-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 9

ಮುಖ ಪರಿಶುದ್ದವಾಗಿದ್ದರೆ ಸಾಲದು,  ಮನಸ್ಸು ಪರಿಶುದ್ದವಾಗಿರ ಬೇಕು.

ತಪ್ಪು ಚಿಂತನೆಗಳು ಜೀವನದ ಬಹು ದೊಡ್ಡ ಶತ್ರುಗಳು. ಹಾಗಾಗಿ ನಮ್ಮ ಚಿಂತನೆಗಳು ಯಾವತ್ತೂ ಸಕಾರಾತ್ಮಕವಾಗಿರಲಿ 

ನೆಂಟರೊಡನೆ ಊಟಮಾಡಬೇಕು , ಮಾತಾಡಬೇಕು. ಕುಶಲ ಪ್ರಶ್ನೆ ಮಾಡಬೇಕು , ಆಗಾಗ ಅವರ ಮನೆಗೆ ಹೋಗಿ ಭೇಟಿ ಮಾಡಬೇಕು. ಎಂದಿಗೂ ಹಗೆತನ ಮಾಡಬಾರದು

 ಶಕ್ತಿ ಇರುವುದು ನಮ್ಮೊಳಗೆ,   ಭಕ್ತಿ ಇರುವುದು ನಮ್ಮೊಳಗೆ,     ಭಗವಂತ ಇರುವುದು ನಮ್ಮೊಳಗೆ,        ನಾವು ಅರಿತರಷ್ಟೇ ಎಲ್ಲವೂ ಕಾಣುವುದು....    

 ನೋವನ್ನು ನುಂಗಿ ಬದುಕುವ ಜೀವ ಯಾವತ್ತೂ ಇನ್ನೊಬ್ಬರನ್ನು ನೋಯಿಸುವುದಿಲ್ಲ ,       ಯಾಕೆ ಗೊತ್ತಾ ...... ಈ ಜೀವ ತನಗಷ್ಟೇ ನೋವಾದರೂ ಇನ್ನೊಬ್ಬರ ಖುಷಿಯನ್ನು ಬಯಸುತ್ತಾ ಬದುಕುತ್ತಿರುತ್ತದೆ..... 

*ಸಂಬಂಧ  ಅನ್ನೊದು ,  ನೋವನ್ನು ಹಂಚಿಕೂಳ್ಳುವ , ತರಹ ಇರಬೇಕೇ ಹೊರತು, ನೋವನ್ನು ಹೆಚ್ಚಿಸುವ ,  ತರಹ ಇರಬಾರದು.*

ಸಂತೋಷದಿಂದ ಇರುವವರ ಹತ್ತಿರ ಎಲ್ಲವೂ ಇರುತ್ತದೆ ಅಂತಲ್ಲ,  ಇದ್ದುದ್ದರಲ್ಲೇ ತೃಪ್ತಿ ಕಾಣುವ ಗುಣವೇ ಅವರ ಸಂತೋಷಕ್ಕೆ ಕಾರಣ.......

ಯಾವ ವ್ಯಕ್ತಿಯನ್ನೂ ಅವನಲ್ಲಿರುವ ಲೋಪದೋಷಗಳಿಂದಲೇ ಅಳೆಯಕೂಡದು. ವ್ಯಕ್ತಿಯಲ್ಲಿರುವ ದೊಡ್ಡಗುಣಗಳೇ ಅವನ‌ ವೈಶಿಷ್ಟ್ಯ. ಅವೆಲ್ಲವೂ ಅವನವೇ. ಅವನು ಮಾಡುವ ತಪ್ಪುಗಳು ಮಾನವ ಸಹಜವಾದ ದೌರ್ಬಲ್ಯಗಳು. ನಾವು ಅವನ ಚಾರಿತ್ರ್ಯವನ್ನು ಪರಿಗಣಿಸುವಾಗ ದೌರ್ಬಲ್ಯಗಳನ್ನು ಗಮನಿಸಲೇಕೂಡದು.

ಜೀವನದಲ್ಲಿ ಎಲ್ಲರಿಗೂ ಗೆಲ್ಲಬೇಕೆಂಬ  ಬಯಕೆ ಇದ್ದೇ ಇರುತ್ತದೆ. ಆದರೆ ಬಯಸಿದಂತೆ ಎಲ್ಲವೂ
         ನೆಡೆಯುವುದಿಲ್ಲ . ಬಯಸಿದ್ದು ಈಡೇರದೆ ಇದ್ದಾಗ ದುಃಖ ಸಹಜ. ಎಲ್ಲಿ ನಮಗೆ ಸೋಲುಂಟಾಯಿತು ಎಂದು ಅವಲೊಕಿಸಬೇಕು. ಆ ದಾರಿಯನ್ನು ಸರಿಪಡಿಸಿಕೊಂಡು ದಿಟ್ಟ
      ಗುರಿಯೊಂದಿಗೆ ಮುನ್ನಡೆಯಬೇಕು.    ಏಕೆಂದರೆ "ಭರವಸೆಯೇ ಬದುಕು"

 

Kannada subhashitha - ಕನ್ನಡ ಸುಭಾಷಿತ ಸಂಗ್ರಹ 9

 

ಹೊಟ್ಟೆ ತುಂಬಿದ ಶ್ರೀಮಂತ ಆಹಾರದಲ್ಲಿ ರುಚಿ ಹುಡುಕುತ್ತಾನೆ ಹಸಿದ ಬಡವ ಆಹಾರವನೇ ದೇವರು ಅಂತ ಭಾವಿಸುತ್ತಾನೆ....

ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ,  ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ.
ಎಲ್ಲಿ ಸ್ತ್ರೀಯರನ್ನು ಅಪಮಾನ ಗೊಳಿಸಲಾಗುತ್ತದೆಯೋ, ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗುತ್ತದೆ

ಸಿಟ್ಟು ಏಕಾಂಗಿಯಾಗಿ ಬರುತ್ತದೆ. ಆದರೆ, ಅದು ನಮ್ಮ ಒಳ್ಳೆಯ ಗುಣಗಳನ್ನು  ನುಂಗಿ ಹಾಕುತ್ತದೆ. ತಾಳ್ಮೆ ಕೂಡ ಏಕಾಂಗಿ ಯಾಗಿ ಬರುತ್ತದೆ. ಆದರೆ , ಅದು ನಮಗೆ ಒಳ್ಳೆಯ ಗುಣಗಳನ್ನು ತಂದು ಕೊಡುತ್ತದೆ

ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಆದರೆ ತಾಳ್ಮೆ ಇರುವವರಿಗೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತ. ಹೀಗಾಗಿ ಜೀವನದಲ್ಲಿ ಕಾಯುವಿಕೆ ಮತ್ತು ತಾಳ್ಮೆ ಇರಲೇಬೇಕು.

ಜೀವನ ಎಲ್ಲರಿಗೂ ದೊರೆಯುತ್ತದೆ. ಆದರೆ ಪ್ರೀತಿ, ಅನುಕಂಪ, ಕರುಣೆ, ವಿಶಾಲ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡ ಮತ್ತು ಅವುಗಳನ್ನು ಅಳವಡಿಸಿಕೊಂಡ ಜೀವನ ಹೃದಯವಂತರದು ಮಾತ್ರ ಆಗಿರುತ್ತದೆ. ನಾವೊಬ್ಬರೇ ಅಲ್ಲ ನಮ್ಮೊಂದಿಗೆ ಇರುವವರನ್ನು ಸಹ ನಮ್ಮ ಜೊತೆಯಲ್ಲಿ ಯಶಸ್ಸಿನೆಡೆಗೆ ಕರೆದೊಯ್ಯಬೇಕು.  ಯಾರು ಏನೇ ಆಗಿರಲಿ, ಹೇಗೆ ಇರಲಿ ನಿಮ್ಮ ವರ್ತನೆ ಮಾತ್ರ ಎಲ್ಲರೂ ಅನುಸರಿಸುವಂತೆ ಇರಲಿ. ನಮ್ಮ ಜೊತೆಯಲ್ಲಿ ಇರುವವರಿಗೆ ನಮ್ಮ ಕೈಲಾದಷ್ಟು ಸಹಾಯ ಹಸ್ತ ಚಾಚುತ್ತ ಅವರನ್ನು ನಮ್ಮ ಜೊತೆಯಲ್ಲಿಯೇ ಮುನ್ನಡೆಸಿಕೊಂಡು ಹೋಗೋಣ. ದ್ವೇಷಿಸುವವರನ್ನು ಪ್ರೀತಿಸೋಣ, ಪ್ರೀತಿಸಿದರೆ ಮರಳಿ ಪ್ರೀತಿ ತಾನೆ ಸಿಗುವುದು. ಇರುವಷ್ಟು ದಿನ ದೊರಕಿರುವ ಈ ಜೀವನದಲ್ಲಿ ಎಲ್ಲರೊಂದಿಗೆ ಸ್ನೇಹ, ಪ್ರೀತಿ, ಪ್ರೇಮದಿಂದ ಇರೋಣ.ನಮ್ಮ ಬದುಕನ್ನು ಸನ್ಮಾರ್ಗದಲ್ಲಿ ನಡೆಯೋಣ.  ನಮ್ಮ ಆತ್ಮೀಯರು, ನಮ್ಮ  ಹತ್ತಿರದವರ ಬದುಕನ್ನು ಉತ್ತಮ ಗಳಿಸಿಕೊಳ್ಳಲು ಸಹಕಾರ ಮಾಡೋಣ. ಸುಂದರ ಸುಖಮಯ ಜೀವನವನ್ನು ನಮ್ಮದಾಗಿಸಿಕೊಳ್ಳೋಣ

ಅಂದಂದಿನ ಕೆಲಸ ಮುಗಿಸಿಯೇ ಮಲಗುವುದನ್ನು ರೂಢಿಸಿಕೊಳ್ಳಿ. ಉಳಿದುಹೋದ ಕೆಲಸಗಳು ಬೆಟ್ಟದಷ್ಟಾದ ಮೇಲೆ ಜೀವನವೇ ಜಿಗುಪ್ಸೆ ಎನಿಸಿಬಿಡುತ್ತದೆ!


ಜೀವನ ಎಂಬ ಒಂದು ಸುಂದರವಾದ ತೋಟದಲ್ಲಿ ಮನಸ್ತಾಪ ಅನ್ನೋ ಕಳೆ ಸಾಕಷ್ಟು ಬರ್ತಾವೆ ಆದರೆ ಆ ಮನಸ್ತಾಪದ ಕಳೆ ಕಿತ್ತು ಹಾಕಿ ನಗುವಿನ ಹೂ ಬಿಡುವಂತೆ ನೋಡಿಕೊಂಡಾಗ ಮಾತ್ರ  ಜೀವನ ಸುಖಮಯವಾಗಿರುತ್ತದೆ.

ಜವಾಬ್ದಾರಿ ಹೆಚ್ಚಾದಾಗ, ನಮಗೆ  ಅರಿವಿಲ್ಲದೆ , ಧೈರ್ಯ ನಮ್ಮ   ಸಂಗಾತಿಯಾಗಿರುತ್ತದೆ.

ದುಂಬಿಗಳು ಹೂಗಳಿಂದ ಮಕರಂದವನ್ನು ಸಂಗ್ರಹಿಸುವಂತೆ , ಸಜ್ಜನರು ವಿದ್ವಾಂಸರಿಂದ ಸುಭಾಷಿತ ವನ್ನು ಬದುಕಿರುವವರಿಗೂ ಸಂಗ್ರಹಿಸುತ್ತಾರೆ.

ನಾವು ಇಷ್ಟ ಪಟ್ಟಿದ್ದು ನಮಗೆ ಸಿಗದೆ ಇದ್ದಾಗ ಅದರ ಅವಶ್ಯಕತೆ ನಮಗಿಲ್ಲ ಎಂದುಕೊಂಡು ಬದುಕಬೇಕು.

ಆಕಾಶದಷ್ಟು ಪ್ರೀತಿ ಇದ್ದರೆ ಸರಿಹೋಗುವುದಿಲ್ಲ. ಅಣುವಷ್ಟು ಅರ್ಥ ಮಾಡಿಕೊಳ್ಳುವ ಮನಸ್ಸು ಇರಬೇಕು. ಸಮುದ್ರದಷ್ಟು ಸಂಪಾದನೆ ಇದ್ದರೆ ಸರಿಹೋಗುವುದಿಲ್ಲ, ಸಮಯಕ್ಕೆ ಸಹಾಯ ಮಾಡುವ ಗುಣ ಇರಬೇಕು

Kannada subhashitha - ಕನ್ನಡ ಸುಭಾಷಿತ ಸಂಗ್ರಹ 8

ನಿಮಗೆ ಕಿರಿಕಿರಿ ಮಾಡಲೆಂದೇ ಕೆಲವರು ಎಲ್ಲ ಪ್ರಯತ್ನ ಮಾಡುತ್ತಾರೆ; ನೀವು ತಲೆ ಕೆಡಿಸಿಕೊಳ್ಳಲಿಲ್ಲವೆಂದರೆ ಅವರೇ ಕಿರಿಕಿರಿ ಮಾಡಿಕೊಂಡು ಪರಚಿಕೊಳ್ಳುತ್ತಾರೆ!

ನಿಜವಾದ ಆತ್ಮನ ವಿಷಯವನ್ನು ನೀವು ಅರಿತುಕೊಳ್ಳಿ,ಇತರರಿಗೆ ಬೋದಿಸಿ. ನಿದ್ರಿಸುತ್ತಿರುವ ಜೀವವನ್ನು ಸಂಭೋಧಿಸಿ,ಆಗ ನೋಡಿ ಹೇಗೆ ಅದು ಜಾಗೃತವಾಗುತ್ತದೆ ಎಂಬುದನ್ನು, ನಿದ್ರಿಸುತ್ತಿರುವ ಜೀವ ಜಾಗೃತವಾಗಿ ತನ್ನ ಅರಿವಿನಿಂದ ಕಾರ್ಯೋನ್ಮುಖವಾದಾಗ ಶಕ್ತಿ ಸ್ಪುರಿಸುವುದು,ಮಹಿಮೆ ಮೂಡುವುದು, ಕಲ್ಯಾಣವಾಗುವುದು, ಪಾವಿತ್ರ್ಯ ಸಿದ್ಧಿಸುವುದು ಅಂತೆಯೇ ಎಲ್ಲಾ  ಉತ್ಕೃಷ್ಟ ವಿಷಯಗಳೆಲ್ಲಾ ಒಂದೊಂದಾಗಿ ಪ್ರಕಟವಾಗುವವು.
 

ತಾಯಿ  ಮತ್ತು ಹೆಂಡತಿಯನ್ನ ಅಳತೆ ಮೀರಿ ಪ್ರೀತಿಸಿ ಗೌರವಿಸಿ ಕಾರಣ ತಾಯಿ ಈ ಪ್ರಪಂಚಕ್ಕೆ ಕರೆತಂದವರು ಹೆಂಡತಿ ಈ ಪ್ರಪಂಚವನ್ನೇ ಮರೆತು ನಿಮ್ಮನ್ನೇ ನಂಬಿ ಬಂದವರು.

ಮನುಷ್ಯ ಮನುಷ್ಯನಿಗೆ ಕೊಡುವ ಅತಿ ದೊಡ್ಡ ಉಡುಗೊರೆ ಎಂದರೆ ಪ್ರೀತಿ ,ವಿಶ್ವಾಸ , ಗೌರವ ಹಾಗೂ ನಂಬಿಕೆ. ಇದು ಹಣದಿಂದ ಖರೀದಿಸಿ ಕೊಡುವುದಲ್ಲ ನಮ್ಮ ಹೃದಯಂತರಾಳದಿಂದ ಕೊಡುವುದು .

ಒಳ್ಳೆಯತನದಿಂದ ಸ್ನೇಹಿತರನ್ನೂ ಬಂಧುಗಳನ್ನೂ ಒಲಿಸಿಕೊಳ್ಳಬೇಕು. ಸ್ತ್ರೀಯರನ್ನೂ ಸೇವಕರನ್ನೂ ದಾನ ಮತ್ತು ಗೌರವ ಕೊಟ್ಟು ಗೆಲ್ಲಬೇಕು. ಇತರರನ್ನು ದಾಕ್ಷಿಣ್ಯ ತೋರಿ ವಶಮಾಡಿಕೊಳ್ಳಬೇಕು. 

ನಾನು ಮತ್ತಷ್ಟು ತಿಳಿಯಬೇಕು ಎಂಬುದು ಜ್ಞಾನ..ನನಗೆ ಎಲ್ಲವೂ ತಿಳಿದಿದೆ ಎನ್ನುವುದು "ಅಜ್ಞಾನ "
ತಾನೂ ತಿಳಿಯುತ್ತಾ ಪರರಿಗೆ ತಿಳಿಸುವುದು "ಸುಜ್ಞಾನ"

ಒಳ್ಳೆಯ ನಡತೆಯುಳ್ಳವರೂ, ಸಾಧುಗಳೂ , ಭಗವದ್ಭಕ್ತರೂ , ಯಾವ ಮಾರ್ಗದಲ್ಲಿ ಇರುತ್ತಾರೋ ಅದೇ ಮಾರ್ಗವು, ಯಾವ ಹೆದರಿಕೆ ಇಲ್ಲದೇ ಕ್ಷೇಮದಿಂದ ಕೂಡಿರುತ್ತದೆ.

ಯಾವುದೇ ಒಂದು ಮಠ ಅಥವಾ ಶಾಲೆಯನ್ನು ನೆಡೆಸಬೇಕಾದರೆ ಅದಕ್ಕೆ ತಕ್ಕದಾದ ಗುರುಗಳು ಇರಬೇಕು.ಹಾಗೆಯೇ ಒಂದು ಮನೆಯು ಸುವ್ಯವಸ್ಥಿತವಾಗಿ ಸಮಯಕ್ಕೆ ತಕ್ಕಂತೆ ಎಲ್ಲಾ ಕೆಲಸ ಕಾರ್ಯಗಳು ನೆಡೆದುಕೊಂಡು ಹೋಗಬೇಕಾದರೆ ಹಿರಿಯರ ಮಾರ್ಗದರ್ಶನ ಇರಬೇಕು.ಒಂದು ಊರಿನಲ್ಲಿ ಜನ ವಾಸ ಮಾಡಬೇಕಾದರೆ ಮೇಲ್ವಿಚಾರಣೆಗಾಗಿ ಅಲ್ಲಿ ಒಬ್ಬ ಯಜಮಾನ,ಅಥವ ನಾಯಕನ ಅವಶ್ಯಕತೆ ಇದೆ.ಇವು ಮೂರು ಇಲ್ಲದಿದ್ದರೆ ನುಲಿ ಹರಿದ ಹೊರಸಿನಂತೆ (ಅಂದರೆ ಕುಳಿತುಕೊಂಡರೆ ,ಕುಳಿತಲ್ಲಿಯೇ ಬೀಳುವಂತಹ ‌) ಪರಿಸ್ಥಿತಿ ಇರುತ್ತದೆ

ಕೆಲವೇ ಕ್ಷಣಗಳಲ್ಲಿ ಹಣ ಎನ್ನುವುದು ಬರೀ ಕಾಗದದ ಚೂರುಗಳಾಗಿರಬಹುದು  ಚಿನ್ನವು ಕೇವಲ ಒಂದು ಲೋಹವಾಗಿ ಬಿಡಬಹುದು ಆದರೆ ಸಂಬಂಧಗಳಿಗಿರುವ  ಬೆಲೆಯನ್ನು ದೇವರಿಗೂ ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲ

ಬದುಕು ಸುಂದರ ಅನ್ನುವುದು ಬರೀ ಕಾಲ್ಪನಿಕ, ಅದನ್ನು ಸುಂದರವನ್ನಾಗಿ ಮಾಡುವುದು ನಮ್ಮ ಕಾಯಕ..

Kannada subhashitha - ಕನ್ನಡ ಸುಭಾಷಿತ ಸಂಗ್ರಹ 8

 

ಒಂದು ಕಲ್ಲು, ಎಷ್ಟು ವರ್ಷಗಳ ವರೆಗೆ ನೀರಲ್ಲಿದ್ದರೇನು, ನೆನೆದು ಮೆತ್ತಗಾಗುವುದೇ?
ಗಟ್ಟಿತನವಿಲ್ಲದ / ಚಂಚಲವಾದ ಮನಸ್ಸು.. ಎಷ್ಟು ಕಾಲದವರೆಗೂ ದೇವರನ್ನು ಪೂಜಿಸಿದರೆ ಏನು?
ಹೂತಿಟ್ಟ ನಿಧಿಯನ್ನು ಕಾಯುತ್ತಿದ್ದ ಭೂತದಂತೆ.
ಇದರ ಹಾಗೆ ವಿಧಿಯ ಕಾಟವು ನನಗಾಗಿತ್ತು ದೇವರೇ. ಇಲ್ಲಿ ಹೂತಿಟ್ಟ ನಿಧಿಯನ್ನು ಭೂತವು ಕಾಯುತ್ತಿದೆ, ಆದರೆ ಆ ಭೂತಕ್ಕೆ ಹೂತಿಟ್ಟ ನಿಧಿಯನ್ನು ಅಗೆದು ಹೊರತೆಗೆದು, ಅನುಭವಿಸಲು ಸಾಧ್ಯವಾಗುವುದಿಲ್ಲ.! ಹಾಗೆಯೇ ಇಷ್ಟಲಿಂಗವನ್ನು ಕೊರಳಲ್ಲಿ ಕಟ್ಟಿಕೊಂಡು, ಪೂಜಿಸಿಕೊಂಡು ಏನು ಪ್ರಯೋಜನ? ನಮ್ಮ ಮನಸ್ಸು ಧೃಡವಾಗಿರಬೇಕು, ಲಿಂಗಾಂಗ ಯೋಗ, ಶಿವಯೋಗ ಮಾಡಬೇಕು, ಅದನ್ನು ಅನುಭವಿಸಬೇಕು. ಇಲ್ಲದಿದ್ದರೆ ನೀರಿನಲ್ಲಿದ್ದು ಗಟ್ಟಿಯಾದ ಕಲ್ಲಿನಂತಾದರೆ ಯಾವುದೇ ಪ್ರಯೋಜನವಿಲ್ಲ

ಒಳ್ಳೆಯವರಾಗಲು ಹಣ ಬೇಕಿಲ್ಲ , ಸಣ್ಣದೊಂದು ನಗು ಸಾಕು.  ಪರಿಚಯವಾಗಲು ಮಾತು ಬೇಕಿಲ್ಲ ,
    ನಮ್ಮಲ್ಲಿರುವ ಗುಣ ಸಾಕು.  ಸ್ನೇಹಿತರಾಗಲು ಸಂಬಂಧ ಬೇಕಿಲ್ಲ , ಮನಸ್ಸಿನ ಭಾವನೆ ಸಾಕು.

ಉದ್ಯೋಗ ಮಾಡುವವರಿಗೆ ದಾರಿದ್ರ ವಿರದು, ಜಪತಪ ಮಾಡುವವನಿಗೆ ಪಾಪವಿರುವುದಿಲ್ಲ.. ವಿವಾದದ ವೇಳೆಯಲ್ಲಿ ಮೌನವಹಿಸಿದವರಿಗೆ ಕಲಹ ಇರುವುದಿಲ್ಲ.ಮುಂಜಾಗ್ರತೆ ತೆಗೆದುಕೊಳ್ಳುವವರಿಗೆ ಭಯವಿರುವುದಿಲ್ಲ..

ಎಲ್ಲರೊಂದಿಗೆ ಅತ್ಯಂತ ನಿಷ್ಕಪಟಪ್ರೇಮದಿಂದ ವ್ಯವಹರಿಸಬೇಕು . ನಮ್ಮ ಮಾತಿನಲ್ಲಿ ಅಷ್ಟೇ ಅಲ್ಲದೇ ನಮ್ಮ ದೃಷ್ಟಿಯಲ್ಲಿಯೂ ಕೂಡ ಪ್ರೇಮವಿರಬೇಕು 

ಜಗತ್ತಿನಲ್ಲಿ ಯಾರೂ ಕೇವಲ ಅಲ್ಲ.ಕೀಳೂ ಅಲ್ಲ. ಸಮಯ ಬಂದಾಗ ಎಲ್ಲರೂ ಅನಿವಾರ್ಯವೇ. ಉಸಿರಿರುವಾಗ ಹೊಡೆದೋಡಿಸಿದ ಕಾಗೆಗೋಸ್ಕರ ಕೂಡಾ ಉಸಿರು ನಿಂತ ಮೇಲೆ ಕಾಯಬೇಕಾಗುತ್ತದೆ.

ಕೆಲವರು ನಿರ್ಮಲವಾಗಿ ನಿಮ್ಮನ್ನು ಪ್ರೀತಿಸುತ್ತಾರೆ..  ಹೆಚ್ಚಿನವರು ಪ್ರತಿಫಲಾಪೇಕ್ಷೆಯಿಂದ ಪ್ರೀತಿಸುತ್ತಾರೆ ,  ಮತ್ತು , ಇನ್ನು ಕೆಲವರು ನಿಮ್ಮನ್ನು ಇಷ್ಟವೇ ಪಡದಿರಬಹುದು...  ಏನೇ ಆದರೂ.... ಜೀವನದಲ್ಲಿ ನಿಮ್ಮತನವನ್ನು ಕಳೆದುಕೊಳ್ಳದಿರಿ"

ಜೀವನವೆಂಬ ತರಗತಿಯಲ್ಲಿ ಗಂಟೆಗೊಂದು ಪಾಠ, ನಿಮಿಷಕ್ಕೊಂದು ಅನುಭವ.ನಮ್ಮನ್ನು ನಾವು ತಿದ್ದಿಕೊಂಡರೆ ಪ್ರಪಂಚದಲ್ಲಿ ಒಬ್ಬ ಮೂರ್ಖ ಕಡಿಮೆಯಾದಂತೆ.

ಕುರುಡನು ಸೂರ್ಯ ಮತ್ತು ಚಂದ್ರರುಗಳನ್ನು ತನ್ನ ಕಣ್ಣುಗಳಿಂದ ನೋಡಲು ಸಾಧ್ಯವೇನು .ಅವರ ಇರುವಿಕೆಯನ್ನು ಅವನು ಬಿಸಿಲು ಮತ್ತು ತಣಿವುಗಳಿಂದ ಅನುಭವಿಸಿ,ಹಗಲು ಮತ್ತು ರಾತ್ರಿಗಳ ವ್ಯತ್ಯಾಸಗಳನ್ನು ತಿಳಿಯುತ್ತಾನೆ.ಹಾಗೆಯೇ ಆ ಪರಮಾತ್ಮನನ್ನು ನಾವು ಈ ಕಣ್ಣುಗಳಿಂದ ನೋಡಲು ಅಸಾಧ್ಯ.ಅವನ ಮಹಿಮೆಯನ್ನು ಮತ್ತು ಇರುವಿಕೆಯನ್ನು ನಾವು ನಮ್ಮ ಮನಸ್ಸಿಗೆ ಆಗುವ ಅನುಭವಗಳಿಂದ ತಿಳಿಯುತ್ತೇವೆ.

ವಿಷಾದ ಮನೋಭಾವ ಧರ್ಮವಲ್ಲ. ಅದು ಮತ್ತೇನಾದರೂ ಆಗಿರಬಹುದು.  ಯಾವಾಗಲೂ ಆನಂದವಾಗಿದ್ದು,ಮಂದಹಾಸದಿಂದ ಇದ್ದರೆ, ಅದು ಪ್ರಾರ್ಥನೆಗಿಂತ ಬೇಗ ದೇವರ ಬಳಿಗೆ ಕರೆದೊಯ್ಯುವುದು.

ಧ್ಯಾನ ಮಾಡುವಾಗ ಒಬ್ಬ ವ್ಯಕ್ತಿ ಭಗವಂತನಲ್ಲಿಯೇ ತಲ್ಲಿನನಾಗಿಬಿಡಬೇಕು. ಸುಮ್ಮನೆ ನೀರಿನ ಮೇಲೆ ತೇಲುತ್ತಿದ್ದರೆ ಸಮುದ್ರದ ತಳದಲ್ಲಿರುವ ರತ್ನಗಳನ್ನು ತರಲು ಸಾಧ್ಯವೆ ?

Kannada subhashitha - ಕನ್ನಡ ಸುಭಾಷಿತ ಸಂಗ್ರಹ 6

ಬಂಗಾರದ ಬೆಲೆ ಇಬ್ಬರಿಗೆ ಮಾತ್ರ ಗೊತ್ತು . ಅದನ್ನು ಕೊಳ್ಳುವವರಿಗೆ ಹಾಗೂ ಅದನ್ನು ಮಾರುವವರಿಗೆ , ನೋಡುವವರಿಗಲ್ಲ . ಹಾಗೆಯೇ ನಿನ್ನ ಬೆಲೆ ನಿನ್ನ ಹೆತ್ತವರಿಗೆ ಮತ್ತು ನಿನ್ನ ನಂಬಿದ ಪ್ರೀತಿಪಾತ್ರರಿಗೆ ಮಾತ್ರ ಗೊತ್ತು. ವಸ್ತುವಿನಂತೆ ಅವಶ್ಯಕತೆಗೆ ತಕ್ಕಂತೆ ನಿಮ್ಮನ್ನು ಬಳಸಿಕೊಳ್ಳುವವರಿಗಲ್ಲ

ಅನುಭವದ ಗುರುವಾಗು,  ಅಭಿನಂದನೆಗೆ ಆಳಾಗು,  ಬೇಡಿ ಬಂದವರ ಬೆಂಗಾವಲಾಗು,
ಇದಾವುದೂ ಆಗದಿದ್ದಲ್ಲಿ  ಮನುಷ್ಯತ್ವ ತೋರುವ ಮನುಜನಾಗು... 

ಒಬ್ಬ ಒಳ್ಳೆಯ ವ್ಯಕ್ತಿ ಗೋಸ್ಕರ ಕಾದು ನೋಡಿದ ಸಮಯ, ಒಂದು ಒಳ್ಳೆಯ ಕೆಲಸಕ್ಕಾಗಿ ಖರ್ಚು ಮಾಡಿದ ಹಣ ಇಂದಿಗೂ  ವ್ಯರ್ಥವಾಗುವುದಿಲ್ಲ...

ಜೀವಿಗಳಲ್ಲಿ ಎರಡು ವಿಧ, ನಾಶವಾಗುವವರು ಮತ್ತು ನಾಶವಾಗದವರು. ಈ ಜಗತ್ತಿನಲ್ಲಿ ಎಲ್ಲ ಜೀವಿಗಳು ನಾಶವಾಗುವವು ಮತ್ತು ಪರಮಾತ್ಮನಲ್ಲಿ ನೆಲೆಸಿದವರು ನಾಶವಾಗದವರು

ವಾದ ಮಾಡಿ ನೋವು ಅನುಭವಿಸುವುದಕ್ಕಿಂತ ಹೌದು ನನ್ನದೇ ತಪ್ಪು ಎಂದು ಮೌನವಾಗಿರುವುದೇ ಮೇಲೆ.......

ಹಣವನ್ನು ದಾನ ಮಾಡಬೇಕು, ಅನುಭವಿಸಲೂ ಬೇಕು.  ಸುಮ್ಮನೆ ಕೂಡಿಡಬಾರದು.
ಜೇನು ಹುಳುಗಳು ಹಗಲಿರುಳು ಶ್ರಮಿಸಿ  ಕೂಡಿಟ್ಟ ಜೇನನ್ನು ಇತರರು ಅಪಹರಿಸುವಂತೆ , ಕೂಡಿಟ್ಟ ಹಣವೂ ಪರರ ಪಾಲಾಗುವುದು.

ಚಿಲ್ಲರೆ ನಾಣ್ಯಗಳು ಸದ್ದು ಮಾಡಿದ ಕೂಡಲೇ ನೋಟಿನ ಮೌಲ್ಯ ಕಡಿಮೆಯಾಗುವುದಿಲ್ಲ.
ಸಮಯಸಾಧಕರು ಅರಚಿಕೊಂಡ ಕೂಡಲೇ ಶ್ರೇಷ್ಠರ ಬೆಲೆ ಕಡಿಮೆಯಾಗುವುದಿಲ್ಲ. ಹಿಡಿದಕೆಲಸ ದೃಢಚಿತ್ತದಿಂದ ಮಾಡಿ. ಸಮಯಸಾಧಕರ ಸದ್ದು ನಿಲ್ಲುವುದು.

ಜನನಮರಣಗಳಲ್ಲಿ, ಸುಖ ದುಃಖಗಳಲ್ಲಿ ದೇವರು ಒಂದೇ ಸಮನಾಗಿ ಅಸ್ತಿತ್ವದಲ್ಲಿರುತ್ತಾನೆ. ಇಡೀ ಪ್ರಪಂಚವು ಅವನಿಂದ ತುಂಬಿ ತುಳುಕಾಡುತ್ತಿದೆ. ಕಣ್ತೆರೆದು ಅವನನ್ನು ನೋಡು.

We always work for a better tomorrow,  but when tomorrow comes, instead of enjoying, we again think of a better tomorrow,  !!! Let's have a BETTER TODAY

 

Kannada subhashitha - ಕನ್ನಡ ಸುಭಾಷಿತ ಸಂಗ್ರಹ 6

 

ನಿಮ್ಮ ವಕಾಲತ್ತನ್ನು ಭಗವಂತನಿಗೆ ಒಪ್ಪಿಸಿಬಿಡಿ. ಒಳ್ಳೆಯ ವ್ಯಕ್ತಿಗೆ ನಿಮ್ಮ ಜವಾಬ್ದಾರಿಯನ್ನು ವಹಿಸಿದರೆ ನಿಮಗೆ ಕೇಡಾಗುವುದಿಲ್ಲ. ಭಗವಂತನ ಇಚ್ಚೆಯಿದ್ದಂತಾಗುತ್ತದೆ
ಅವರು ನನ್ನ ಬಗ್ಗೆ ಹೀಗೆ ಆಲೋಚಿಸುತ್ತಿರಬಹುದಾ?'
 ಅಂತ ಯೋಚಿಸಿ ನೀವು ತಲೆಕೆಡಿಸಿಕೊಳ್ಳುತ್ತೀರಾ ಅಷ್ಟೇ. ಅವರಿಗೆ ನಿಮ್ಮ ಬಗ್ಗೆ ಯೋಚಿಸಲು ಪುರಸೊತ್ತೂ ಇರುವುದಿಲ್ಲ
 ಆಗಿಹೋದ ಯುಗಗಳಲ್ಲಿ ಪ್ರಚಲಿತವಿದ್ಧ ತಪಸ್ಸು ಅಥವಾ ಇತರ ಕಠೋರ ಯೋಗಾಭ್ಯಾಸಗಳು ಈ ಯುಗದಲ್ಲಿ ಪ್ರಸ್ತುತವಾಗುವುದಿಲ್ಲ. ಕೈಯತ್ತಿ ಕೊಡುವುದು ಮತ್ತು ಇತರರಿಗೆ ಸಹಾಯ ಮಾಡುವುದಷ್ಟೇ ಈ ಯುಗದಲ್ಲಿ ಬೇಕಾಗಿರುವುದು.
ಎಲ್ಲವೂ ಭಗವಂತನ ಇಚ್ಚೆಯಂತೆಯೇ ನಡೆಯುವುದು ನಿಜವೇ ಆದರೂ ಮನುಷ್ಯ ಕಾರ್ಯಶೀಲನಾಗಲೇಬೇಕು. ಏಕೆಂದರೆ, ಭಗವಂತ ತನ್ನ ಇಚ್ಚೆಯನ್ನು ಮನುಷ್ಯನ ಕ್ರಿಯೆಯ ಮೂಲಕವೇ ಪ್ರಕಟಿಸುತ್ತಾನೆ. ಆಧ್ಯಾತ್ಮಿಕ ಸಾಧನೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡ

ವ್ಯಕ್ತಿಯ ಪ್ರಸ್ತುತ ಪರಿಸ್ಥಿತಿಗಳ ಆಧಾರದ ಮೇಲೆ ಆತನ ಭವಿಷ್ಯವನ್ನು ನಿರ್ಣಯಿಸಬಾರದು. ಏಕೆಂದರೆ ಕಪ್ಪು ಕಲ್ಲಿದ್ದಲನ್ನು ಹೊಳೆಯುವ ವಜ್ರವನ್ನಾಗಿ ಬದಲಾಯಿಸುವ ಶಕ್ತಿಯನ್ನು ಸಮಯ ಹೊಂದಿದ

ಕೊಡಲಿಯಿಂದ ಕಡಿದ ಮರವು ಮತ್ತೆ ಚಿಗುರಬಹುದು ಆದರೆ ಮಾತಿನಿಂದ ನೊಂದ ಮನಸ್ಸು ಮತ್ತೆ ಯಾವತ್ತೂ ಚಿಗುರುವುದಿಲ್ಲ

ಉಧ್ಯಾನವನದಲ್ಲಿ ಅರಳಿರುವ ಗುಲಾಬಿಯಂತೆ ಆಗಬೇಕು ಎಂದು ನಾವು ಬಯಸುವುದಾದರೆ ಮೊದಲು ಮುಳ್ಳಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಲಿಯಬೇಕು. ಜೀವನದಲ್ಲಿ ಹೊಂದಾಣಿಕೆ ಇದ್ದರೆ ಮಾತ್ರ ನಾವು ಗೆಲುವು  ಸಾಧಿಸಲು ಸಾಧ್ಯ‌‌

ನಾವು ಯಾವಾಗಲೂ,ನಮಗಾದ ನೋವಿನ ಬಗ್ಗೆ ಯೋಚಿಸುತ್ತಿದ್ದರೆ, ಎಂದೆಂದಿಗೂ,ನಾವು ಅದರಿಂದ ನರಳುತ್ತಲೇ,ಇರುತ್ತೇವೆ. ಆದರೆ ಅದರ ಬದಲಾಗಿ,ನಮಗಾದ ನೋವಿನಿಂದ,ಕಲಿತ ಪಾಠದ ಬಗ್ಗೆ,ನಾವು ಗಮನ ಹರಿಸಿದರೆ,ನಾವು ಜೀವನದಲ್ಲಿ ಬೆಳೆಯುತ್ತೇವೆ,ಮತ್ತು ಉದ್ದಾರವಾಗುತ್ತೀವೆ.

*ಇಷ್ಟಪಟ್ಟಿದ್ದೆಲ್ಲಾ ಸಿಗಬೇಕಾದರೆ ಪ್ರಯತ್ನ ಮಾತ್ರವಲ್ಲ, ಯೋಗವೂ ಬೇಕು. ಆ ಯೋಗ ಪಡೆಯುವುದು ನಮ್ಮಲ್ಲಿಲ್ಲ. ಆದರೇ ಇಷ್ಟಪಟ್ಟಿದ್ದು ಸಿಕ್ಕಾಗ ಉಳಿಸಿಕೊಳ್ಳುವುದಕ್ಕೆ ಯೋಗ್ಯತೆ ಬೇಕು. ಅದು ನಮ್ಮಲ್ಲಿ ಇರುತ್ತದೆ. ಉಪಯೋಗಿಸಬೇಕು ಅಷ್ಟೇ.*

ಯಾರು ಹೃತ್ಪೂರ್ವಕವಾಗಿ ತನ್ನಡೆಗೆ ಬರಲು ಹೋರಾಡುತ್ತಿರುವನೋ ಅವನ ಮೇಲೆ ದೇವರು ಅಪಾರ ಕರುಣೆ      ಬೀರುವನು. ನೀನು ಸೋಮಾರಿಯಾಗಿ ಏನನ್ನೂ ಮಾಡದೇ ಇದ್ದರೆ ಅವನು ಎಂದಿಗೂ ಬರುವುದಿಲ್ಲವೆಂದು ನಿನಗೇ ತಿಳಿಯುವುದು.


Kannada subhashitha - ಕನ್ನಡ ಸುಭಾಷಿತ ಸಂಗ್ರಹ 2

 * ಅಣ್ಣ, ತಂದೆ ಮತ್ತು ಯಾರು ವಿದ್ಯೆಯನ್ನು ಕೊಡುತ್ತಾರೋ ಈ ಮೂವರೂ ತಂದೆಯಸಮಾನರೆಂದು ಧರ್ಮದಿಂದ ನಡೆಯುವವರು ಗೌರವಿಸುತ್ತಾರೆ.

* ಅನ್ಯರ ಆಸ್ತಿಯನ್ನು ಅಪಹರಿಸುವದು , ಪರಸ್ತ್ರೀಯರನ್ನು ಕೆಣಕುವದು , ಸ್ನೇಹಿತರನ್ನು ತ್ಯಜಿಸುವದು -- ಇವು ಮೂರೂ ಸರ್ವನಾಶ ಮಾಡತಕ್ಕ ದೋಷಗಳು.


* ಅನ್ನದ ಮೇಲೆ ಸೊಕ್ಕು ತೋರಿಸಿದವ ರೋಗಿಯಾಗುತ್ತಾನೆ.
ದುಡ್ಡಿನ ಮೇಲೆ ಸೊಕ್ಕು ತೋರಿಸಿದವ ದರಿದ್ರನಾಗುತ್ತಾನೆ.
ಕಾಯಕದ ಮೇಲೆ ಸೊಕ್ಕು ತೋರಿಸಿದವ ನಿರುದ್ಯೋಗಿಯಾಗುತ್ತಾನೆ

* ಗುರಿ ಮುಟ್ಟುವದಕ್ಕೆ ಅಂತ ಹೊರಟ ಮೇಲೆ ಹಿಂತಿರುಗಿ ನೋಡಬಾರದು. ಗುರಿ ಮುಟ್ಟುವುದು ನಿದಾನ ಆಗಬಹುದು, ಆದರೆ ಗೆಲ್ಲುವದಂತೂ ಖಚಿತ

* ಒಂದು ಕ್ಷಣ ಮೌನವಹಿಸಿದರೆ ಹಲವು ಸಮಸ್ಯೆಗಳಿಂದ ಪಾರಾಗಬಹುದು.

* ಹೂಗಳೂ , ಹಣ್ಣುಗಳೂ ಯಾರ ಪ್ರೇರಣೆಯೂ ಇಲ್ಲದೇ ತಮ್ಮ ತಮ್ಮ ಕಾಲವನ್ನು ಮೀರದೇ ಇರುತ್ತವೆ. ಹಾಗೆಯೇ ಪುರಾಕೃತವಾದ ಕರ್ಮವೂ ಸಹ.

* ಯಾವುದೂ ಶಾಶ್ವತವಲ್ಲ ಎಂಬುದು ಅರಿವಿಗೆ ಬಂದುಬಿಟ್ಟರೆ ನೀವು ಹೆಚ್ಚು ತಾಳ್ಮೆ ಗಳಿಸುವಿರಿ, ಕ್ಷಮಿಸುವಿರಿ ಮತ್ತು ಇತರರ ಕುರಿತು ಆರೋಪ ಮಾಡುವುದು ಬಿಡುವಿರಿ!

* ಚಿಂತೆ ಮಾಡುವುದು ನಿಜಕ್ಕೂ ವ್ಯರ್ಥ.ಅದು ನಾಳಿನ ಸಮಸ್ಯೆಯನ್ನು ಪರಿಹರಿಸುವುದರ ಬದಲಿಗೆ ಇಂದಿನ ಶಕ್ತಿಯನ್ನು ಖಾಲಿ ಮಾಡಿಬಿಡುತ್ತದೆ.

* ವಿಷವಿರುವ ಬಂಗಾರದ ಪಾತ್ರೆಗಿಂತ ಜೇನಿರುವ ಮಣ್ಣಿನ ಮಡಿಕೆಯೇ ಯೋಗ್ಯವಾದದ್ದು...​ ​ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಗುಣಗಳಿಂದ ನಮ್ಮ ಯೋಗ್ಯತೆ ಹೆಚ್ಚುತ್ತದೆ..​

* ದುಷ್ಟನು ಇನ್ನೊಬ್ಬರಲ್ಲಿರುವ ಸಾಸುವೆ ಕಾಳಷ್ಟು ದೋಷವನ್ನು ಕಂಡು ಹಿಡಿಯುತ್ತಾನೆ. ಆದರೆ ತನ್ನಲ್ಲಿರುವ ಬಿಲ್ವಫಲದಷ್ಟು ದೊಡ್ಡ ತಪ್ಪಿದ್ದರೂ ಅವನು ಕಾಣುವುದಿಲ್ಲ.

* ಮುಂದೆ ಅನರ್ಥವು ಸಂಭವಿಸೀತೆಂಬ ಶಂಕೆಯಿದ್ದಾಗ , ಶುಭವನ್ನು ಬಯಸುವ ವಿವೇಕಿಯು ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಚಿಂತಿಸಬೇಕು.

* ಬಲಿಷ್ಠವಾದ ತೋಳುಗಳು ಜಗತ್ತನ್ನು ಎಷ್ಟು ಗೆಲ್ಲಬಹುದೋ, ಅದಕ್ಕಿಂತ ಹೆಚ್ಚನ್ನು ಮಾನವೀಯತೆಯಿಂದ ಕೂಡಿದ, ನಮಸ್ಕಾರ ಮಾಡುವ ಎರಡು ಕೈಗಳು ಗೆಲ್ಲಬಹುದು.

* ಕಾರ್ಯವನ್ನು ಆರಂಭಿಸದಿರುವದು ಮೊದಲನೆಯ ಬುದ್ಧಿ ಲಕ್ಷಣ. ಆರಂಭಿಸಿದ ಮೇಲೆ ಅದನ್ನು ತುದಿಮುಟ್ಟಿಸುವದು ಎರಡನೆಯ ಬುದ್ಧಿಲಕ್ಷಣ

* ಗುಣಶಾಲಿ ಜನರ ( ಸಜ್ಜನರ ) ಸಹವಾಸದಿಂದ ಸಣ್ಣವನೂ  ಗೌರವವನ್ನು ಪಡೆಯುತ್ತಾನೆ.  ಹೂವಿನ ಹಾರದ ಸಂಬಂಧದಿಂದ ನಾರನ್ನು ತಲೆಯಲ್ಲಿ ಮುಡಿಯುತ್ತಾರೆ.

* ಇನ್ನೊಬ್ಬರನ್ನೂ ಗೌರವಿಸುವುದನ್ನು ಕಲಿಯದಿದ್ದರೆ,ನಾವೆಂದು ದೊಡ್ಡವರಾಗುವುದಿಲ್ಲ..

* ದುಂಬಿಯು ಹೂಗಳನ್ನು ಕಾಪಾಡುತ್ತಾ ಹೇಗೆ ಮಕರಂದವನ್ನು ಹೀರಿಕೊಳ್ಳುತ್ತದೆಯೋ ಹಾಗೆಯೇ ಹಿಂಸೆ ಮಾಡದೇ ಮನುಷ್ಯರಿಂದ ಹಣವನ್ನು ಸಂಗ್ರಹಿಸಬೇಕು

* ನಮ್ಮೆಲ್ಲರಲ್ಲಿಯೂ ಅನೇಕ ರೀತಿಯ ದೌರ್ಬಲ್ಯ ಗಳಿರುವುದು ಸಹಜವೇ ಆದರೆ ಅದನ್ನು ಅರಿತು ಆ ದೌರ್ಬಲ್ಯ ವನ್ನು ಮೀರಿ ನಿಲ್ಲುವ ಪ್ರಯತ್ನ ವೇ ಸಾಧನಾ ಮಾರ್ಗದ ಮೊದಲ ಹೆಜ್ಜೆ

*ನಿನ್ನೆ  ಸುಖವಿತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖವಿರುವುದೆಂದು ವಿಜ್ಞಾನ ಹೇಳುತ್ತದೆ. ಆದರೆ, ಧರ್ಮ ಹೇಳುತ್ತದೆ , ಮನದಲ್ಲಿ ಸತ್ಯತೆ, ಹೃದಯದಲ್ಲಿ ಒಳ್ಳೆಯತನವಿದ್ದಲ್ಲಿ ಪ್ರತಿ ದಿನವೂ ಸಹ ಸುಖವೇ ಇರುವುದೆಂದು

* ಸ್ನೇಹ ಪ್ರೀತಿ ಅನ್ನೋದು ದೀಪ ಇದ್ದ ಹಾಗೆ... ಹಚ್ಚೋದು ಸುಲಭ , ಆದರೆ ಅದನ್ನು ಆರದ ಹಾಗೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ 

* ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಭೂಮಿ ನಮ್ಮದಲ್ಲ,ಪ್ರಕೃತಿ ನಮ್ಮದಲ್ಲ, ನಮ್ಮದು ಅಂತ ಉಳಿದಿರುವುದು ಒಂದೇ.. ಅದೇ “ಪ್ರೀತಿ,ಸ್ನೇಹ,ವಿಶ್ವಾಸ,ನಂಬಿಕೆ ಮತ್ತು ಸಂಬಂಧಗಳು”.....ಇವುಗಳು ಎಂದೆಂದಿಗೂ ಶಾಶ್ವತವಾಗಿರಲಿ.....

Basavanna Vachana ಬಸವಣ್ಣ ನವರ ವಚನಗಳು - With meanings

This post is dedicated to Sri Basavanna and his works , we share our vachana collections of Basavanna with meanings , one of the kannada philosopher and reformer of 12th century. These poems are so meaningful that it could change one's mind any day. We hope our readers too find it useful. If you like these good messages , do share it within your community.

"ನೆಲಗೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ , ಕುಲವೊಂದೆ ತನ್ನತಾನರಿದವಂಗೆ , ಫಲವೊಂದೆ ಷಡುದರುಶನ ಮುಕ್ತಿಗೆ , ನಿಲವೊಂದೆ ನಿಮ್ಮನರಿದವಂಗೆ ಕೂಡಲಸಂಗಮ ದೇವಾ"


Land is common to both a temple and outcasted
Water is common for both bathing and penance
Origin is one who has the knowledge of Brahman the one
Liberation is the final aim of all thoughts
Abode is same for one who knows you the lord



"ಜಾತಿವಿಡಿದು ಸೂತಕವನರಸುವೆ . ಜ್ಯೋತಿವಿಡಿದು ಕತ್ತಲೆಯನರಸುವೆ .
ಇದೇಕೋ ಮಣಿ ಎಂಬುದು ವಚನ , ನಮ್ಮ ಕೂಡಲಸಂಗನ ಶರಣರ ಪಾದ ಪುರುಷನ ನಂಬು ಕೆಡಬೇಡ ಮಾನವ"



How can one mingling with others of any religion become impure ?
Why does one having a lamp in hand , go in search of darkness ?
What a sad theory is this ? What a foolishness in saying one religion is ultimate & other is not , when the mind & soul showing bhakthi is same in everyone


"ಹಸಿರು ಎಕ್ಕೆಯ ಕಾಯ ಮೆಲಬಹುದೇ ? ನೀರಡಿಸಿ ವಿಷವ ನೀರೆಯಬಹುದೇ ? ಸುಣ್ಣದ ತುಯ್ಯಲ ಬಣ್ಣವೊಂದೆ ಎಂದರೆ ನೆಂಟತನಕ್ಕೆ ಉಣ್ಣಬಹುದೇ ? ಲಿಂಗ ಸಾರಾಯ ಸಜ್ಜನಗಲ್ಲದವರ ಕೂಡಲಸಂಗಮ ದೇವನೆಂತೊಲಿವನು ?"


Can one satisfy hunger by eating some leaves , instead it further causes side effects
Can limestone be used for eating just because it has the same color of soul spirit, instead it further causes side effects . Those who don't realize god's principles cannot win god's grace


Basavanna Vachana collections


"ಹಸಿದು ಬಂದ ಗಂಡನಿಗೆ ಉಣಲಿಕ್ಕದೆ ಬಡವಾದನೆಂದು ಮರಗುವ ಸತಿಯ ಸ್ನೇಹದಂತೆ ಬಂದುದನರಿಯಳು , ಇದ್ದುದ ಸವಿಯಳು , ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ ಕೂಡಲಸಂಗಮದೇವಾ"



"ಆಸೆಯಾಮಿಷ ತಾಮಸ , ಹುಸಿ , ವಿಷಯ , ಕುಟಿಲ , ಕುಹಕ ,ಕ್ರೋದಿ ,
ಕ್ಷುದ್ರ , ಮಿಥ್ಯೆ ಇವನೆಲ್ಲಾ ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಅದೇಕೆಂದೊಡೆ ನಿಮ್ಮತ್ತಲೆನ್ನ ಬರಲೀಯವು , ಇದು ಕಾರಣ ಇವೆಲ್ಲವ ಕಳೆದು ಎನ್ನ ಪಂಚಯ್ಯವರು ಭಕ್ತನ ಮಾಡು ಕೂಡಲಸಂಗಮದೇವ"


"ನೀನೊಲಿದರೆ ಕೊರಡು ಕೊನರುವುದಯ್ಯಾ , ನೀನೊಲಿದರೆ ಬರಡು ಹಯನಹುದಯ್ಯಾ , ನೀನೊಲಿದರೆ ವಿಷವೇ ಅಮೃತವುದಯ್ಯಾ , ನೀನೊಲಿದರೆ ಸಕಲ ಪಡಿಪದಾರ್ಥ ಇದರಲ್ಲಿರ್ಪು ಕೂಡಲಸಂಗಮದೇವ"



"ಎನಗೆ ನಿಮ್ಮ ನೆನಹಾದಾದಲೇ ಉದಯ , ಎನಗೆ ನಿಮ್ಮ ಮರಹಾದಾಗಲೇ ಅಸ್ತಮಾನ , ಎನಗೆ ನಿಮ್ಮ ನೆನಹವೇ ಜೇವನ , ಎನಗೆ ನಿಮ್ಮ ನೆನಹವೇ ಪ್ರಾಣ ತಂದೆ , ಸ್ವಾಮಿ ! ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆ ಒತ್ತಯ್ಯಾ , ಮನದಲ್ಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ"




"ಮನವೇ ಸರ್ಪ , ತನುವೆ ಹೇಳಿಗೆ , ಹಾವಿನೊಡತನ ಹುದುವಾಳಿಗೆ . ಇನಾವಾಗ ಕೊಂದಹುದೆಂದರಿಯೆ , ಇನಾವಾಗ ತಿಂದಿಹುದೆಂದರಿಯೆ ! ನಿಮ್ಮ ಪೂಜಿಸಬಲ್ಲೊಡೆ ಅದೇ ಗರುಡ ಕೂಡಲಸಂಗಮದೇವಾ"




"ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ , ತಂದೆ ; ಸುತ್ತಿಸುಳಿದು ನೋಡದಂತೆ ಕುರುಡನ ಮಾಡಯ್ಯಾ , ತಂದೆ ; ಮತ್ತೊಂದ ಕೇಳದಂತೆ ಮಾಡಯ್ಯಾ , ತಂದೆ ; ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೇಳಸದಂತೆ ಇರಿಸು ಕೂಡಲಸಂಗಮದೇವ"





"ಬಚ್ಚಲ ನೀರು ತಿಳಿದರೇನು ? ಸಲ್ಲದ ಹೊನ್ನು ಮತ್ತೆಲ್ಲಿದ್ದರೇನು ? ಆಕಾಶದ ಮಾವಿನ ಫಲವೆಂದರೇನು ? ಕೊಯ್ಯಲ್ಲಿಲ್ಲ, ಮೆಲ್ಲಲಿಲ್ಲಾ! ಕೂಡಲಸಂಗನ ಶರಣರ ಅನುಭವವಿಲ್ಲದವರು ಎಲ್ಲಿದ್ದರೇನು ? ಎಂತಾದರೇನು ?"



"ಕರಿಫನ ಅಂಕುಶ ಕಿರಿದೆನ್ನಬಹುದೇ ? ಬಾರದಯ್ಯಾ ,
ಗಿರಿಫನವಜ್ರ ಕಿರಿದೆನ್ನಬಹುದೇ ? ಬಾರದಯ್ಯಾ ,
ತಮಂದ ಘನಜ್ಯೋತಿ ಕಿರಿದೆನ್ನಬಹುದೇ ? ಬಾರದಯ್ಯಾ ,
ಮರಹುಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೇ ? ಬಾರದಯ್ಯಾ ,
ಕೂಡಲ ಸಂಗಮದೇವಾ"



"ಇಂದಿಗೆಂತು ನಾಲೆಗೆಂದು ಎಂದು ಬೆಂದೊಡಲ ಹೊರೆಯ ಹೋಯಿತೆನ್ನ ಸಂಸಾರ !
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲಾ , ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿ ಇಲ್ಲಾ , ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೇ ಕೊಂದುದಯ್ಯಾ ಈ ಮಾಯೆ ಕೂಡಲ ಸಂಗಮದೇವಾ"





"ಗೀತವ ಹಾಡಿದರೇನು ? ಶಾಸ್ತ್ರ ಪುರಾಣವ ಕೇಳಿದೊಡೇನು ?
ವೇದವೇದಾಂತವನೋದಿದೊಡೇನು ? ಮನವೊಲಿದು ಲಿಂಗ-ಜಂಗಮ
ಪುಜಿಸಲರಿಯದವರು ಎಲ್ಲ ಬಲ್ಲ ಅನುಭವಿಯಾದೊಡೇನು ?
ಭಕ್ತಿ ಇಲ್ಲದವರನೋಲ್ಲ ಕೂಡಲಸಂಗಮದೇವ !!
ದಯವಿಲ್ಲದ ಧರ್ಮ ಅದಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ. ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ"



Terms | Privacy | 2024 🇮🇳
–>