-->

ರಾಗಿ ಮುದ್ದೆ - 12 ಆರೋಗ್ಯ ಪ್ರಯೋಜನಗಳು , Raagi Balls 12 health benefits

ನಿಮಗೆ ರಾಗಿಯ ಬಗ್ಗೆ ತಿಳಿದಿದೆಯೇ? ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ. ಆದರೆ ರಾಗಿ ನಮ್ಮ ದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ

ಇಂದೇ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ. ಹೆಚ್ಚಾಗಿ ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ, ರಾಗಿ ರೊಟ್ಟಿ ಹೀಗೆ ಒಂದಾ ಎರಡಾ ರಾಗಿಯ ರೆಸಿಪಿಗಳು. ರಾಗಿಯಿಂದ ತಯಾರಿಸುವ ಪ್ರತಿಯೊಂದು ಆಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ.

ಇಂದಿನ ಲೇಖನದಲ್ಲಿ ರಾಗಿಯಿಂದ ತಯಾರಿಸಲ್ಪಟ್ಟ ಮುದ್ದೆಯ ಆರೋಗ್ಯ ಪ್ರಯೋಜನಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೇರೆ ಧಾನ್ಯಗಳಿಗಿಲ್ಲ. ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು.

ತಮ್ಮ ದೇಹ ತೂಕವನ್ನು ಇಳಿಸುವ ಯೋಜನೆ ಇದ್ದವರು ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ಸಸ್ಯಾಹಾರಿಗಳಿಗೆ ಪ್ರೋಟೀನ್ ಶ್ರೀಮಂತವಾಗಿರುವ ರಾಗಿ ದೇಹ ತೂಕ ಇಳಿಸುವವರಿಗೆ ವರದಾನವೇ ಸರಿ.
ದಕ್ಷಿಣ ಭಾರತದಲ್ಲಿ ರಾಗಿ ಮುದ್ದೆ ತುಂಬಾ ಜನಪ್ರಿಯ. ಕರ್ನಾಟಕದಲ್ಲಂತೂ ಪ್ರತೀ ದಿನ ರಾಗಿ ಮುದ್ದೆಯನ್ನು ತಿಂದೇ ತಮ್ಮ ದೈನಂದಿನ ಕಾಯಕವನ್ನು ಪ್ರಾರಂಭಿಸುವವರು ಬಹುತೇಕ ಮಂದಿ. ರಾಗಿ ಮುದ್ದೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳತ್ತ ಕಣ್ಣು ಹಾಯಿಸಿ.


*ದೇಹ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ:*
ಹೆಚ್ಚಿನ ಕೊಬ್ಬನ್ನು ಹಾಗೂ ತೂಕವನ್ನು ಕರಗಿಸುವ ಯೋಜನೆ ನಿಮ್ಮದಾಗಿದ್ದರೆ, ರಾಗಿ ಮುದ್ದೆಯನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸಿ. ರಾಗಿಯಲ್ಲಿರುವ ಅಮೀನೊ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

*ಮೂಳೆಗಳಿಗೆ ಉತ್ತಮ:*
ರಾಗಿ ಮುದ್ದೆಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು, ಮಕ್ಕಳಿಗೆ ಹಾಗೂ ವೃದ್ಧರಿಗೆ ಆವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.

*ಮಧುಮೇಹಿಗಳಿಗೆ ಸೂಕ್ತ:*
ಮಧುಮೇಹದಿಂದ ನೀವು ಬಳಲುತ್ತಿದ್ದೀರಾ? ನಿಮಗೆ ಸೇವಿಸಲು ಇದೊಂದು ಪರಿಪೂರ್ಣ ಆಹಾರವಾಗಿದೆ. ಮಧುಮೇಹದ ಮೆಲ್ಲಿಟಸ್ ಮತ್ತು ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.

*ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ:*
ರಾಗಿಯಲ್ಲಿರುವ ಅಮೀನೊ ಏಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ನಿಮ್ಮ ಜೀರ್ಣಾಂಗವ್ಯೂಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.

*ನೀವು ಒಬ್ಬ ಅನೀಮಿಕ್ ಆಗಿದ್ದರೆ:*
ನೀವು ಅನಿಮೀಯಾದಿಂದ ಬಳಲುತ್ತಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್ನ ಮೂಲ ರಾಗಿ ಗಿಡವಾಗಿದೆ.

*ನಿಮಗೆ ರಿಲ್ಯಾಕ್ಸ್ ಆಗಲು ಸಹಕಾರಿ:*
ರಾಗಿಗಿರುವ ಇನ್ನೊಂದು ಮಹತ್ವದ ಗುಣವೆಂದರೆ ಅದು ನಿಮಗೆ ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಒತ್ತಡಪೂರ್ಣ ಜೀವನದಿಂದ ಮುಕ್ತಿ ಸಿಗಲು ನಿಮ್ಮ ಪಥ್ಯದಲ್ಲಿ ಸೇರಿಸಬೇಕಾದ ಒಂದು ಉತ್ತಮ ಸಾಮಾಗ್ರಿ ರಾಗಿ ಮುದ್ದೆಯಾಗಿದೆ.

*ದೇಹವನ್ನು ತಂಪುಗೊಳಿಸುತ್ತದೆ:*
ಬೇಸಿಗೆ ಸಮಯದಲ್ಲಿ ನಿಮ್ಮ ದೇಹವನ್ನು ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.

*ಸದೃಢತೆಗೆ:*
ನಿಮ್ಮ ಸಾಮರ್ಥ್ಯ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು, ರಾಗಿ ಮುದ್ದೆಯನ್ನು ನಿಮ್ಮ ಆಯ್ಕೆಯಾಗಿಸಿಕೊಳ್ಳಿ. ಇದರಲ್ಲಿರುವ ಪ್ರೊಟೀನ್ ವಿಟಮಿನ್ಗಳು ನಿಮ್ಮನ್ನು ದೈಹಿಕವಾಗಿ ಆರೋಗ್ಯವಾಗಿರಿಸುತ್ತದೆ.

*ಮಲಬದ್ಧತೆಗೆ ಉಪಯೋಗಕಾರಿ:*
ರಾಗಿ ಮುದ್ದೆಯಲ್ಲಿರುವ ಫೈಬರ್ ಗುಣ ಮಲಬದ್ಧತೆಗೆ ಸಹಾಯಕಾರಿ. ನೀವು ಸುಲಭವಾದ ಮಲಬದ್ಧತೆಯನ್ನು ಹೊಂದಲು ನಿತ್ಯವೂ ರಾಗಿಮುದ್ದೆ ಸೇವಿಸಿ.

*ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ:*
ಹೌದು, ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜನವೆಂದರೆ ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ್ನಿಂದ ಬಳಲುತ್ತಿರುವವರಿಗೆ ಇದು ಉತ್ತಮ.

*ನೂತನ ತಾಯಂದಿರಿಗೆ:*
ನೂತನ ತಾಯಂದಿರಿಗೆ, ಹಿಮೋಗ್ಲೋಬೀನ್ ಮಟ್ಟಗಳನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.

Natural Food and tips to increase Memory power

The guru of all organs of the human body , our brain is continuously exercised every second to handle our emotions & thinking. 

Even when we sleep , we still make use of it for our dreams ! Just Imagine a situation you are stuck in some accident and you need to memorize back an important contact number and if you are not able to get it , what pathetic state you may encounter ! 

Keeping this vital organ in proper health and smooth function is very critical. Educating our children with proper foods intake to help its growth is very important at early stages.

In this post we share our collection of natural foods and tips which aid to maintain , increase human brain health & its memory power.  


  • Drinking Gourds (ಸೋರೆಕಾಯಿ) juice everyday
  • Using Brahmi / Gotu Kula (ಒಂದೆಲಗ) leaves is very effective 
  • Methi leaves , Raddish smashes mixture with Salt , Pepper , Jeera  sausage may be either taken raw or boiled
  • Having a glass of Grey Pumpkin (ಬೂದು ಕುಂಬಳಕಾಯಿ)  juice 
  • A glass of pure cow milk with a spoon of Honey daily 
  • Having Jeera decoction daily
  • Having dry ginger , Jeera , Sugar stone mixture not only increases tongue taste but also aids memory power
  • Oil bath once a week
  • Regular use of Amla fruit gradually increases memory strength
  • Don't use a big pillow while sleeping. Use a medium sized pillow
  • A glass of manjo juice with a spoon of honey 
  • Cardamom powder milk shake with a spoon of honey served hot
  • Regular use of white onions
  • Vegetables of Blue , Red , Green colors are good for brain functioning - Brinjal , BeetRoot , Onions , Spinach helps in increasing brain functionality
  • Those having fish , the omega 3 content available in sea fish aids to brain strength
  • Children must not be just restricted to studies and should be left open to other cultural activities like Music , Theater , Instruments etc. 
  • Occasional picnics , learning new things during picnic.
  • Outdoor Play / Dance / Aerobics till you sweat.
  • Regular use of cereal / grains Sprouts , Grapes , Pumpkin seeds , Akrut similar dry fruits
  • A glass of milk everyday
  • Having chocolates once or twice in a week


Do follow this and share your experience with us . There may be many more such remedies - if you have one do share your comments and help other folks.


Raddish (Moolangi) Health benefits

Many people seem to not like Raddish !  Some find its odor , its taste allergic. But folks ,  raddish has many benefits. Known as "Moolangi" in our kannada terms - it may be used in daily regular food items in many ways. It has Vitamin A , B and C in good proportions. It's not only tasty but also disease resistance strengths !




When mixed with cereals it may be part of our regular daily Sambar , may be smashed and prepared as chutney , may be mixed with wheat flour for parathas , may be taken as raw in vegetable salads , there are many benefits especially when taken as raw .  In this post we list some of the benefits collected from our sources - 


  • Raw raddish when smashed and taken with Salt and Lime extract is good for reducing cold
  • Mixture of Raddish & Pomegranate juice is good for blood generation for those having deficiency
  • Having red raddish aids to bones strength
  • Applying raddish lime mixture to skin reduces ring worms , itching and skin related problems
  • Regular use of raddish is got for teeth , reduces dental problems and aids to teeth whitening
  • Regular daily use of raw raddish reduces common pains with Eyes , Ears , Throat and Nose
  • Raddish & Salt mixture paste is a good antibody for scorpion bites which not only reduces pain and avoids quick spread poison to other parts of body
  • Juice prepared from Raddish with salt & lime burns fat
  • Raw raddish with salt , a pinch of mirchi powder reduces eye pain, jaundice , Digestion problems
  • Raddish leaves also are very useful & healthy . Its juice extract helps in clearing urine blockage and aids in smooth release ! Just ensure you use choose & filter good leaves.
So friends , a raw raddish a day keeps many ailments away . Do include this in your meal plate and increase your body resistance power.   Do share your ways of using it & having benefited from it.  


10 Benefits of Drinking water in empty stomach ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣಪಡಿಸಬಹುದು ಎಂದು ತಿಳಿದಿದೆಯಾ?
ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿಯುತ್ತಾರೆ. ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದಿಡುತ್ತದೆ. ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವವರೆಂಬ ಹೆಗ್ಗಳಿಕೆಯಿದೆ. ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ. 1) ಕರುಳಿನ ಕ್ರಿಯೆ ಸರಾಗ: ಬೆಳಗ್ಗೆ ಎದ್ದು ನೀವು ನೀರು ಕುಡಿದ ಕೂಡಲೇ ಮಲ ವಿಸರ್ಜನೆ ಮಾಡುವ ಅಗತ್ಯತೆ ಕಾಣಿಸುತ್ತದೆ. ಇದರಿಂದ ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗುತ್ತದೆ. ನೀವು ಪ್ರತೀ ಸಲ ಮಲ ವಿಸರ್ಜನೆ ಮಾಡಿದಾಗ ದೇಹವು ತ್ಯಾಜ್ಯದಿಂದ ಮುಕ್ತಿ ಪಡೆಯುತ್ತದೆ. 2) ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ: ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರಹಾಕುತ್ತದೆ. ನೀವು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರಹೋಗುತ್ತದೆ. 3) ಹಸಿವು ಹೆಚ್ಚಿಸುತ್ತದೆ: ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಗ್ಗೆ ಬೇಗನೆ ಹಸಿವಾಗುತ್ತದೆ ಮತ್ತು ಇದರಿಂದ ಸರಿಯಾಗಿ ಉಪಹಾರ ಮಾಡಬಹುದು. 4) ತಲೆನೋವು ನಿವಾರಿಸುತ್ತದೆ: ನಿರ್ಜಲೀಕರಣದಿಂದಾಗಿ ಹೆಚ್ಚಿನ ಸಲ ನಮಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿಡಬಹುದು. 5) ಕರುಳನ್ನು ಸ್ವಚ್ಛಗೊಳಿಸುತ್ತದೆ: ಕರುಳಿನಲ್ಲಿ ಸಂಗ್ರಹವಾಗಿರುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹವು ಪೌಷ್ಠಿಕಾಂಶಗಳನ್ನು ಬೇಗನೆ ಹೀರಿಕೊಳ್ಳಲು ನೆರವಾಗುತ್ತದೆ. 6) ಚಯಾಪಚಯ ಕ್ರಿಯೆಗೆ ವೇಗ : ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇ.24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗನೆ ಜೀರ್ಣವಾಗಿ, ಆಹಾರ ಸಮೀಕರಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. 7) ರಕ್ತ ಕಣಗಳ ಸೃಷ್ಟಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂಪುರಕ್ತದ ಕಣಗಳನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇದು ಆಮ್ಲಯುಕ್ತ ರಕ್ತವಾಗಿರುವ ಕಾರಣ ನಿಮ್ಮ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. 8) ತೂಕ ಕಳೆದುಕೊಳ್ಳಲು: ನೀವು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ನೀವು ವಿಷಕಾರಿ ಟ್ರಾನ್ಸ್ ಫ್ಯಾಟ್ಸ್ ನ್ನು ಹೊರಹಾಕಲು ನೆರವಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮಟ್ಟ ಹೆಚ್ಚುತ್ತದೆ. 9) ಹೊಳೆಯುವ ತ್ವಚ್ಛೆಗೆ: ನಿಮ್ಮ ಕರುಳಿನ ಕ್ರಿಯೆ ಸರಿಯಾಗಿ ಇರದ ಸಂದರ್ಭದಲ್ಲಿ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗಿದ್ದರೆ ನಿಮ್ಮ ಮುಖದಲ್ಲಿ ಮೊಡವೆಗಳು ಕಡಿಮೆಯಿರುತ್ತದೆ. 10) ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದುಕೊಳ್ಳಲು ನೀರು ತುಂಬಾ ಮುಖ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. (ಸಂಗ್ರಹ ಮಾಹಿತಿ)

ಮಜ್ಜಿಗೆ ಮಹಿಮೆ , Butter Milk significance

ದಿನಾಂತೇ ಚ ಪಿಬೇದ್‌ದುಗ್ಧಂ ನಿಶಾಂತೇ ಚ ಪಿಬೇತ್ವಯಃ| ಭೋಜನಾಂತೇ ಪಿಬೇತ್ತಕ್ರಂ ಕಿಂ ವೈದ್ಯಸ್ಯ ಪ್ರಯೋಜನಮ್...

ಇದರರ್ಥ ಸಾಯಂಕಾಲ(ಮಲಗುವ ಮುನ್ನ) ಹಾಲು ಕುಡಿದರೆ, ಬೆಳಿಗ್ಗೆ (ಎದ್ದ ಮೇಲೆ ಮುಖ ತೊಳೆದುಕೊಂಡು) ನೀರು ಕುಡಿದರೆ, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿದರೆ ವೈದ್ಯನಿಗೇನು ಕೆಲಸ?

ಹಾಲು, ನೀರಿನ ಹಾಗೆಯೇ ಮಜ್ಜಿಗೆ ಕೂಡ ನಮ್ಮ ಆರೋಗ್ಯವನ್ನು ಕಾಪಿಡಲು ನೆರವಾಗುತ್ತದೆ. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅರ್ಧದಷ್ಟು ಕಡಿಮೆ ಕ್ಯಾಲರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ.  ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುತ್ತದೆ. ಆದರೆ ಮೊಸರಿನಿಂದ ಬೆಣ್ಣೆ ತೆಗೆದು ಮಜ್ಜಿಗೆ ಮಾಡುವುದರಿಂದ ಕ್ಯಾಲರಿ, ಕೊಬ್ಬಿನ ಅಂಶ ತೀರಾ ಕಡಿಮೆ.

ಮಜ್ಜಿಗೆಯು ಕಷಾಯ ಹಾಗೂ ಅಮ್ಲರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣ ಹೊಂದುತ್ತದೆ. ಬೇಸಿಗೆಯಲ್ಲಂತೂ ಮಜ್ಜಿಗೆಯನ್ನು ನೆನೆಸಿಕೊಂಡರೆನೇ ‘ಆಹಾ!’ ಎನ್ನುತ್ತೇವೆ. ಮಜ್ಜಿಗೆ ಕೇವಲ ದಾಹವನ್ನು ತಣಿಸುವುದಷ್ಟೇ ಅಲ್ಲ, ಇದರಿಂದ ಹಲವು ಪ್ರಯೋಜನಗಳೂ ಇವೆ.

*ಮಜ್ಜಿಗೆ ಸೇವನೆಯಿಂದ ತೆರೆದ ಗಾಯ, ಬಾಯಿಹುಣ್ಣು, ರಕ್ತಸ್ರಾವದಂಥ ರೋಗಗಳು ಬಹುಬೇಗ ಗುಣವಾಗುತ್ತವೆ. ಆದ್ದರಿಂದಲೇ ಆಯುರ್ವೇದ ಚಿಕಿತ್ಸೆಗಳಲ್ಲಿ, ಚರ್ಮರೋಗದಿಂದ ಬಳಲುತ್ತಿರುವವರಿಗೆ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆ ಬಳಸಲಾಗುವುದು.

*ಮಜ್ಜಿಗೆಯಲ್ಲಿ ಆರೋಗ್ಯಕ್ಕೆ ಅಗತ್ಯವಿರುವ ಖನಿಜಾಂಶಗಳು ಅಧಿಕವಾಗಿವೆ. ಅನಿಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ 12 ಇದರಲ್ಲಿ ಹೇರಳವಾಗಿದೆ.

*ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ.

*ಮಜ್ಜಿಗೆಯಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

* ಇದರಲ್ಲಿ ಕ್ಯಾಲ್ಶಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಶಕ್ತಿ ನೀಡುತ್ತದೆ.

*ಮಜ್ಜಿಗೆಯು ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಂಶ ತೆಗೆದುಹಾಕುತ್ತದೆ.

*ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಯುರಿ ನಿವಾರಿಸುತ್ತದೆ.

*ಜಠರ ವಿಕಾರಗಳಿಗೆ  ಮಜ್ಜಿಗೆ ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನಿಜಾಂಶವನ್ನು ನೀಡುತ್ತದೆ.

*ಕ್ಷಾರ ಹಾಗೂ ಕಷಾಯ  ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.

*ಲಿವರ್‌ನಲ್ಲಿನ ವಿಷಗುಣಗಳನ್ನು ತೆಗೆದುಹಾಕುವ ಶಕ್ತಿ ಮಜ್ಜಿಗೆಗೆ ಇದೆ.

*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವು ಗುಣವಾಗುತ್ತದೆ.

*ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿಶುಂಠಿ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.

*ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಸಭೆ ಸಮಾರಂಭಗಳಲ್ಲಿ ಅಧಿಕ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ.

*ಅರ್ಧ ಚಮಚ ಶುಂಠಿರಸ ಹಾಗೂ ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.  ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆಯೊಂದಿಗೆ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಬಹಳ ಉತ್ತಮ. ಇದು ಅಗತ್ಯ ನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ. ತ್ವಚೆಯ ಕಾಂತಿಯನ್ನು ಹೆಚ್ಚಿಸಿ ಮುಪ್ಪನ್ನು ತಡೆಯುತ್ತದೆ.

*ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣಶಕ್ತಿ ಹೆಚ್ಚಿಸುತ್ತದೆ.

*ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ ಕೊನೆಯಲ್ಲಿ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ಹೊಟ್ಟೆಗೂ ಸುಖಕರ, ಊಟವೂ ಪೂರ್ಣವಾಗುತ್ತದೆ.

*ಸಕ್ಕರೆ ಕಾಯಿಲೆ ಇರುವವರಿಗೂ ಮಜ್ಜಿಗೆ ನೀರು ಉತ್ತಮ. ದಿನದಲ್ಲಿ ನಾಲ್ಕೈದು ಲೋಟ ಮಜ್ಜಿಗೆ ನೀರು ಕುಡಿಯುತ್ತಿದ್ದರೆ ದೇಹದ ಸ್ಥಿತಿ ಉತ್ತಮವಾಗಿರುತ್ತದೆ.

*ಡಯಟ್ ಮಾಡುವವರು ಹಣ್ಣು, ತರಕಾರಿಗಳ ಜೊತೆ ಮಜ್ಜಿಗೆಯನ್ನು ಸೇವಿಸಬೇಕು.

*ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ನಾಲ್ಕೈದು ಸಲ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.
Terms | Privacy | 2024 🇮🇳
–>