷ್ಣ ಗೋವಿಂದಾ||2||
ರಘುಕುಲ ನಂದನ ಗೋವಿಂದಾ||2||
ಪ್ರತ್ಯ ಕ್ಷ ದೇವ ಗೋವಿಂದಾ||2||
ಪರಮ ದಯಾಕರ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ವಜ್ರಕವಚ ಧರ ಗೋವಿಂದಾ||2||
ವೈಜಯಂತಿ ಮಾಲ ಗೋವಿಂದಾ||2||
ಬಡ್ಡಿಕಾಸಿನವ ಗೋವಿಂದಾ||2||
ವಸುದೇವಸುತ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಬಿಲ್ವಪತ್ರಾಚಿ೯ತ ಗೋವಿಂದಾ||2||
ಭಿಕ್ಷುಕ ಸಂಸ್ತುತ ಗೋವಿಂದಾ||2||
ಸ್ತ್ರೀ ಪುಂರೂಪ ಗೋವಿಂದಾ||2||
ಶಿವಕೇಶವ ಮೂರ್ತಿ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಬ್ರ ಹ್ಮಾಂಡ ರೂಪ ಗೋವಿಂದಾ||2||
ಭಕ್ತ ರಕ್ಷಕ ಗೋವಿಂದಾ||2||
ನಿತ್ಯ ಕಲ್ಯಾಣ ಗೋವಿಂದಾ||2||
ನೀರಜನಾಭ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಹತೀರಾಮಪ್ರಿಯ ಗೋವಿಂದಾ||2||
ಹರಿ ಸರ್ವೋತ್ತಮ ಗೋವಿಂದಾ||2||
ಜನಾರ್ಧನ ಮೂರ್ತಿ ಗೋವಿಂದಾ|2||
ಜಗತ್ಸಾಕ್ಷಿ ರೂಪ ಗೋವಿಂದ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಅಭಿಷೇಕ ಪ್ರಿಯ ಗೋವಿಂದ||2||
ಆಪನ್ನಿವಾರಣ ಗೋವಿಂದ||2||
ರತ್ನ ಕಿರೀಟ ಗೋವಿಂದ||2||
ರಾಮಾನುಜನುತ ಗೋವಿಂದ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಸ್ವಯಂಪ್ರಕಾಶ ಗೋವಿಂದ||2||
ಆಶ್ರಿತಪಕ್ಷಾ ಗೋವಿಂದ||2||
ನಿತ್ಯಶುಭಪ್ರದಾ ಗೋವಿಂದ||2||
ನಿಖಿಲಲೋಕೇಶ ಗೋವಿಂದ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಆನಂದರೂಪ ಗೋವಿಂದ||2||
ಆದ್ಯಂತರಹಿತ ಗೋವಿಂದ||2||
ಇಹಪರದಾಯಕ ಗೋವಿಂದ||2||
ಇಭರಾಜರಕ್ಷಕ ಗೋವಿಂದ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ ||ಗೋವಿಂದ||

ಪರಮದಯಾಳೊ ಗೋವಿಂದಾ||2||
ಪದ್ಮನಾಭ ಹರಿ ಗೋವಿಂದಾ||2||
ತಿರುಮಲವಾಸ ಗೋವಿಂದಾ||2||
ತುಲಸಿವನಮಾಲ ಗೋವಿಂದಾ||2||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ||ಗೋವಿಂದ||

ಶೇಷಶಯನ ಗೋವಿಂದ||2||
ಶೇಷಾದ್ರಿ ನಿಲಯ ಗೋವಿಂದಾ||2||
ಶ್ರೀ ಶ್ರೀನಿವಾಸ ಗೋವಿಂದಾ||2||
ಶ್ರೀ ವೆಂಕಟೇಶ ಗೋವಿಂದಾ||2||

Ganesha kannada devotional mp3

In this post , we share one of the must hear in all Ganesha festival occasions - old Kannada evergreen devotional Ganesha songs , these are played in every Bangalore streets where Ganesha Idol is worshiped. Do listen , share with others

  • Bhadrapada Shuklada
  • Sharanu Sharanayaa
  • Shuklambaradaram
  • Gajananam
  • Vakrathunda
  • Vishwa Vinayaka
  • Ganesha Sthothras

Click here to to listen / download the songs.
 
These are only few sample songs to promote Kannada music.  Please buy much more such songs at Kannada music stores.
Terms | Privacy | 2024 🇮🇳
–>